ಪಿಜೆ ಬಡಾವಣೆ ಆಸ್ತಿಗಳು ವಕ್ಫ್ ಹೆಸರಿನಲ್ಲಿಲ್ಲ

KannadaprabhaNewsNetwork |  
Published : Nov 25, 2024, 01:03 AM IST
24ಕೆಡಿವಿಜಿ7-ದಾವಣಗೆರೆ ವನಿತಾ ಸಮಾಜದಲ್ಲಿ ಮಕ್ಕಳ ದಿನಾಚರಣೆಯಲ್ಲಿ ಶ್ರೀ ಸಿದ್ದಗಂಗಾ ಸಂಯುಕ್ತ ಪ್ರೌಢಶಾಲಾ ವಿದ್ಯಾರ್ಥಿನಿ ಯಶಸ್ವಿನಿ ಅವರನ್ನು ದೂಡಾ ಅಧ್ಯಕ್ಷ ದಿನೇಶ ಕೆ.ಶೆಟ್ಟಿ, ಮೇಯರ್ ಕೆ.ಚಮನ್ ಸಾಬ್ ಇತರರು ಸನ್ಮಾನಿಸಿದರು. | Kannada Prabha

ಸಾರಾಂಶ

ದಾವಣಗೆರೆ: ಪಿಜೆ ಬಡಾವಣೆ ನಿವಾಸಿಗಳಿಗೆ ಯಾವುದೇ ಭಯ, ಆತಂಕ ಬೇಡ ಎಂಬ ಭರವಸೆ ನೀಡಿದ್ದಂತೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್‌ ರ ಜನಪರ ಕಾಳಜಿಯಿಂದಾಗಿ ಆಸ್ತಿಗಳು ಅವುಗಳ ಮಾಲೀಕರ ಹೆಸರಿಗೆ ವೈಯಕ್ತಿಕ ಆಸ್ತಿಗಳಾಗಿ ಮರು ನಮೂದಾಗಿದೆ ಎಂದು ದೂಡಾ ಅಧ್ಯಕ್ಷ ದಿನೇಶ ಕೆ.ಶೆಟ್ಟಿ ತಿಳಿಸಿದ್ದಾರೆ.

ದಾವಣಗೆರೆ: ಪಿಜೆ ಬಡಾವಣೆ ನಿವಾಸಿಗಳಿಗೆ ಯಾವುದೇ ಭಯ, ಆತಂಕ ಬೇಡ ಎಂಬ ಭರವಸೆ ನೀಡಿದ್ದಂತೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್‌ ರ ಜನಪರ ಕಾಳಜಿಯಿಂದಾಗಿ ಆಸ್ತಿಗಳು ಅವುಗಳ ಮಾಲೀಕರ ಹೆಸರಿಗೆ ವೈಯಕ್ತಿಕ ಆಸ್ತಿಗಳಾಗಿ ಮರು ನಮೂದಾಗಿದೆ ಎಂದು ದೂಡಾ ಅಧ್ಯಕ್ಷ ದಿನೇಶ ಕೆ.ಶೆಟ್ಟಿ ತಿಳಿಸಿದ್ದಾರೆ.

ನಗರದ ಪಿಜೆ ಬಡಾವಣೆಯ ವನಿತಾ ಸಮಾಜದಲ್ಲಿ ಭಾನುವಾರ ಜಿಲ್ಲಾ ಶಿಶು ಕಲ್ಯಾಣ ಮಂಡಳಿಯಿಂದ ಮಕ್ಕಳ ದಿನಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ಮಕ್ಕಳ ಮೇಳ ಉದ್ಘಾಟಿಸಿ ಮಾತನಾಡಿದ ಅವರು, ಪಿಜೆ ಬಡಾವಣೆಯ 4.13 ಎಕರೆಯ ಯಾವುದೇ ಆಸ್ತಿ ವಕ್ಫ್ ಹೆಸರಿನಲ್ಲಿಲ್ಲ. ಅವುಗಳ ಮಾಲೀಕರಿಗೆ ಹೆಸರಿಗೆ ಆಗಿವೆ ಎಂದರು.

ಹಿಂದೆ ದಾಖಲೆಗಳಲ್ಲಿ ಇದ್ದಂತಹ ರಿ.ಸ.ನಂ. ಸಹ ಬದಲಾಗಿದೆ. ಸರ್ಕಾರಿ ಖರಾಬು ಎಂಬುದಾಗಿ ಪಹಣಿಯಲ್ಲಿ ತಿದ್ದುಪಡಿಯಾಗಿದೆ. ಪಿಜೆ ಬಡಾವಣೆಯ 4.13 ಎಕರೆ ವಕ್ಫ್‌ಗೆ ಸೇರಿದೆಯೆಂಬ ಸುದ್ದಿ ಹರಡಿತ್ತು. ಇದೇ ವಿಚಾರವಾಗಿ ನಾವು ಸಭೆ ಮಾಡಿ, ಸ್ಪಷ್ಟನೆ ನೀಡಿದ್ದೆವು. ಇದೀಗ ಸರ್ಕಾರಿ ದಾಖಲೆಗಳಲ್ಲೇ ಅದು ಯಾರದ್ದೇ ಸ್ವತ್ತು ಅಲ್ಲ. ಆಯಾ ಜನರ ವೈಯಕ್ತಿಕ ಆಸ್ತಿಗಳೆಂಬುದಾಗಿ ನಮೂದಾಗಿದೆ. ಈ ಬಗ್ಗೆ ಸರ್ಕಾರಿ ದಾಖಲೆಗಳನ್ನು ಮಾಧ್ಯಮಗಳಿಗೂ ಬಿಡುಗಡೆ ಮಾಡಿದ್ದೇನೆ ಎಂದು ಹೇಳಿದರು.

ಪಿಜೆ ಬಡಾವಣೆಯ 4.13 ಎಕರೆ ವಕ್ಫ್‌ಗೆ ಸೇರಿಲ್ಲ. ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನರ ಕಾಳಜಿಯಿಂದಾಗಿ ರಿ.ಸ.ನಂ. ಸಹ ಬದಲಾಗಿದೆ. ಪಿಜೆ ಬಡಾವಣೆಯ ನಿವಾಸಿಗಳು ಯಾವುದೇ ಆತಂಕಪಡಬೇಕಿಲ್ಲ. ಯಾವುದೇ ಯೋಚನೆಯನ್ನೂ ಮಾಡಬೇಕಿಲ್ಲ. ನಿಮ್ಮ ನಿಮ್ಮ ಆಸ್ತಿಗಳು ನಿಮ್ಮ ಹೆಸರಿನಲ್ಲೇ ಇರುತ್ತದೆಯೇ ಹೊರತು, ಬೇರೆಯವರಿಗೆ ಹೋಗುವುದಿಲ್ಲ. ವಕ್ಫ್‌ ಮಂಡಳಿ ಹೆಸರಿಗೂ ಇಲ್ಲ. ನಿಮ್ಮ ಆಸ್ತಿ ನಿಮ್ಮ ಹೆಸರಿನಲ್ಲೇ ಆಗಿವೆ ಎಂದು ಸ್ಪಷ್ಟಪಡಿಸಿದರು.

ಪ್ರಸ್ತುತ ಸ್ಪರ್ಧಾತ್ಮಕ ಜಗತ್ತಿನಲ್ಲಿ ವಿದ್ಯಾರ್ಥಿಗಳು ಶ್ರಮಪಟ್ಟು ಓದಿ, ಉಜ್ವಲ ಭವಿಷ್ಯವನ್ನು ಕಟ್ಟಿಕೊಳ್ಳಬೇಕು. ಇದು ಸ್ಪರ್ಧಾತ್ಮಕ ಜಗತ್ತು, ಅದಕ್ಕೆ ತಕ್ಕಂತೆ ವಿದ್ಯಾರ್ಥಿ, ವಿದ್ಯಾರ್ಥಿನಿಯರೂ ಉತ್ತಮವಾಗಿ ಓದಿ, ಸಾಧನೆ ಮೆರೆಯಬೇಕು ಎಂದರು.

ಮೇಯರ್ ಕೆ.ಚಮನ್ ಸಾಬ್ ಮಾತನಾಡಿದರು.

ಅಧ್ಯಕ್ಷತೆ ವಹಿಸಿದ್ದ ಶ್ರೀ ಸಿದ್ಧಗಂಗಾ ಸಂಯುಕ್ತ ಪ್ರೌಢಶಾಲೆಯ ವಿದ್ಯಾರ್ಥಿನಿ ಯಶಸ್ವಿನಿ ಅವರನ್ನು ಸನ್ಮಾನಿಸಲಾಯಿತು. ಜಿಲ್ಲಾ ಶಿಶು ಕಲ್ಯಾಣ ಮಂಡಳಿ ಅಧ್ಯಕ್ಷೆ ಉಷಾ ರಂಗನಾಥ, ಗಾಯತ್ರಿ ಜಗನ್ನಾಥ, ನಂದಿನಿ ಗಂಗಾಧರ ಇತರರು ಇದ್ದರು. ಪ್ರೇಮಾಲಯ ಮಕ್ಕಳು ಆರಂಭದಲ್ಲಿ ಪ್ರಾರ್ಥಿಸಿದರು.

PREV

Recommended Stories

ರಾಜ್ಯದಲ್ಲಿ 5 - 6 ದಿನ ಮಳೆ ಇಳಿಮುಖ : 26ರಿಂದ ಮತ್ತೆ ಮಳೆ
ಎಮ್ಮೆ ಕೊಡಿಸುವುದಾಗಿ ಪ್ರೇಮ್‌ಗೆ ವಂಚನೆ : ₹4.75 ಲಕ್ಷ ಮೋಸ