ಕನ್ನಡಪ್ರಭ ವಾರ್ತೆ ದಾವಣಗೆರೆ ಐಸಿಎಂಆರ್ - ತರಳಬಾಳು ಕೃಷಿ ವಿಜ್ಞಾನ ಕೇಂದ್ರ, ತೋಟಗಾರಿಕೆ ಇಲಾಖೆ ಹಾಗೂ ಜಿಲ್ಲಾ ಪಂಚಾಯತ್ ಅವರ ಸಂಯುಕ್ತಾಶ್ರಯದಲ್ಲಿ ಅ.1,2 ರಂದು ಕೃಷಿಕರ ಸಮೃದ್ಧಿಗಾಗಿ "ಸಸ್ಯ ಸಂತೆ ಮತ್ತು ಸಾವಯವ ಪರಿಕರಗಳ ಮಾರಾಟ " ಕಾರ್ಯಕ್ರಮವನ್ನು ನಗರದ ಐಸಿಎಆರ್ - ತರಳಬಾಳು ಕೃಷಿ ವಿಜ್ಞಾನ ಕೇಂದ್ರದ ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಕೇಂದ್ರದ ವಿಜ್ಞಾನಿ ಡಾ. ದೇವರಾಜ ತಿಳಿಸಿದರು.ಶನಿವಾರ ಸುದ್ದಿಗೋಷ್ಠಿಯಲ್ಲಿ ಕಾರ್ಯಕ್ರಮ ಕುರಿತು ಮಾತನಾಡಿದ ಅವರು, ನಗರದಲ್ಲಿ ಪ್ರಪಥಮ ಬಾರಿಗೆ "ಸಸ್ಯ ಸಂಜೆ, ವಸ್ತು ಪ್ರದರ್ಶನ ಮತ್ತು ಸಾವಯದ ಪರಿಕರಗಳ " ಮಾರಾಟವನ್ನು ಆಯೋಜಿಸುತ್ತಿದ್ದು, ಜಿಲ್ಲೆಯ ರೈತರಿಗೆ ಮತ್ತು ನಗರದ ನಾಗರೀಕರಿಗೆ ಹೆಚ್ಚು ಅನುಕೂಲವಾಗಲಿದೆ ಎಂದರು.
ಕಾರ್ಯಕ್ರಮದ ಅಂಗವಾಗಿ "ಆಡಿಕೆ ಬೆಳೆಯಲ್ಲಿ ಅಂತರ ಬೆಳೆಗಳು ಮತ್ತು ತೋಟಗಾರಿಕೆ ಬೆಳೆಗಳಲ್ಲಿ ಸಾವಯವ ಪದ್ಧತಿ ಅಳವಡಿಕೆ " ಕುರಿತು ಕಾರ್ಯಗಾರ ನಡೆಯಲಿದ್ದು, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುರೇಶ್ ಬಿ. ಇಟ್ನಾಳ್ ಕಾರ್ಯಾಗಾರ ಉದ್ಘಾಟಿಸಲಿದ್ದಾರೆ ಎಂದರು.ತರಳಬಾಳು ಗ್ರಾಮೀಣ ಅಭಿವೃದ್ಧಿ ಸಂಸ್ಥೆಯ ಕಾರ್ಯದರ್ಶಿಗಳು ಹಾಗೂ ಕರ್ನಾಟಕ ಸರ್ಕಾರದ ಯೋಜನಾ ಆಯೋಗದ ಮಾಜಿ ಸದಸ್ಯರಾದ ಡಾ. ಕೆ.ಪಿ. ಬಸವರಾಜಪ್ಪ ನವರು ಅಧ್ಯಕ್ಷತೆ ವಹಿಸಲಿದ್ದಾರೆ. ಪ್ರದರ್ಶನದಲ್ಲಿ ಒಟ್ಟು 40 ಕ್ಕೂ ಹೆಚ್ಚು ಮಳಿಗೆ ಹಾಕಲಾಗಿದ್ದು, ವಿವಿಧ ರೀತಿಯ ಹಣ್ಣಿನ ಗಿಡಗಳನ್ನು ಸಬ್ಸಿಡಿ ದರದಲ್ಲಿ ದೊರೆಯಲಿದೆ ಎಂದು ಮಾಹಿತಿ ನೀಡಿದರು.ಸುದ್ದಿಗೋಷ್ಠಿಯಲ್ಲಿ ಕೇಂದ್ರದ ಹಿರಿಯ ವಿಜ್ಞಾನಿ ಬಸವನಗೌಡ, ಸುಪ್ರಿಯ ಪಾಟೀಲ್ ಇದ್ದರು.