ಕನ್ನಡಪ್ರಭ ವಾರ್ತೆ ಮೈಸೂರು
ನಗರದ ವಿಜಯ ವಿಠ್ಠಲ ವಿದ್ಯಾಶಾಲೆಯಲ್ಲಿ ಗಣಿತೀಯ ನಿಯತಾಂಕ ಪೈ ದಿನ ಮತ್ತು ಭೌತಶಾಸ್ತ್ರಜ್ಞ ಆಲ್ಬರ್ಟ್ ಐನ್ ಸ್ಟೀನ್ ಅವರ ಜನ್ಮ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಪ್ರಸಿದ್ಧ ಗ್ರೀಕ್ ಗಣಿತಜ್ಞ ಆರ್ಕಿಮಿಡಿಸ್ ಪೈ ಹೆಚ್ಚು ನಿಖರವಾದ ಮೌಲ್ಯವನ್ನು ನಿರ್ಧರಿಸಲು ಗಮನಾರ್ಹ ಕೊಡುಗೆಗಳನ್ನು ನೀಡಿದರು ಎಂದರು.
ಭಾರತೀಯ ವಿಜ್ಞಾನ ಸಂಸ್ಥೆಯ ಭೌತಶಾಸ್ತ್ರಜ್ಞರ ಇತ್ತೀಚಿನ ಸಂಶೋಧನೆಯು ಪೈ ಗಾಗಿ ಹೊಸ ಸರಣಿ ಪ್ರಾತಿನಿಧ್ಯವನ್ನು ಪರಿಚಯಿಸಿದೆ, ಇದು ಕ್ವಾಂಟಮ್ ಭೌತಶಾಸ್ತ್ರದಲ್ಲಿ, ವಿಶೇಷವಾಗಿ ಹೆಚ್ಚಿನ ಶಕ್ತಿಯ ಕಣ ಚದುರುವಿಕೆಯಲ್ಲಿ ಲೆಕ್ಕಾಚಾರಗಳನ್ನು ಸರಳಗೊಳಿಸುತ್ತದೆ ಎಂದರು.ಆಲ್ಬರ್ಟ್ ಐನ್‌ಸ್ಟೀನ್ ಅವರು 20ನೇ ಶತಮಾನದ ಜರ್ಮನಿ ಮೂಲದ ಭೌತ ವಿಜ್ಞಾನಿ. ಅವರು ಒಬ್ಬ ಕಷ್ಟ ಜೀವಿ, ಚತುರಮತಿ ಹಾಗೂ ಶ್ರೇಷ್ಠ ಗಣಿತಜ್ಞ. ವಿಜ್ಞಾನ ಕ್ಷೇತ್ರಕ್ಕೆ ಅವರ ಕೊಡುಗೆ ಅಪಾರವಾದುದು. ಇವರು ಸಾಪೇಕ್ಷತಾ ಸಿದ್ಧಾಂತವನ್ನು ಜಗತ್ತಿನ ಮುಂದಿಟ್ಟವರು. ಕ್ವಾಂಟಮ್ ಮೆಕಾನಿಕ್ಸ್, ಸ್ಟ್ಯಾಟಿಸ್ಟಿಕಲ್ ಮೆಕಾನಿಕ್ಸ್ ಗೂ ವಿಶ್ವಶಾಸ್ತ್ರಗಳಲ್ಲಿ ಕೂಡ ಮಹತ್ತರವಾದ ಕಾಣಿಕೆ ನೀಡಿದ್ದಾರೆ. ದ್ಯುತಿ ವಿದ್ಯುತ್ ಪರಿಣಾಮ ಕುರಿತು ಇವರು ಮಂಡಿಸಿದ ವಾದ ಹಾಗೂ ಸೈದ್ಧಾಂತಿಕ ಭೌತಶಾಸ್ತ್ರಕ್ಕೆ ಇವರು ಸಲ್ಲಿಸಿದ ಸೇವೆಯನ್ನು ಪರಿಗಣಿಸಿ ಅವರಿಗೆ ನೊಬೆಲ್ ಪ್ರಶಸ್ತಿ ನೀಡಿ ಗೌರವಿಸಲಾಯಿತು ಎಂದು ಅವರು ವಿವರಿಸಿದರು.
ಪ್ರತಿಭಾ ಪಲ್ಲವ ಮಕ್ಕಳ ಬೇಸಿಗೆ ಶಿಬಿರ
ಕನಸು ರಂಗ ತಂಡದ ವತಿಯಿಂದ ಏ. 11 ರಿಂದ ಮೇ 9 ರವರೆಗೆ ಗೋಕುಲಂನ 3ನೇ ಹಂತದ ಸಾಂಸ್ಕೃತಿಕ ಭವನದಲ್ಲಿ ಪ್ರತಿಭಾ ಪಲ್ಲವ ಮಕ್ಕಳ ಬೇಸಿಗೆ ಶಿಬಿರ ಆಯೋಜಿಸಲಾಗಿದೆ.
ಬೇಸಿಗೆ ಶಿಬಿರದ ಆಯೋಜಕ ಶ್ರೇಯಸ್ ಮಾತನಾಡಿ 6 ರಿಂದ 14 ವರ್ಷದ ಮಕ್ಕಳು ಶಿಬಿರದಲ್ಲಿ ಭಾಗವಹಿಸಬಹುದು. ವಯೋಮಿತಿಗೆ ಅನುಗುಣವಾಗಿ ಗುಂಪು ರಚಿಸಿ ಶಿಬಿರ ನಡೆಸಲಾಗುವುದು. ಶಿಬಿರ ನಡೆಯುವ ಸ್ಥಳದಲ್ಲಿ ಬೆಳಗ್ಗೆ 10 ರಿಂದ ಸಂಜೆ 5 ಗಂಟೆವರೆಗೆ ನೋಂದಾಯಿಸಿಕೊಳ್ಳಲಾಗುವುದು ಎಂದು ಅವರು ಹೇಳಿದರು.