ಮುಧೋಳ : ಸುಮಾರು ನಾಲ್ಕು ದಶಕಗಳ ಸುದೀರ್ಘ ಅವಧಿಯ ಸಂಘರ್ಷದ ಬಳಿಕ ಮುಧೋಳ ಪ್ರಾಥಮಿಕ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕಿನ ಆಡಳಿತ ಚುಕ್ಕಾಣಿ ಹಿಡಿಯುವಲ್ಲಿ ಕಾಂಗ್ರೆಸ್ ಯಶಸ್ವಿಯಾಗಿದೆ. ಜ.19ರಂದು ನಡೆದ 14 ಸ್ಥಾನಗಳ ಆಡಳಿತ ಮಂಡಳಿಯಲ್ಲಿ 6 ಸ್ಥಾನಗಳಿಗೆ ಅವಿರೋಧ ಆಯ್ಕೆ ನಡೆದಿತ್ತು. ಉಳಿದ 8 ಸ್ಥಾನಗಳಿಗೆ ಮತದಾನ ನಡೆದಿತ್ತು. ಪ್ರಕರಣ ನ್ಯಾಯಾಲಯದ ಮೆಟ್ಟಿಲೇರಿ ಕೋರ್ಟ್ ಮಧ್ಯಂತರ ಆದೇಶ ನೀಡಿ ಮತ ಎಣಿಕೆಗೆ ತಡೆ ನೀಡಿತ್ತು. ಚುನಾವಣೆ ಪ್ರಕ್ರಿಯೆ ಮುಂದುವರಿಸಲು ನ್ಯಾಯಾಲಯ ಅನುಮತಿ ನೀಡಿದ್ದರಿಂದ ಭಾನುವಾರ ಮತ ಎಣಿಕೆ ನಡೆಯಿತು.
14 ಸ್ಥಾನಗಳಲ್ಲಿ 10 ಸ್ಥಾನಗಳಲ್ಲಿ ಕಾಂಗ್ರೆಸ್ ಬೆಂಬಲಿತರು ಆಯ್ಕೆಯಾಗುವ ಮೂಲಕ ಬ್ಯಾಂಕಿನ ಅಧಿಕಾರ ಚುಕ್ಕಾಣಿ ಹಿಡಿದರು. ಬಿಜೆಪಿ ಕೇವಲ 4 ಸ್ಥಾನಗಳಿಗೆ ಸೀಮಿತವಾಯಿತು. 1985 ರಿಂದ ಜನತಾ ಪಕ್ಷ, ಜನತಾದಳ, ಬಿಜೆಪಿ ವಶದಲ್ಲಿದ್ದ ಪೀಕಾರ್ಡ್ ಬ್ಯಾಂಕ್ 40 ವರ್ಷಗಳ ನಂತರ ಕಾಂಗ್ರೆಸ್ ವಶವಾಗಿದೆ. ಅವಿರೋಧ ಆಯ್ಕೆ:
ಮಹಾಲಿಂಗಪೂರ ಸಾಲಗಾರ ಹಿಂದುಳಿದ ಅ ವರ್ಗ ಕ್ಷೇತ್ರದಿಂದ ಮಹಾಲಿಂಗಪ್ಪ ನಾಯಿಕ, ಲೋಕಾಪುರ ಸಾಲಗಾರ ಪರಿಶಿಷ್ಠ ಪಂಗಡ ಕ್ಷೇತ್ರದಿಂದ ಗೋಪಾಲ ಆನೆಗುದ್ದಿ , ಕಸಬಾ ಜಂಬಗಿ ಮಹಿಳಾ ಕ್ಷೇತ್ರದಿಂದ ಸಾವಿತ್ರಿ ಪಾಟೀಲ, ಭಂಟನೂರ ಸಾಲಗಾರ ಸಾಮಾನ್ಯ ಕ್ಷೇತ್ರದಿಂದ ಹನಮಪ್ಪ ಪಚ್ಚನ್ನವರ, ಮುಧೋಳ ಸಾಲಗಾರ ಮಹಿಳಾ ಕ್ಷೇತ್ರದಿಂದ ಅಕ್ಕಾಬಾಯಿ ಮೋರೆ, ಉತ್ತೂರ ಸಾಲಗಾರ ಸಾಮಾನ್ಯ ಕ್ಷೇತ್ರದಿಂದ ಗೋವಿಂದಪ್ಪ ಹಿಪ್ಪಲಕೊಪ್ಪ ಅವಿರೋಧ ಆಯ್ಕೆಯಾದರು.
ಚುನಾಯಿತ ಸದಸ್ಯರು:
ದಾದನಟ್ಟಿ ಸಾಲಗಾರ ಸಾಮಾನ್ಯ ಕ್ಷೇತ್ರದಿಂದ ಮಂಜುನಾಥ ಗಲಗಲಿ, ಮಾಚಕನೂರ ಸಾಲಗಾರ ಸಾಮಾನ್ಯ ಕ್ಷೇತ್ರದಿಂದ ಗಿರೀಶ ಪರಡ್ಡಿ, ಮೆಟಗುಡ್ಡ ಸಾಲಗಾರ ಸಾಮಾನ್ಯ ಕ್ಷೇತ್ರದಿಂದ ಸತ್ತೆಪ್ಪ ಮಾಸರಡ್ಡಿ, ಹಲಗಲಿ ಸಾಲಗಾರ ಸಾಮಾನ್ಯ ಕ್ಷೇತ್ರದಿಂದ ರಾಜೇಂದ್ರ ಬಿ. ಪಾಟೀಲ, ಶಿರೋಳ ಸಾಲಗಾರ ಸಾಮಾನ್ಯ ಕ್ಷೇತ್ರದಿಂದ ಶಿದ್ದು ನಾಗರಡ್ಡಿ, ಗುಲಗಾಲ ಜಂಬಗಿ ಸಾಲಗಾರ ಹಿಂದುಳಿದ ಬ ವರ್ಗ ಕ್ಷೇತ್ರದಿಂದ ಹಣಮಂತ ಹಲಗಲಿ, ಬೆಳಗಲಿ ಸಾಲಗಾರ ಪ. ಜಾತಿ ಕ್ಷೇತ್ರದಿಂದ ಮಲ್ಲಪ್ಪ ಮೇಗಾಡಿ, ಬಿನ್ ಸಾಲಗಾರ ಕ್ಷೇತ್ರದಿಂದ ಬಸನಗೌಡ ನಾಡಗೌಡ ಆಯ್ಕೆಯಾಗಿದ್ದಾರೆ ಎಂದು ಚುನಾವಣೆ ಅಧಿಕಾರಿ ಎಸ್.ಕೆ ಸಾರವಾಡ ತಿಳಿಸಿದ್ದಾರೆ.
ನಾಲ್ಕು ದಶಕಗಳ ಬಳಿಕ ಕೈಗೆ ಅಧಿಕಾರ:
14 ಸ್ಥಾನಗಳಲ್ಲಿ 10 ಸ್ಥಾನಗಳಲ್ಲಿ ಕಾಂಗ್ರೆಸ್ ಬೆಂಬಲಿತರು ಆಯ್ಕೆಯಾಗುವ ಮೂಲಕ ಬ್ಯಾಂಕಿನ ಅಧಿಕಾರ ಚುಕ್ಕಾಣಿ ಹಿಡಿದರು. ಬಿಜೆಪಿ ಕೇವಲ 4 ಸ್ಥಾನಗಳಿಗೆ ಸೀಮಿತವಾಯಿತು. 1985 ರಿಂದ ಜನತಾ ಪಕ್ಷ, ಜನತಾದಳ, ಬಿಜೆಪಿ ವಶದಲ್ಲಿದ್ದ ಪೀಕಾರ್ಡ್ ಬ್ಯಾಂಕ್ 40 ವರ್ಷಗಳ ನಂತರ ಕಾಂಗ್ರೆಸ್ ವಶವಾಗಿದೆ.