ಶೇಷಮೂರ್ತಿ ಅವಧಾನಿ
ಹೀಂಗ ನಮ್ಮನ್ನ ಅಪಮಾನ ಮಾಡಬಾರದಿತ್ತು, ಚಿಲ್ರೆ ಕಾಸು ಕೈಗೆ ತುರುಕಿ ಭಿಕ್ಷುಕರನ್ನಾಗಿ ಮಾಡಲು ಹೊಂಟದೇನ್ ಈ ಸರ್ಕಾರ? ಪರಿಹಾರ ಕೊಡೋ ಮನಸ್ಸಿದ್ರೂ ಖಜಾನೆಯಲ್ಲಿ ದುಡ್ಡಿಲ್ಲಂತ ಸುಮ್ಮನಿರಬಹುದಿತ್ತು. ಕಂಗೆಟ್ಟವರನ್ನೇ ಭಿಕ್ಷುಕರಾಗಿಸುವ, ಜೀತದಾಳಾಗಿಸುವ ಧೋರಣೆ ಸರ್ಕಾರದ್ದು, ಎಂಬುದು ಅನ್ನದಾತನ ಅಳಲು.
ಬರಗಾಲ ವಿಚಾರ ಚರ್ಚಿಸಲು ಇತ್ತೀಚೆಗೆ 4 ದಿನಗಳ ವಿಶೇಷ ಅಧಿವೇಶನ ನಡೆಸಿ ರೈತರಿಗೆ 2, 500 ರು. ಇನ್‌ಪುಟ್ ಸಬ್ಸಿಡಿ ಘೋಷಿಸಿರುವ ಸರ್ಕಾರದ ಕ್ರಮ ತೊಗರಿ ಕಣಜದ ರೈತರನ್ನು ಕೆರಳಿಸಿದ್ದು, ರೈತ ವಿರೋಧಿ ಧೋರಣೆ ಖಂಡಿಸುತ್ತಿದ್ದಾರೆ. ಅಧಿವೇಶನ ಕರೆದು ತೀರ್ಮಾನ ಮಾಡ್ತೀವಿ ಎಂದು ನೀಡಿದ್ದ ಹೇಳಿಕೆ ತೊಗರಿ ರೈತ ಸಮೂಹದಲ್ಲಿ ಹೊಸ ನಿರೀಕ್ಷೆ ಮೂಡಿಸಿತ್ತು.ಸಿಎಂ ಹೇಳಿಕೆಯ ಹಿನ್ನೆಲೆ ವಿಶೇಷ ಅಧಿವೇಶನ ಐತಿಹಾಸಿಕ ಪರಿಹಾರ ಅಥವಾ ಬೆಳೆ ಸಾಲ ಮನ್ನಾ ಘೋಷಣೆಗೆ ಸಾಕ್ಷಿಯಾಗಬಹುದೆಂದು ರೈತ ಸಮುದಾಯ ಇಟ್ಟುಕೊಂಡಿದ್ದ ನಿರೀಕ್ಷೆ ಇದೀಗ ಹುಸಿಯಾಗಿದೆ. ಕೇವಲ ₹2,500 ಪರಿಹಾರ ಘೋಷಿಸಿ ಸರ್ಕಾರ ರೈತರ ನಿರೀಕ್ಷೆಗಳನ್ನು ಹೊಸಕಿ ಹಾಕಿದೆ.
ರೈತರು ಬರದಿಂದ ಕಂಗೆಟ್ಟಿರುವಾಗ ಸರ್ಕಾರ ಪ್ರತಿ ಎಕರೆಗೆ ಕನಿಷ್ಠ ಪಕ್ಷ 25 ಸಾವಿರ ರು. ನೆರವಾದರೂ ನೀಡುವ ನಿರೀಕ್ಷೆಯಲ್ಲಿದ್ದರು. ಆದರೆ ರಾವಣನ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ ಎಂಬಂತೆ ಸರ್ಕಾರದ ಪರಿಹಾರ ಘೋಷಣೆಯಾಗಿದೆ ಎಂದು ಪ್ರಗತಿಪರ ರೈತ ಚಂದ್ರಶೇಖರ ಹಿರೇಮಠ ಕನ್ನಡಪ್ರಭ ಜೊತೆ ಮಾತನಾಡಿ ಅಸಮಾಧಾನ ಹೊರಹಾಕಿದ್ದಾರೆ.
----
- ಚಂದ್ರಶೇಖರ ಹಿರೇಮಠ, ಅಧ್ಯಕ್ಷರು, ಶ್ರಮಜೀವಿಗಳ ವೇದಿಕೆ, ಕಲಬುರಗಿ
ರೈತರ ಗೋಳು ಇವರಿಗೆ ಗೊತ್ತಿಲ್ಲ. ಈಗಾಗಲೇ ಜಿಲ್ಲೆಯಲ್ಲಿ ಆಳಂದ, ಅಫಜಲ್ಪುರ, ಜೇವರ್ಗಿ ಇಲ್ಲೆಲ್ಲಾ ಸಾಲಸೋಲಕ್ಕಂಜಿ ರೈತರು ಸಾವನ್ನಪ್ಪುತ್ತಿದ್ದಾರೆ. ಭೀಕರ ಬರಗಾಲ ಆವರಿಸಿದ್ದರೂ, ಚಿಲ್ಲರೆ ಪರಿಹಾರ ನೀಡುತ್ತಿದ್ದಾರೆ. ಆಳುವವರ ಈ ಚಿಲ್ಲರೆ ಧೋರಣೆಯನ್ನು ನಾವು ರೈತರು ಬಲವಾಗಿ ಖಂಡಿಸುತ್ತೇವೆ.
--
ರಾಜಕುಮಾರ್ ಪಾಟೀಲ್ ತೇಲ್ಕೂರ್, ಮಾಜಿ ಶಾಸಕರು, ಸೇಡಂ
----ರೈತರು ತೀವ್ರ ಸಂಕಷ್ಟದಲ್ಲಿದ್ದಾರೆ, ಕಳೆದ ವರ್ಷ ಪರಿಹಾರದಲ್ಲಿ ರೈತರಿಗೆ ಮಾಡಿದ ತಾರತಮ್ಯ ಈ ವರ್ಷ ಮಾಡದೆ ರಾಜಕೀಯ ರಹಿತವಾಗಿ, ಪಕ್ಷಾತೀತವಾಗಿ ಕೂಡಲೇ ಎಲ್ಲಾ ರೈತರಿಗೆ ಪರಿಹಾರ ವಿತರಿಸಬೇಕು .
ನೊಂದ ರೈತರು, ತೊಗರಿ ಕಣಜ, ಕಲಬುರಗಿ