ಫಿಜಿಯೋ ಥೆರಪಿಯಿಂದ ರಕ್ತ ಸಂಚಾರ ಸುಲಲಿತ: ಹ್ಯಾನ್ಸಿ

KannadaprabhaNewsNetwork |  
Published : Jul 23, 2024, 12:30 AM IST
 ಥೆರಫಿ ಚಿಕಿತ್ಸಾ ಶಿಬಿರಕ್ಕೆ ಚಾಲನೆ- | Kannada Prabha

ಸಾರಾಂಶ

ಶೇ.೧೦೦ರಷ್ಟು ನ್ಯಾಚುರಲ್ ಥೆರಪಿ ಆಗಿದ್ದು, ಪ್ರತಿದಿನ ೩೦ ನಿಮಿಷ ಕೊಡುವ ಥೆರಪಿಯಿಂದ ಸುಮಾರು ೫ ಕಿ.ಮೀ.ನಡೆದಷ್ಟು ಪರಿಣಾಮ ಬೀರುತ್ತದೆ. ಆಗ ರಕ್ತ ಸಂಚಾರ ಸುಲಲಿತವಾಗುತ್ತದೆ.

ಕನ್ನಡಪ್ರಭ ವಾರ್ತೆ ಶಿರಾಳಕೊಪ್ಪ

ಎಲೆಕ್ಟ್ರೋ ಫಿಜಿಯೋ ಥೆರಪಿ ಇದೊಂದು ಮೆಡಿಕಲ್ ಅಪ್ರೂಡ್ ಥೆರಪಿ ಆಗಿದ್ದು, ಯಾವುದೇ ಅಡ್ಡ ಪರಿಣಾಮವಿಲ್ಲದಾಗಿದ್ದು, ಪ್ರತಿಯೊಬ್ಬರೂ ಉಪಯೋಗಿಸ ಬಹುದಾಗಿದೆ. ಈ ಥೆರಪಿ ೪೨ ದೇಶಗಳಲ್ಲಿ ಇದೆ. ಭಾರತದಲ್ಲಿ ಮೇಕ್ ಇನ್ ಇಂಡಿಯಾ ಅಡಿಯಲ್ಲಿ ಕಾರ್ಯನಿವರ್ಹಿಸುತ್ತಿದೆ ಎಂದು ಕಂಪನಿಯೋ ಸಲಹೆಗಾರ ಉನ್ನತ ಹ್ಯಾನ್ಸಿ ಹೇಳಿದರು.

ಶಿರಾಳಕೊಪ್ಪದ ಚೌಕಿಮಠ ರೇಣುಕಾಚಾರ್ಯ ಆಡಳಿತ ಮಂಡಳಿ ಹಾಗೂ ಕಂಪನಿಯೋ ಸಹಯೋಗದಲ್ಲಿ ರೇಣುಕಾಚಾರ್ಯ ಸಮುದಾಯ ಭವನದಲ್ಲಿ ಸೋಮವಾರ ಥೆರಪಿ ಚಿಕಿತ್ಸಾ ಶಿಬಿರ ಉದ್ಘಾಟಿಸಿ ಮಾತನಾಡಿದ ಅವರು, ೧೫ ದಿನ ಎರಡು ಹಂತದಲ್ಲಿ ನಡೆಯಲಿದೆ. ೧೨ ತರಹ ಚಿಕಿತ್ಸೆ ಕೊಡಲಾಗುತ್ತಿದೆ ಎಂದು ತಿಳಿಸಿದ್ದಾರೆ. ಶೇ.೧೦೦ರಷ್ಟು ನ್ಯಾಚುರಲ್ ಥೆರಪಿ ಆಗಿದ್ದು, ಪ್ರತಿದಿನ ೩೦ ನಿಮಿಷ ಕೊಡುವ ಥೆರಪಿಯಿಂದ ಸುಮಾರು ೫ ಕಿ.ಮೀ.ನಡೆದಷ್ಟು ಪರಿಣಾಮ ಬೀರುತ್ತದೆ. ಆಗ ರಕ್ತ ಸಂಚಾರ ಸುಲಲಿತವಾಗುತ್ತದೆ. ನಮ್ಮ ಅಂಗಾಗದ ನರಮಂಡಲ ಕೊನೆಗೊಳ್ಳುವದು ಪಾದಲ್ಲಿ, ನಾವು ಪಾದದಿಂದ ಕೊಡುವ ಚಿಕಿತ್ಸೆಯಿಂದ ಅಂಗಾಗದಲ್ಲಿ ರಕ್ತಸಂಚಾರ ಸುಲಲಿತವಾಗಲಿದೆ ಎಂದರು.

೧೦ ದಿನ ಚಿಕಿತ್ಸೆ ಪಡೆಯುವದರಿಂದ ಕಾಲು ಊತ ಮತ್ತು ಧೀರ್ಘಾವಧಿ ಸಮಸ್ಯೆ ಇದ್ದರೆ ಎರಡು ರೀತಿಯಲ್ಲಿ ಚಿಕಿತ್ಸೆ ಕೊಡಲಾಗುತ್ತಿದೆ. ರಕ್ತಸಂಚಾರ ಯಾವುದೇ ಔಷಧಿಯಿಂದ ಸರಿಹೋಗುವದಿಲ್ಲ, ಇಂಥಹ ಚಿಕಿತ್ಸೆಯಿಂದ ಮಾತ್ರ ಸಾಧ್ಯ. ಈ ಚಿಕಿತ್ಸೆಯನ್ನು ೮ ವರ್ಚ ಮೇಲ್ಪಟ್ಟ ಯಾರಾದರೂ ಪಡೆಯಬಹುದು. ಪ್ರದಿನ ಬೆಳಗ್ಗೆ ೮ ರಿಂದ ೧೧ರ ವರೆಗೆ ಹಾಗೂ ಸಂಜೆ ೪ರಿಂದ ೭ರ ವರೆಗೆ ನಡೆಯಲಿದೆ. ಈ ಚಿಕಿತ್ಸೆ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಪಡೆಯುವದು ಒಳ್ಳೆಯದು. ಒಂದು ವೇಳೆ ಊಟ-ತಿಂಡಿ ಮಾಡಿಕೊಂಡಿದ್ದರೆ ೨ ಗಂಟೆ ನಂತರ ಚಿಕಿತ್ಸೆ ಪಡೆಯಬಹುದಾಗಿದೆ ಎಂದು ತಿಳಿಸಿದರು.

ಪ್ರಾರಂಭದಲ್ಲಿ ರೇಣುಕಾಚಾರ್ಯ ಮಂದಿರದ ಕಾಯರ್ದರ್ಶಿ ಚಂದ್ರಯ್ಯ ಪ್ರಾಸ್ತಾವಿಕವಾಗಿ ಮಾತನಾಡಿ, ಇಂದಿನ ದಿನಗಳಲ್ಲಿ ಪ್ರತಿಯೊಂದು ಮನೆಯಲ್ಲಿಯೂ ಸಹ ಸಮಸ್ಯೆ ಇದ್ದೇ ಇರುತ್ತದೆ. ಹಾಗಾಗಿ ರೇಣುಕಾ ಮಂದಿರಕ್ಕೆ ಬಂದು ಉಚಿತ ಚಿಕಿತ್ಸೆ ಪಡೆದು ಆರೋಗ್ಯ ಸರಿಪಡಿಸಿಕೊಳ್ಳಲು ಉತ್ತಮ ಅವಕಾಶ ಸದುಪಯೋಗ ಪಡೆಯಿರಿ ಎಂದು ತಿಳಿಸಿದರು.

ಪುರಸಭೆ ಸದಸ್ಯ ಮಹಬಲ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆ ಅಧ್ಯಕ್ಷ ಸುರೇಶ ಸ್ವಾಮಿ ವಹಿಸಿದ್ದರು. ವೇದಿಕೆ ಮೇಲೆ ಮುರಗಯ್ಯ ಶಾಸ್ತ್ರಿ, ಶಿವಾನಂದಸ್ವಾಮಿ, ಆದಯ್ಯ ಸ್ವಾಮಿ, ರಂಗನಾಥ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗೌಡ ಸಾರಸ್ವತ ಬ್ರಾಹ್ಮಣ ಸೇವಾ ಸಂಘದ ವಾಗ್ದೇವಿ ಟವರ್ಸ್‌ಗೆ ಭೂಮಿ ಪೂಜೆ
ಆತ್ಮನಿರ್ಭರ ಭಾರತಕ್ಕೆ ಸ್ವದೇಶಿ ವಸ್ತು ಬಳಕೆ ಅಗತ್ಯ: ನಾರಾಯಣಸಾ ಭಾಂಡಗೆ