ಕನ್ನಡಪ್ರಭ ವಾರ್ತೆ ಕಿಕ್ಕೇರಿ
ಪಟ್ಟಣದ ಕೆಪಿಎಸ್ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಆಯೋಜಿಸಿದ್ದ ಪರಿಸರ ದಿನಾಚರಣೆಯಲ್ಲಿ ಮಾತನಾಡಿ, ಪ್ಲಾಸ್ಟಿಕ್ ದೊಡ್ಡ ಪಿಡುಗಾಗಿದೆ. ಭೂಮಿಯಲ್ಲಿ ಕರಗದ ವಿಷಕಾರಿ ಹಾನಿಕಾರಕ ವಸ್ತುವಾಗಿ ಗೊತ್ತಿಲ್ಲದೆ ನಮ್ಮದೇಹ ಸೇರಿ ಅಂತರ್ಜಲ ವಿಷವಾಗುತ್ತಿದೆ ಎಂದು ಎಚ್ಚರಿಸಿದರು.
ಆಹಾರ ಪದಾರ್ಥ, ಇಡ್ಲಿ, ಸಾಂಬಾರ್, ಕಾಫಿ ಮತ್ತಿತರ ವಸ್ತುಗಳನ್ನು ಪ್ಲಾಸ್ಟಿಕ್ ಕವರ್‌ನಲ್ಲಿ ಬಳಸುವುದರಿಂದ ಬಲುಬೇಗ ಅನಾರೋಗ್ಯಕ್ಕೆ ತುತ್ತಾಗಬೇಕಾಗಲಿದೆ ಎಂದರು.ನಮಗೆ ಬೇಕಿರುವ ಶುದ್ಧ ಗಾಳಿ ಮರಗಿಡಗಳಿಂದ ಎಂಬ ಅರಿವಿರಲಿ. ಹೆಚ್ಚು ಮರಗಿಡಗಳನ್ನು ಬೆಳೆಸುವುದರಿಂದ ಭೂಮಿ ಸವಕಳಿ, ಬೆಟ್ಟಗುಡ್ಡ ಕುಸಿತ, ತಾಪಮಾನ ವೈಪರೀತ್ಯ ತಡೆಯಬಹುದು. ಭೂಮಿ ಫಲವತ್ತತೆ, ರಾಸಾಯನಿಕ ಮುಕ್ತ ಬೆಳೆ ಸಿಗಲಿದೆ. ಮನೆಗೊಂದು ಮರ ಬೆಳೆಸುವ ಪರಿಕಲ್ಪನೆಯನ್ನು ಮಕ್ಕಳು ರೂಢಿಸಿಕೊಳ್ಳಲು ಪೋಷಕರು ಜಾಗೃತಿ ಮೂಡಿಸಿ ಎಂದು ನುಡಿದರು.
ಮರಗಿಡಗಳು ಇದ್ದರೆ ಇಂತಹ ಪ್ರಾಕೃತಿಕ ವಿಕೋಪ ತಡೆಯಬಹುದು ಎಂಬುದನ್ನು ಯುವ ಪೀಳಿಗೆ ಅರಿಯಬೇಕು. ಮರಗಿಡಗಳು ಪರಿಸರ ಸಮತೋಲನ, ಪ್ರಾಣಿ ಪಕ್ಷಿಗಳಿಗೆ ಆಸರೆ, ಆಹಾರ ನೀಡಲಿವೆ ಎಂಬುದನ್ನುಅರಿತು ಪರಿಸರ ಉಳಿಸಿ ಜೀವಸಂಕುಲ ಕಾಪಾಡಬೇಕು ಎಂದರು.
ಕಾಲೇಜು ಆವರಣದಲ್ಲಿ ಗಿಡ ನೆಟ್ಟು ನೀರೆರೆದು ವಿದ್ಯಾರ್ಥಿಗಳು ಪರಿಸರ ಸಂರಕ್ಷಣೆಗೆ ಮುಂದಾಗುವುದಾಗಿ ಪ್ರತಿಜ್ಞೆ ಮಾಡಿದರು.ಎಸ್.ದೊರೆಸ್ವಾಮಿ, ಎನ್. ರವೀಂದ್ರ, ಎ.ಎಂ.ಮಂಜುನಾಥ್, ಎಸ್.ಡಿ. ಹರೀಶ್, ಎಂ.ವಿನಾಯಕ, ಜಿ. ರಮೇಶ್, ಎನ್.ಎ. ನಾಗೇಶ್ ಇದ್ದರು.