ತಳಿರು ತೋರಣಗಳಿಂದ ದೇವಸ್ಥಾನಗಳ ಸಿಂಗಾರ । ವಿಶೇಷ ಪೂಜೆ, ಪ್ರಸಾದ ವಿನಿಯೋಗಕನ್ನಡಪ್ರಭ ವಾರ್ತೆ ಚಾಮರಾಜನಗರ
ಹನೂರು ತಾಲೂಕಿನ ಶಿರಗೋಡು ಗ್ರಾಮದ ಶ್ರೀ ಲಕ್ಷ್ಮಿ ವೆಂಕಟೇಶ್ವರ ದೇವಾಲಯದಲ್ಲಿ ವೈಕುಂಠ ಏಕಾದಶಿ ಅಂಗವಾಗಿ ಏರ್ಪಡಿಸಲಾಗಿದ್ದ ಸ್ವಾಮಿಗೆ ಬೆಳಗಿನ ಜಾವ ವಿಶೇಷ ಅಭಿಷೇಕ ಹೂವಿನ ಅಲಂಕಾರ ತಳಿರು ತೋರಣಗಳಿಂದ ಸಿಂಗರಿಸಲಾಗಿತ್ತು. ಮಹಾಮಂಗಳಾರತಿ ಪೂಜೆ ಸಲ್ಲಿಸಲಾಯಿತುಭಕ್ತರ ದಂಡು:
ವೈಕುಂಠ ಏಕಾದಶಿ ಪ್ರಯುಕ್ತ ವೆಂಕಟೇಶ್ವರನ ದರ್ಶನ ಪಡೆಯಲು ಮಹಾಲಿಂಗನ ಕಟ್ಟೆ ಉದ್ದನೂರು ಬೆಳತ್ತೂರು ಹನೂರು ಲೊಕ್ಕನಹಳ್ಳಿ ಹಾಗೂ ಸುತ್ತಮುತ್ತಲಿನ ಗ್ರಾಮಗಳಿಂದ ಭಕ್ತರು ಬೆಳಗಿನಿಂದಲೇ ವೆಂಕಟೇಶ್ವರ ದರ್ಶನ ಪಡೆದು ದೇವಾಲಯದಲ್ಲಿ ನಿರ್ಮಾಣ ಮಾಡಿದ ವೈಕುಂಠ ಮಹಾದ್ವಾರವನ್ನು ಪ್ರವೇಶಿಸಿ ದೇವರ ದರ್ಶನ ಪಡೆದು ಪುನೀತರಾದರು.ಪ್ರಸಾದ ವಿನಿಯೋಗ:
ವಿವಿಧ ಗ್ರಾಮಗಳಿಂದ ಆಗಮಿಸಿದ್ದ ಭಕ್ತರಿಗೆ ಪ್ರಸಾದ ವಿನಿಯೋಗ ಮಾಡಲಾಯಿತುಗುಡಿ ಹಟ್ಟಿ ವೆಂಕಟೇಶ್ವರ ದೇವಾಲಯದಲ್ಲಿ ವಿಶೇಷ ಪೂಜೆ:
ಸಮೀಪದ ಬೂದುಬಾಳು ಗುಡಿ ಹಟ್ಟಿ ಶ್ರೀ ವೆಂಕಟೇಶ್ವರ ದೇವಾಲಯದಲ್ಲಿ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿ ತುಳಸಿ ಹಾಗೂ ವಿವಿಧ ಹೂಗಳಿಂದ ಅಲಂಕಾರ ಮಾಡಲಾಗಿತ್ತು ಮಹಾಮಂಗಳಾರತಿಯೊಂದಿಗೆ ನಡೆದ ಪೂಜೆ ನೆರಳಿದ್ದ ಭಕ್ತರು ಕಣ್ತುಂಬಿ ಕೊಂಡರು ಭಕ್ತರಿಗೆ ಪ್ರಸಾದ ವಿನಿಯೋಗ ಮಾಡಲಾಯಿತುಧನುರ್ಮಾಸ ಪೂಜೆ:
ಪಟ್ಟಣದ ಶ್ರೀ ಬೆಟ್ಟಳ್ಳಿ ಮಾರಮ್ಮ ದೇವಾಲಯ ಹಾಗೂ ಮೈಸೂರು ಮಾರಮ್ಮನ ದೇವಾಲಯ ಆಂಜನೇಯ ಸ್ವಾಮಿ ದೇವಾಲಯ ಚೆಲುವನಾರಾಯಣ ಸ್ವಾಮಿ ದೇವಾಲಯ ವಿವಿಧ ಶಾಲೆಗಳಲ್ಲಿ ಧನುರ್ಮಾಸ ವಿಶೇಷ ಪೂಜೆ, ಏಕಾದಶಿ ಪೂಜೆ ಏರ್ಪಡಿಸಲಾಗಿತ್ತು.ಮಧ್ಯರಂಗನಾಥಸ್ವಾಮಿ ದೇವಾಲಯದಲ್ಲಿ ವಿಶೇಷ ಪೂಜೆಕೊಳ್ಳೆಗಾಲ: ವೈಕುಂಠ ಏಕಾದಶಿ ಪ್ರಯುಕ್ತ ಶನಿವಾರ ಇಲ್ಲಿನ ಮಧ್ಯರಂಗನಾಥಸ್ವಾಮಿ ದೇವಾಲಯದಲ್ಲಿ ವಿಶೇಷ ಪೂಜೆ ನಡೆಯಿತು.ತಾಲೂಕಿನ ಶಿವನಸಮುದ್ರದ ಶ್ರೀ.ಮದ್ಯರಂಗನಾಥಸ್ವಾಮಿ ದೇವಾಲಯದಲ್ಲಿ ಮೂರ್ತಿಯನ್ನು ಹೂವಿನಿಂದ ಅಲಂಕೃತಗೊಳಿಸಿ ಪೂಜೆ ಸಲ್ಲಿಸಲಾಯಿತು.ದೇವಾಲಯದಲ್ಲಿ ಸುಪ್ರಪಾತ ಸೇವೆ, ಸಹಸ್ತಾರ ನಾಮ, ನಿತ್ಯ ಪೂಜೆಯನ್ನು ಸಲ್ಲಿಸಲಾಯಿತು. ಬಳಿಕ ಭಕ್ತರ ಅನುಕೂಲಕ್ಕಾಗಿ ಸ್ವರ್ಗದ ಬಾಗಿಲನ್ನು ತೆರಯಲಾಯಿತು.ಇಂದಿನ ಪೂಜಾಕೈಕರ್ಯವನ್ನು ಅರ್ಚಕರಾದ ಮಾಧವ ಭಟ್ಟರು, ಶ್ರೀಧರ್ ಭಟ್ಟರು, ಪ್ರಶಾಂತ್ ಭಟ್ಟರು ನೆರವೇರಿಸಿಕೊಟ್ಟರು.ಗಣ್ಯರು ಭೇಟಿ:ಹನೂರು ಕ್ಷೇತ್ರದ ಶಾಸಕ ಎಂ.ಆರ್.ಮಂಜುನಾಥ್, ಮಾಜಿ ಸಚಿವ ಎಚ್.ಡಿ.ರೇವಣ್ಣ, ಮಳ್ಳವಳ್ಳಿ ಶಾಸಕ ನರೇಂದ್ರಸ್ವಾಮಿ, ಮಾಗಡಿ ಶಾಸಕ ಬಾಲಕೃಷ್ಣ, ಚಾಮರಾಜನಗರ ಶಾಸಕ ಪುಟ್ಟರಂಗಶೆಟ್ಟಿ, ಮಾಜಿ ಶಾಸಕ ನರೇಂದ್ರ, ಶ್ರೀರಂಗಪಟ್ಟಣದ ಬಂಡಿಸಿದ್ದೇಗೌಡ, ಕೊಳ್ಳೇಗಾಲ ಉಪವಿಭಾಗಾಧಿಕಾರಿ ಮಹೇಶ್, ತಹಶೀಲ್ದಾರ್ ಮಂಜುಳಾ, ಮುಜರಾಯಿ ಇಲಾಖೆಯ ಇಒ ಸುರೇಶ್ ಸೇರಿದಂತೆ ಅನೇಕ ಗಣ್ಯರು ದೇವಾಲಯಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು.ಕಾಮಗಾರಿ ವೀಕ್ಷಣೆ:ಕಳೆದ ಮೂರು ವರ್ಷಗಳಿಂದ ಮದ್ಯರಂಗನಾಥಸ್ವಾಮಿ ದೇವಾಲಯ ಸುಮಾರು ಎರಡೂವರೆ ಕೋಟಿ ಅನುದಾನದಲ್ಲಿ ಜೀರ್ಣೋದ್ಧಾರ ಕಾಮಗಾರಿ ನಡೆಯುತ್ತಿದ್ದು ಸ್ಥಳಕ್ಕೆ ಕ್ಷೇತ್ರದ ಶಾಸಕ ಎಂ.ಆರ್.ಮಂಜುನಾಥ್ ಅವರು ಭೇಟಿ ನೀಡಿ ಪರಿಶೀಲಿಸಿ ಮಾರ್ಚ್ ಅಥವಾ ಏಪ್ರಿಲ್ ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳಿಸಿ ಮದ್ಯರಂಗನಾಥಸ್ವಾಮಿ ದೇವಾಲಯದ ಜೀರ್ಣೋದ್ಧಾರಕ್ಕೆ ಸಿದ್ದತೆ ಮಾಡಿಕೊಳ್ಳಲು ಸೂಚಿಸಿದರು.ಶ್ರೀ.ಮದ್ಯರಂಗನಾಥಸ್ವಾಮಿ ದೇವಾಲಯದ ಗರ್ಭಗುಡಿ ಹಾಗೂ ದೇವಸ್ಥಾನದ ಕೆಲಸಗಳನ್ನು ಶೀಘ್ರ ಮುಕ್ತಾಯಗೊಳಿಸಿ ಭಕ್ತರ ದರ್ಶನಕ್ಕೆ ಅವಕಾಶ ಕಲ್ಪಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.ದೇವಸ್ಥಾನದ ಮುಂದಿನ ಮೂಲ ತುಳಸಿಕಟ್ಟೆ ಹಾಗೂ ರಂಗಮಂದಿರವನ್ನು ತಮಿಳುನಾಡಿನ ಶ್ರೀರಂಗಂ ದೇವಾಲಯದಂತೆ ಅಭಿವೃದ್ಧಿಗೊಳಿಸಿ, ದೇವಸ್ಥಾನದ ಪಾಕಶಾಲೆ ಹಾಗೂ ಸ್ಥಗಿತವಾಗಿರುವ ಕಾಮಗಾರಿಯನ್ನು ಮುಗಿಸಿ ಹಾಗೂ ಭಕ್ತರ ವಾಹನ ನಿಲುಗಡೆ ಸ್ಥಳವನ್ನು ನಿಗದಿ ಮಾಡಿ ಎಂದು ಹೇಳಿದರು.
ಹನೂರು ಸಮೀಪದ ಶಿರ್ಗೋಡು ಗ್ರಾಮದ ಶ್ರೀ ಲಕ್ಷ್ಮಿ ವೆಂಕಟೇಶ್ವರ ದೇವಾಲಯದಲ್ಲಿ ವೈಕುಂಠ ಏಕಾದಶಿ ಪ್ರಯುಕ್ತ ಸ್ವಾಮಿಗೆ ವಿಶೇಷ ಪೂಜೆ ನಡೆಯಿತು.