ಕಬಡ್ಡಿ ಆಡುವುದರಿಂದ ದೇಹ, ಮನಸ್ಸು ಸದೃಢ: ಸಚಿವ ತಿಮ್ಮಾಪೂರ

KannadaprabhaNewsNetwork |  
Published : Oct 29, 2025, 11:15 PM IST
ಚಿಮ್ಮಡ ಗ್ರಾಮದಲ್ಲಿ ನಡೆದ ಕಬ್ಬಡ್ಡಿ ವೈಭವ ಕಾರ್ಯಕ್ರಮದ ಉದ್ಘಾಟಣೆಯನ್ನು ಅಬಕಾರಿ ಸಚಿವ ಆರ್. ಬಿ. ತಿಮ್ಮಾಪೂರ, ವಿಧಾನ ಪರಿಷತ್ ಸದಸ್ಯೆ ಉಮಾಶ್ರೀ ನೆರವೇರಿಸಿದರು. | Kannada Prabha

ಸಾರಾಂಶ

ಕಬಡ್ಡಿ ಆಟದಲ್ಲಿ ದೇಹದ ಎಲ್ಲ ಅಂಗಗಳು ಕಾರ್ಯನಿರ್ವಹಿಸುತ್ತವೆ. ಈ ಆಟದಿಂದ ದೇಹ ಮತ್ತು ಮನಸ್ಸು ಸದೃಢಗೊಳ್ಳುತ್ತದೆ. ಸಾರಾಯಿ ನಶೆ ಮೂರು ಗಂಟೆಯದ್ದಾಗಿದ್ದರೆ, ಕಬಡ್ಡಿ ನಶೆ ಮೂರು ತಿಂಗಳಕಾಲ ಇರುತ್ತದೆ. ಗ್ರಾಮೀಣ ಕ್ರೀಡೆಯಾದ ಕಬ್ಬಡ್ಡಿಗೆ ಮನಸೋಲದವರಿಲ್ಲವೆಂದು ಅಬಕಾರಿ ಸಚಿವ ಆರ್.ಬಿ. ತಿಮ್ಮಾಪೂರ ಹೇಳಿದರು.

ಕನ್ನಡಪ್ರಭ ವಾರ್ತೆ ಮಹಾಲಿಂಗಪುರ

ಕಬಡ್ಡಿ ಆಟದಲ್ಲಿ ದೇಹದ ಎಲ್ಲ ಅಂಗಗಳು ಕಾರ್ಯನಿರ್ವಹಿಸುತ್ತವೆ. ಈ ಆಟದಿಂದ ದೇಹ ಮತ್ತು ಮನಸ್ಸು ಸದೃಢಗೊಳ್ಳುತ್ತದೆ. ಸಾರಾಯಿ ನಶೆ ಮೂರು ಗಂಟೆಯದ್ದಾಗಿದ್ದರೆ, ಕಬಡ್ಡಿ ನಶೆ ಮೂರು ತಿಂಗಳಕಾಲ ಇರುತ್ತದೆ. ಗ್ರಾಮೀಣ ಕ್ರೀಡೆಯಾದ ಕಬ್ಬಡ್ಡಿಗೆ ಮನಸೋಲದವರಿಲ್ಲವೆಂದು ಅಬಕಾರಿ ಸಚಿವ ಆರ್.ಬಿ. ತಿಮ್ಮಾಪೂರ ಹೇಳಿದರು.

ಸಮೀಪದ ಚಿಮ್ಮಡ ಗಾಮದ ಸರಕಾರಿ ಪ್ರೌಢಶಾಲೆಯ ಆವರಣದಲ್ಲಿ ಭಾನುವಾರ ಪ್ರಭುಲಿಂಗೇಶ್ವರ ಯುವಕ ಕ್ರೀಡಾ ಸಂಘದ ಪ್ರಾಯೋಜಕತ್ವದಲ್ಲಿ ಹಮ್ಮಿಕೊಂಡಿದ್ದ ಚಿಮ್ಮಡ ಕಬಡ್ಡಿ ವೈಭವ-2025 ಮುಕ್ತ ಕಬಡ್ಡಿ ಪಂದ್ಯಾವಳಿಯ ಸಮಾರೋಪ ಸಮಾರಂಭದ ಉದ್ಘಾಟಿಸಿ ಮಾತನಾಡಿದ ಅವರು, ಕಬಡ್ಡಿ ಜಾತಿ ಧರ್ಮಗಳ ಬೇಧವಿಲ್ಲದೇ ನಡೆಯುವ ಕ್ರೀಡೆ. ಅದನ್ನ ಸಂಘಟಿಸುವುದು ಸುಲಭದ ಮಾತಲ್ಲ. ನನ್ನ ರಾಜಕೀಯ ಜೀವನದಲ್ಲಿ ಕಬಡ್ಡಿ ಮಹತ್ವದ ಪಾತ್ರ ವಹಿಸಿದೆ ಎಂದ ಅವರು, ತಮ್ಮ ಪ್ರೌಢಾವಸ್ಥೆಯಲ್ಲಿ ಕಬಡ್ಡಿಯೊಂದಿಗಿನ ಒಡನಾಟ ಹೇಳಿದರು.

ವಿಧಾನ ಪರಿಷತ್ ಸದಸ್ಯೆ ಉಮಾಶ್ರೀ ಮಾತನಾಡಿ, ಕ್ರೀಡೆಗೆ ನಾನು ಯಾವತ್ತೂ ಬೆಂಬಲಿಸುತ್ತೇನೆ. ಗ್ರಾಮದ ಯುವಕರ ಅಪೇಕ್ಷೆಯಂತೆ ಗ್ರಾಮದಲ್ಲಿ ಇನ್ನೊಂದು ಗರಡಿ ಮನೆ ನಿರ್ಮಾಣಕ್ಕೆ ಮಂಜೂರಾತಿ ದೊರೆತಿದ್ದು, ಅನುದಾನ ಈಗಾಗಲೇ ಮಂಜುರಾಗಿದ್ದು, ಅನುದಾನ ಬಳಕೆಯಲ್ಲಿ ಏನಾದರೂ ಸಮಸ್ಯೆಯಾದರೂ ನನ್ನ ಅನುದಾನದಲ್ಲಿ ಮತ್ತೆ ಹತ್ತು ಲಕ್ಷ ನೀಡಿ ಗರಡಿಮನೆ ನಿರ್ಮಾಣ ಕಾಮಗಾರಿ ಪೂರ್ಣಗೊಳಿಸುತ್ತೇನೆಂದು ಭರವಸೆ ನೀಡಿದರು.

ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ಅಧ್ಯಕ್ಷ ಕೀರ್ತಿಗಣೇಶ, ಮುಖಂಡರಾದ ಡಾ.ಎ.ಆರ್. ಬೆಳಗಲಿ, ಯಲ್ಲನಗೌಡ ಪಾಟೀಲ, ರಂಗನಗೌಡ ಪಾಟೀಲ, ಸಂಘದ ಅಧ್ಯಕ್ಷ ಪ್ರವೀಣ ಪೂಜಾರಿ ಪ್ರಾಸ್ತಾವಿಕವಾಗಿ ಮಾತನಾಡಿದರು.

ಸ್ವತಃ ದುಡಿದು ಕುಟುಂಬ ಸಲಹುತ್ತಿರುವ ವಿಕಲಚೇತನ ಮಹಿಳೆಯರನ್ನು ಸತ್ಕರಿಸಿ ಗೌರವಿಸಲಾಯಿತು. ಕಬಡ್ಡಿಯಲ್ಲಿ ಪ್ರಥಮ ಬಹುಮಾನ ಸೋರಗಾವಿಯ ಮಾರುತೇಶ್ವರ ಕಬಡ್ಡಿ ತಂಡ, ದ್ವಿತೀಯ ಅರಳಿಮಟ್ಟಿಯ ಬಸವೇಶ್ವರ ಕಬಡ್ಡಿ ತಂಡ, ತೃತೀಯ ಚಿಂಚಲಿಯ ಮಾಯಕ್ಕ ಕಬಡ್ಡಿ ತಂಡ, ಚಥುರ್ತ ಚಿಮ್ಮಡದ ನ್ಯೂ ಶ್ರೀನಿಧಿ ಕಬಡ್ಡಿ ತಂಡ ಪಡೆದುಕೊಂಡಿತು.

ಈ ಸಂದರ್ಭದಲ್ಲಿ ಮುಖಂಡರಾದ ಬಲವಂತಗೌಡ ಪಾಟೀಲ, ಆನಂದ ಹಟ್ಟಿ, ಹಿರಿಯರಾದ ರಾಮಣ್ಣ ಮುಗಳಖೋಡ, ಉಮೇಶ ಪೂಜಾರಿ, ಅಶೋಕ ಚಿಮ್ಮಡ, ಮಹಾಲಿಂಗ ಬಳಗಾರ, ಬಾಳಪ್ಪ ಗಡೆಪ್ಪನವರ ಸೇರಿದಂತೆ ಪ್ರಮುಖರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪಲ್ಸ್‌ ಪೋಲಿಯೋ ಹಾಕಿಸಿ, ಅಂಗವಿಕತೆ ತಪ್ಪಿಸಿ
ಪುಷ್ಪಗಿರಿ ಜೇಸಿಗೆ 50 ವರ್ಷ: ಸಂಭ್ರಮ ಆಚರಣೆ