ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಮಹಾನಗರ ಪಾಲಿಕೆ ಮತ್ತು ಮಹಾನಗರ ಪಾಲಿಕೆ ನೌಕರರ ಸಂಘದ ವತಿಯಿಂದ ಪೌರ ಕಾರ್ಮಿಕರ ದಿನಾಚರಣೆ ಅಂಗವಾಗಿ ಗುರುವಾರ ನಗರದ ಡಿಆರ್ ಮೈದಾನದಲ್ಲಿ ಏರ್ಪಡಿಸಿದ್ದ ಪೌರ ಕಾರ್ಮಿಕರ ಅಥ್ಲೆಟಿಕ್ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಅವರು ಮಾತನಾಡಿ, ಕ್ರೀಡೆಯಲ್ಲಿ ಯಾರು ಗೆಲ್ಲುತ್ತಾರೆ ಯಾರು ಸೋಲುತ್ತಾರೆ ಎಂಬುದಕ್ಕಿಂತ ಸೋಲುವುದರಲ್ಲಿ ಗೆಲುವಿದೆ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. ಕ್ರೀಡೆ ಎಲ್ಲರಿಗೂ ಸಹಕಾರಿ ಎಂದರು.
ಕ್ರೀಡಾ ಮನೋಭಾವ ಜಾಸ್ತಿಯಾದರೆ ಎಲ್ಲರಿಗೂ ಸಹಕಾರಿ. ಭಾವನೆಗಳಿಗೆ ಶಕ್ತಿ ಸಿಗುವಂತಹ ಸಂದರ್ಭ. ಈ ನಿಟ್ಟಿನಲ್ಲಿ ಒಟ್ಟಾಗಿ ನಿಂತು ಒಳ್ಳೆಯ ಆಲೋಚನೆ ಮಾಡಿ ಒಂದು ರೂಪ ಕೊಟ್ಟಿದ್ದಾರೆ. ಮಹಾನಗರ ಪಾಲಿಕೆ ಆಡಳಿತ ವೃಂದ ಪೂರ್ತಿಯಾಗಿ ಸಹಕಾರ ನೀಡಿದ್ದಾರೆ. ಎಲ್ಲರಿಗೂ ಶುಭವಾಗಲಿ ಎಂದು ಆಶಿಸಿದರು.ಕಲ್ಯಾಣ ಭವನ ನಿರ್ಮಾಣ ತುಂಬಾ ದೀರ್ಘ ಕಾಲ ತೆಗೆದುಕೊಂಡಿದೆ. ಅದರ ಬಗ್ಗೆ ನಮಗೆ ವಿಷಾದವೂ ಇದೆ. ನೋವು ಇದೆ. ಪೌರಕಾರ್ಮಿಕರಿಗೆ ವಿಶೇಷವಾಗಿ ಮನೆಗಳು ಆಗುತ್ತಿವೆ. ಇಲ್ಲಿ ಕಂಟ್ರ್ಯಾಕ್ಟರ್ ಸಮಸ್ಯೆ ಆಗಿದ್ದಾನೆ. ಅವರಿಂದಲೇ ಮಾಡಿಸಬೇಕಾ ಅಥವಾ ಬೇರೆಯವರಿಂದ ಮಾಡಿಸಬೇಕಾ ಎಂಬುದು ದೊಡ್ಡ ಸಮಸ್ಯೆಯಾಗಿದೆ. ಆದಷ್ಟು ಬೇಗ ಈ ಎರಡು ಸಂಗತಿಗಳ ಬಗ್ಗೆ ಗಂಭೀರವಾಗಿ ಗಮನಹರಿಸುತ್ತೇವೆ ಎಂದು ಆಶ್ವಾಸನೆ ನೀಡಿದರು.
ಕ್ರೀಡಾಕೂಟದಲ್ಲಿ 100 ಮೀಟರ್ ಓಟ, ಗುಂಡು ಎಸೆತ, ಜಾವಲಿನ್, ಮ್ಯೂಸಿಕಲ್ ಚೇರ್ ಸೇರಿದಂತೆ ಇನ್ನಿತರ ಆಟಗಳನ್ನು ಆಯೋಜಿಸಲಾಗಿತ್ತು.