ಧರ್ಮ ಜಾಗೃತಿ ಸಭೆಯಲ್ಲಿ ಲವ್ ಜಿಹಾದ್ ವಿರುದ್ಧ ಪ್ರತಿಜ್ಞಾವಿಧಿ

KannadaprabhaNewsNetwork |  
Published : Oct 08, 2024, 01:18 AM IST
ಗಜೇಂದ್ರಗಡ ಎಸ್‌ಎಸ್‌ಕೆ ಸಮಾಜದಿಂದ ನಡೆದ ಧರ್ಮ ಜಾಗೃತಿ ಸಭೆಯಲ್ಲಿ ಲವ್ ಜಿಹಾದ್ ವಿರುದ್ಧ ಪ್ರತಿಜ್ಞಾವಿಧಿ ಬೋಧಿಸಲಾಯಿತು. | Kannada Prabha

ಸಾರಾಂಶ

ನಾನು ಜನಿಸಿದಂತಹ ಹಿಂದೂ ಸನಾತನ ಧರ್ಮ ಬಿಟ್ಟು, ಎಸ್‌ಎಸ್‌ಕೆ ಸಮಾಜ ಬಿಟ್ಟು ಬೇರೆ ಧರ್ಮಕ್ಕೆ ನಾನು ಅಣಿ ಆಗುವುದಿಲ್ಲ

ಗಜೇಂದ್ರಗಡ: ಪಟ್ಟಣದ ಜಗದಂಬಾ ದೇವಿ ದೇವಸ್ಥಾನದಲ್ಲಿ ಎಸ್.ಎಸ್.ಕೆ ಸಮಾಜ ಹಾಗೂ ಎಸ್‌ಎಸ್‌ಕೆ ಹಿತರಕ್ಷಣಾ ಸಮಿತಿ ಸಹಯೋಗದಲ್ಲಿ ನಡೆದ ೧೫ನೇ ವರ್ಷದ ಬಹುಮಾನ ವಿತರಣಾ ಸಮಾರಂಭ ಧರ್ಮ ಜಾಗೃತಿ ಸಭೆಯಲ್ಲಿ ಲವ್ ಜಿಹಾದ್ ವಿರುದ್ಧ ಪ್ರತಿಜ್ಞಾವಿಧಿ ಬೋಧಿಸಲಾಯಿತು.

ರಾಜ್ಯದಲ್ಲಿ ಹೆಚ್ಚುತ್ತಿರುವ ಲವ್ ಜಿಹಾದ್ ಪ್ರಕರಣಗಳ ಜಾಗೃತಿಗಾಗಿ ಸಮಾಜದ ಯುವಕ-ಯುವತಿಯರಿಗೆ ಲವ್ ಜಿಹಾದ್ ವಿರುದ್ಧ ಪ್ರತಿಜ್ಞಾವಿಧಿ ಬೋಧಿಸಲಾಯಿತು. ಪಂಚಕಮಿಟಿಯ ಅಧ್ಯಕ್ಷ ವಿಶ್ವನಾಥಸಾ ಮೇಘರಾಜ್ ಅವರು ಪ್ರತಿಜ್ಞಾವಿಧಿ ಬೋಧಿಸಿದರು. ತಾಯಿ ಶ್ರೀ ಅಂಬಾಭವಾನಿ ಹಾಗೂ ಶ್ರೀ ಸಹಸ್ರಾರ್ಜುನ ಮಹಾರಾಜರ ಮೇಲೆ ಪ್ರಮಾಣ ಮಾಡಿಸಲಾಯಿತು.

ಕಳೆದ ವರ್ಷವೂ ಸಮಾಜದಿಂದ ಲವ್‌ ಜಿಹಾದ್‌ ವಿರುದ್ಧ ಪ್ರತಿಜ್ಞಾವಿಧಿ ಸ್ವೀಕರಿಸಲಾಗಿತ್ತು.

ನಾನು ಜನಿಸಿದಂತಹ ಹಿಂದೂ ಸನಾತನ ಧರ್ಮ ಬಿಟ್ಟು, ಎಸ್‌ಎಸ್‌ಕೆ ಸಮಾಜ ಬಿಟ್ಟು ಬೇರೆ ಧರ್ಮಕ್ಕೆ ನಾನು ಅಣಿ ಆಗುವುದಿಲ್ಲ. ನಮ್ಮಂತ ಯುವತಿಯರ ಮೇಲೆ ಲವ್ ಜಿಹಾದ್ ನಂತಹ ಕೃತ್ಯ ನಡೆಯುತ್ತಿದೆ ಇಂಥ ಕೃತ್ಯಕ್ಕೆ ನಾನು ಎಂದಿಗೂ ಬಲಿ ಆಗುವುದಿಲ್ಲ ಶಾಲಾ, ಕಾಲೇಜು ಮತ್ತು ಓಣಿಗಳಲ್ಲಿ ಲವ್ ಜಿಹಾದಿಗೆ ಬಲಿಯಾದ ಹಾಗೂ ಬಲಿಯಾಗುತ್ತಿರುವ ನನ್ನ ಸಮಾಜದ ಅಕ್ಕ-ತಂಗಿಯರಾಗಲಿ, ಯುವತಿಯರಾಗಲಿ ಬಲಿಯಾಗುತ್ತಿರುವುದು ಕಂಡು ಬಂದಲ್ಲಿ ನಾನು ಅವರನ್ನು ತಡೆಯುವ ಸತತ ಪ್ರಯತ್ನ ಮಾಡುತ್ತೇನೆ ಎಂದು ಪ್ರತಿಜ್ಞಾವಿಧಿ ಬೋಧಿಸಿದರು.

ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಶಿಕ್ಷಕಿ ಜಮುನಾಬಾಯಿ ಸುರೇಶ್ ಖೋಡೆ ಮಾತನಾಡಿ, ಮಕ್ಕಳ ಗುರಿ ಮುಟ್ಟಿಸುವಲ್ಲಿ ಪಾಲಕರ ಪಾತ್ರ ಬಹಳ ಮಹತ್ವದ್ದಾಗಿದ್ದು, ಸಮಾಜದ ಬಾಂಧವರು ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ಕೊಡಬೇಕು ಎಂದರು.

ಈ ವೇಳೆ ಕಾರ್ಯಕ್ರಮದಲ್ಲಿ ಎಸ್ಸೆಸ್ಸೆಲ್ಸಿ, ಪಿಯುಸಿ ಸೇರಿದಂತೆ ವಿವಿಧ ಪರೀಕ್ಷೆಗಳಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.

ಎಸ್‌ಎಸ್‌ಕೆ ಹಿತರಕ್ಷಣಾ ಸಮಾಜದ ಅಧ್ಯಕ್ಷ ಸುಭಾಸ ರಾಯಬಾಗಿ ಕಾರ್ಯಕ್ರಮ ಅಧ್ಯಕ್ಷತೆ ವಹಿಸಿದ್ದರು. ಲಕ್ಷ್ಮಣ ರಂಗ್ರೇಜ, ಗಣೇಶ ರಾಯಬಾಗಿ, ನಾಗೇಶ ಶಿಂಗ್ರಿ, ಸರಸ್ವತಿಬಾಯಿ ಶಿಂಗ್ರಿ, ಶಾರದಾಬಾಯಿ ರಾಯಬಾಗಿ, ಸುರೇಶ ರಂಗ್ರೇಜ ಸೇರಿ ಎಸ್‌ಎಸ್‌ಕೆ ಪಂಚ ಟ್ರಸ್ಟ್ ಕಮಿಟಿ ಸದಸ್ಯರು, ಎಸ್‌ಎಸ್‌ಕೆ ಹಿತರಕ್ಷಣಾ ಸಮಿತಿಯ ಸರ್ವ ಸದಸ್ಯರು ಹಾಗೂ ಎಸ್‌ಎಸ್‌ಕೆ ತರುಣ ಸಂಘದ ಸದಸ್ಯರು, ಗಾಯತ್ರೀದೇವಿ ಮಹಿಳಾ ಮಂಡಳದ ಸದಸ್ಯರು ಭಾಗವಹಿಸಿದ್ದರು.

ಎಸ್‌ಎಸ್‌ಕೆ ಹಿತರಕ್ಷಣಾ ಸಮಾಜದ ಅಧ್ಯಕ್ಷ ಸುಭಾಸ ರಾಯಬಾಗಿ ಕಾರ್ಯಕ್ರಮ ಅಧ್ಯಕ್ಷತೆ ವಹಿಸಿದ್ದರು. ಲಕ್ಷ್ಮಣ ರಂಗ್ರೇಜ, ಗಣೇಶ ರಾಯಬಾಗಿ, ನಾಗೇಶ ಶಿಂಗ್ರಿ, ಸರಸ್ವತಿಬಾಯಿ ಶಿಂಗ್ರಿ, ಶಾರದಾಬಾಯಿ ರಾಯಬಾಗಿ, ಸುರೇಶ ರಂಗ್ರೇಜ ಸೇರಿ ಎಸ್‌ಎಸ್‌ಕೆ ಪಂಚ ಟ್ರಸ್ಟ್ ಕಮಿಟಿ ಸದಸ್ಯರು, ಎಸ್‌ಎಸ್‌ಕೆ ಹಿತರಕ್ಷಣಾ ಸಮಿತಿಯ ಸರ್ವ ಸದಸ್ಯರು ಹಾಗೂ ಎಸ್‌ಎಸ್‌ಕೆ ತರುಣ ಸಂಘದ ಸದಸ್ಯರು, ಗಾಯತ್ರೀದೇವಿ ಮಹಿಳಾ ಮಂಡಳದ ಸದಸ್ಯರು ಭಾಗವಹಿಸಿದ್ದರು.

PREV

Recommended Stories

ತುಮಕೂರಲ್ಲಿ 20 ನವಿಲುಗಳ ಸಾವು
ರಾಜ್ಯದಲ್ಲಿ 4 ಹಾಲಿನ ಮಾದರಿ ಗುಣಮಟ್ಟ ಕಡಿಮೆ