ಚಿಂತಾಮಣಿ ಆಸ್ಪತ್ರೆ ಆಧುನೀಕರಣಕ್ಕೆ ಯೋಜನೆ

KannadaprabhaNewsNetwork |  
Published : Oct 20, 2024, 02:02 AM IST
ನೆಡಸ | Kannada Prabha

ಸಾರಾಂಶ

ಚಿಕ್ಕಬಳ್ಳಾಪುರದಲ್ಲಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಎಂ.ಆರ್.ಐ ಇರಲಿಲ್ಲ ಹಾಗೂ ಸಿಟಿ ಸ್ಕ್ಯಾನಿಂಗ್‌ ಹಳೆಯದಾಗಿತ್ತು. ತಾವು ಆರೋಗ್ಯ ಸಚಿವ ದಿನೇಶ್‌ಗುಂಡೂರಾವ್‌ ಜತೆ ಮಾತನಾಡಿ ಮೂರು ಮತ್ತು ನಾಲ್ಕನೇ ಅಂತಸ್ತನ್ನು ನಿರ್ಮಿಸಲು ಅನುದಾನ ಕೋರಿದ್ದು, ಇದಕ್ಕೆ ಸಚಿವರು ಸ್ಪಂದಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಚಿಂತಾಮಣಿ

ಇಲ್ಲಿಯ ೧೦೦ ಬೆಡ್ ಆಸ್ಪತ್ರೆ ಜಿಲ್ಲೆಯಲ್ಲೇ ಅತಿ ಹಳೆಯ ಆಸ್ಪತ್ರೆಯಾಗಿದ್ದು, ಇದನ್ನು ೫೦-೬೦ಕೋಟಿ ವೆಚ್ಚದಲ್ಲಿ ಆಧುನೀಕರಣ ಮಾಡುವುದಾಗಿ ಯೋಜನೆ ರೂಪಿಸಿರುವುದಾಗಿ ಉನ್ನತ ಶಿಕ್ಷಣ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಡಾ ಎಂ.ಸಿ.ಸುಧಾಕರ್ ತಿಳಿಸಿದರು.

ನಗರದ ಕೆ.ಆರ್ ಬಡಾವಣೆಯ ಉರ್ದು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕಟ್ಟಡ ಮೇಲ್ದರ್ಜೆಗೇರಿಸುವ ಕಾಮಗಾರಿಗೆ ಗುದ್ದಲಿಪೂಜೆ ನೆರವೇರಿಸಿ ಅ‍ವರು ಮಾತನಾಡಿದರು.

ಐಸಿಯು ಕುರಿತ ಆರೋಪ ಸುಳ್ಳು

೫೦ ಹಾಸಿಗೆ ಸಾಮಾರ್ಥ್ಯದ ಐಸಿಯು ಘಟಕವನ್ನು ಚಿಂತಾಮಣಿ ತೆಗೆದುಕೊಂಡು ಹೋಗಿದ್ದಾರೆಂದು ಸಂಸದ ಜಾ.ಸುಧಾಕರ್‌ ಮಾಡಿರುವ ಆರೋಪದಲ್ಲಿ ಹುರುಳಿಲ್ಲ. ಚಿಂತಾಮಣಿಯ ಸಾರ್ವಜನಿಕ ಆಸ್ಪತ್ರೆಗೆ ೮ ಕೋಟಿ ಹಾಗೂ ಚಿಕ್ಕಬಳ್ಳಾಪುರದ ಸಾರ್ವಜನಿಕ ಆಸ್ಪತ್ರೆಗೆ ೨೦ ಕೋಟಿಯನ್ನು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಬಳಿ ಕೇಳಿದ್ದು ಅವರು ಅದನ್ನು ಮಾಡಿಸಿಕೊಡುವ ಭರವಸೆಯನ್ನು ನೀಡಿದ್ದಾರೆಂದರು. ಚಿಕ್ಕಬಳ್ಳಾಪುರದ ಸರ್ಕಾರಿ ಆಸ್ಪತ್ರೆ ಕಟ್ಟಡದ ೩ನೇ ಮತ್ತು ೪ನೇ ಅಂತಸ್ತು ಕಟ್ಟಲು ೨೦ ಕೋಟಿ ಕೇಳಿರುವುದಾಗಿ ತಿಳಿಸಿದರು. ಚಿಕ್ಕಬಳ್ಳಾಪುರದಲ್ಲಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಎಂ.ಆರ್.ಐ ಇರಲಿಲ್ಲ ಹಾಗೂ ಸಿಟಿ ಸ್ಕ್ಯಾನಿಂಗ್‌ ಹಳೆಯದಾಗಿತ್ತು. ತಾವು ಆರೋಗ್ಯ ಸಚಿವ ದಿನೇಶ್‌ಗುಂಡೂರಾವ್‌ ಜತೆ ಮಾತನಾಡಿ ಮೂರು ಮತ್ತು ನಾಲ್ಕನೇ ಅಂತಸ್ತನ್ನು ನಿರ್ಮಿಸಲು ಅನುದಾನ ಕೋರಿದ್ದು, ಇದಕ್ಕೆ ಸಚಿವರು ಸ್ಪಂದಿಸಿದ್ದಾರೆ ಎಂದರು.

ನಗರದ ಮುಖ್ಯರಸ್ತೆಗಳಿಗೆ ನಗರೋತ್ಥಾನದ ಅಡಿಯಲ್ಲಿ ಡಾಂಬರೀಕರಣ ಮಾಡಲಾಗುವುದು. ನಾಗನಾಥೇಶ್ವರ ದೇವಸ್ಥಾನ, ಐಡಿಎಸ್‌ಎಂಟಿ ಕಾಂಪ್ಲೇಕ್ಸ್ ಹಂದಿಗಳ ಗೂಡಾಗಿತ್ತು ಅದರ ಕೆಳಭಾಗ ಮತ್ತು ಮೇಲ್ಭಾಗದಲ್ಲೂ ಸರಿಪಡಿಸಿ, ೧೯೪ ಮಂದಿ ಬೀದಿ ಬದಿ ವ್ಯಾಪಾರಸ್ಥರಿಗೆ ವ್ಯಾಪಾರ ಮಾಡಿಕೊಳ್ಳಲು ಅನುವು ಮಾಡಿಕೊಟ್ಟಿರುವುದಾಗಿ ತಿಳಿಸಿದರು.

ಆಲಂಬಗಿರಿ ಕಲ್ಯಾಣಿ ಕಾಮಗಾರಿ

ತಾಲೂಕಿನ ಆಲಂಬಗಿರಿಯ ಪುರಾತನ ಕಲ್ಯಾಣಿಯ ಅಭಿವೃದ್ಧಿಗೆ ೩೭ಲಕ್ಷ ವೆಚ್ಚದಲ್ಲಿ ಉನ್ನತ ಶಿಕ್ಷಣ ಮತ್ತು ಚಿಕ್ಕಬಳ್ಳಾಪುರ ಜಿಲ್ಲಾ ಸಚಿವ ಡಾ ಎಂ.ಸಿ.ಸುಧಾಕರ್ ಗುದ್ದಲಿ ಪೂಜೆಯನ್ನು ನೆರವೇರಿಸಿದರು. ಕಲ್ಯಾಣಿಗಳ ಅಭಿವೃದ್ಧಿಯಿಂದಾಗಿ ಅಂತರ್ಜಲದ ಮಟ್ಟ ಏರಿಕೆಯಾಗುತ್ತದೆ. ಅದರ ಮೂಲಕ ಬೋರ್‌ವೆಲ್‌ಗಳಲ್ಲಿ ನೀರು ಮರುಪೂರಣವಾಗುತ್ತದೆಯೆಂದರು.

ಈ ಸಂದರ್ಭದಲ್ಲಿ ಗ್ರೇಡ್ ೨ ತಹಶೀಲ್ದಾರ್ ರಾಜೇಂದ್ರ, ಪಿಡಿಒ ಮುನಿನಾರಾಯಣ, ನಗರಸಭೆ ಅಧ್ಯಕ್ಷ ಜಗನ್ನಾಥ್, ಉಪಾಧ್ಯಕ್ಷೆ ರಾಣಿಯಮ್ಮ, ನಗರಸಭಾ ಸದಸ್ಯರಾದ ಹರೀಶ್, ಜಗದೀಶ್, ನಗರಯೋಜನಾ ಪ್ರಾಧಿಕಾರ ಅಧ್ಯಕ್ಷ ಶ್ರೀನಾಥ್‌ರೆಡ್ಡಿ, ನಗರಸಭಾ ಮಾಜಿ ಅಧ್ಯಕ್ಷೆ ಸುಜಾತಮ್ಮ, ಗ್ರಾ.ಪಂ. ಅಧ್ಯಕ್ಷೆ ಶಾಮೀಮ್ ತಾಜ್, ಉಪಾಧ್ಯಕ್ಷ ವೆಂಕಟರಾಮರೆಡ್ಡಿ, ಗೋವಿಂದಪ್ಪ, ಸಮೀವುಲ್ಲಾ, ರಾಮಣ್ಣ, ಶ್ರೀನಿವಾಸ್, ಮುಖಂಡರಾದ ಬುಕ್ಕನಹಳ್ಳಿ ಶಿವಣ್ಣ, ಕುರುಟಹಳ್ಳಿ ಕೃಷ್ಣಮೂರ್ತಿ, ಅಂಬರೀಶ್, ಉಮೇಶ್, ಚಂದ್ರಪ್ಪ ಮತ್ತಿತರರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ದೀರ್ಘಾವಧಿ ಸಿಎಂ ಸಂಭ್ರಮಕ್ಕೆ ಗೃಹಲಕ್ಷ್ಮಿ ಹಣ ನೀಡಿದ ಮಹಿಳೆ!
4 ಜಿಲ್ಲೆಗಳಲ್ಲಿ 13 ಸಾವಿರ ಕೇಸ್‌ ಬಾಕಿ : ಸಚಿವ ತರಾಟೆ