ಪೌರತ್ವ ಕೇಸ್‌ಗೆ ಹೆಸರಿ ಅರಾಜಕತೆ ಸೃಷ್ಟಿಸುವ ಹುನ್ನಾರ: ಕಾರಜೋಳ

KannadaprabhaNewsNetwork |  
Published : Oct 06, 2026, 04:15 AM IST
ಪೊಟೋ ಅ.5ಎಂಡಿಎಲ್ 1. ಗೋವಿಂದ ಕಾರಜೋಳ ಸಂಸದರು ಚಿತ್ರದುರ್ಗ | Kannada Prabha

ಸಾರಾಂಶ

ಮುಧೋಳ: ರಾಹುಲ್‌ ಗಾಂಧಿ ಅವರು 1994ರಿಂದ ಬ್ರಿಟಿಷ್ ಪೌರತ್ವ ಹೊಂದಿದ ಕೇಸ್‌ ಈಗ ಸುಪ್ರೀಂಕೋರ್ಟ್ ನಲ್ಲಿ ವಿಚಾರಣೆ ನಡೆಯುತ್ತಿದೆ. ಇದರಿಂದ ಬೆದರಿದ ಕಾಂಗ್ರೆಸ್‌ ಮುಖಂಡ ರಾಹುಲ್‌ ಗಾಂಧಿ ದೇಶದಲ್ಲಿ ನಡೆಯುತ್ತಿರುವ ಎಸ್ಐಆರ್ ಬಗ್ಗೆ ನೆಪದಲ್ಲಿ ಜನರು ಹಾಗೂ ಯುವಕರ ದಾರಿ ತಪ್ಪಿಸುತ್ತಿದ್ದಾರೆ. ಮುಸ್ಲಿಂ ಹಾಗೂ ದಲಿತರಲ್ಲಿ ಭಯದ ವಾತಾವರಣ ಸೃಷ್ಟಿಸಿ ದಂಗೆ ಎಬ್ಬಿಸುವ ಹುನ್ನಾರವನ್ನು ಕಾಂಗ್ರೆಸ್‌ ನಡೆಸುತ್ತಿದೆ ಎಂದು ಚಿತ್ರದುರ್ಗದ ಸಂಸದ ಹಾಗೂ ಮಾಜಿ ಡಿಸಿಎಂ ಗೋವಿಂದ ಕಾರಜೋಳ ಹೇಳಿದರು.

ಕನ್ನಡಪ್ರಭ ವಾರ್ತೆ ಮುಧೋಳ

ರಾಹುಲ್‌ ಗಾಂಧಿ ಅವರು 1994ರಿಂದ ಬ್ರಿಟಿಷ್ ಪೌರತ್ವ ಹೊಂದಿದ ಕೇಸ್‌ ಈಗ ಸುಪ್ರೀಂಕೋರ್ಟ್ ನಲ್ಲಿ ವಿಚಾರಣೆ ನಡೆಯುತ್ತಿದೆ. ಇದರಿಂದ ಬೆದರಿದ ಕಾಂಗ್ರೆಸ್‌ ಮುಖಂಡ ರಾಹುಲ್‌ ಗಾಂಧಿ ದೇಶದಲ್ಲಿ ನಡೆಯುತ್ತಿರುವ ಎಸ್ಐಆರ್ ಬಗ್ಗೆ ನೆಪದಲ್ಲಿ ಜನರು ಹಾಗೂ ಯುವಕರ ದಾರಿ ತಪ್ಪಿಸುತ್ತಿದ್ದಾರೆ. ಮುಸ್ಲಿಂ ಹಾಗೂ ದಲಿತರಲ್ಲಿ ಭಯದ ವಾತಾವರಣ ಸೃಷ್ಟಿಸಿ ದಂಗೆ ಎಬ್ಬಿಸುವ ಹುನ್ನಾರವನ್ನು ಕಾಂಗ್ರೆಸ್‌ ನಡೆಸುತ್ತಿದೆ ಎಂದು ಚಿತ್ರದುರ್ಗದ ಸಂಸದ ಹಾಗೂ ಮಾಜಿ ಡಿಸಿಎಂ ಗೋವಿಂದ ಕಾರಜೋಳ ಹೇಳಿದರು. ಮುಧೋಳದ ಅವರ ಸ್ವಗೃಹದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವೋಟ್ ಚೋರಿ ಬಗ್ಗೆ ಆರೋಪ ಮಾಡುತ್ತಿರುವುದು ಮೂರ್ಖತನದ ಪರಮಾವಾಧಿ. ಚುನಾವಣೆ ಆಯೋಗದ ಪ್ರತಿನಿಧಿಗಳಾಗಿ ನೌಕರರು ತಮ್ಮ ಕೆಲಸ ಮಾಡುತ್ತಿದ್ದಾರೆ. ಒಂದು ವೇಳೆ ವೋಟ್ ಚೋರಿಯಾಗಿದ್ದರೆ ಕೇರಳ, ಕರ್ನಾಟಕ, ಪಂಜಾಬ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರಗಳು ಬರಲು ಸಾಧ್ಯವಾಗುತ್ತಿತ್ತೇ ಎಂದು ಪ್ರಶ್ನಿಸಿದರು.

ಪಾಕಿಸ್ತಾನದ ಕೆಲವರು ಕೋಟಾ ನೋಟು ಸೃಷ್ಟಿಸಿ ದೇಶದ ಆರ್ಥಿಕ ವ್ಯವಸ್ಥೆ ಬುಡಮೇಲು ಮಾಡಲು ಹುನ್ನಾರ ನಡೆಸಿದಾಗ ಪ್ರಧಾನಿ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರ ನೋಟ್ ಬ್ಯಾನ್ ಮಾಡಿದಾಗಲೂ ಇದೇ ರೀತಿ ಕಾಂಗ್ರೆಸ್‌ನವರು ಅಪಪ್ರಚಾರ ಮಾಡಿದರು. 2019ರಲ್ಲಿ ಕೊರೊನಾ ಕಾಲದಲ್ಲಿ ಲಸಿಕೆ ಹಾಕಿಸುವಾಗ ಲಸಿಕೆಯಿಂದ ಪ್ರಾಣಕ್ಕೆ ಕುತ್ತು ಇದೆ ಎಂದು ಅಪಪ್ರಚಾರ ಮಾಡಿದರು. ಈ ಕುರಿತು ಅಧಿವೇಶನದಲ್ಲಿ ಚರ್ಚೆ ಮಾಡದೆ ಹೊರಗಡೆ ನಿಂತು ಬೀದಿ ರಂಪ ಮಾಡಿದರು. ಈ ಕುರಿತು ನ್ಯಾಯಾಲಯದ ಮೇಲೂ ಸಹ ಅನುಮಾನ ವ್ಯಕ್ತಪಡಿಸಿದರು. ನೀಟ್ ಪರೀಕ್ಷೆ ಬಗ್ಗೆಯೂ ಗೊಂದಲ ಸೃಷ್ಟಿಸಿದರು. ಪದೇ ಪದೆ ಸೋಲಿನ ಹತಾಶೆಯಿಂದಾಗಿ ಕಾಂಗ್ರೆಸ್ಈ ರೀತಿ ಕೆಲಸ ಮಾಡುತ್ತಿದೆ. ರಾಹುಲ್ ಗಾಂಧಿ‌ ಅವರು ಪ್ರಧಾನಿಯಾಗುವ ಏಕೈಕ ಉದ್ದೇಶದಿಂದ ಇಂತಹ ಕೆಲಸ ಮಾಡುತ್ತಿದ್ದಾರೆ ಎಂದು ದೂರಿದರು.

ಅವರಿಗೆ ದಲಿತರ ಬಗ್ಗೆ ಕಾಳಜಿ ಇದ್ದಿದ್ದರೆ ಕರ್ನಾಟಕದಲ್ಲಿ ₹52 ಸಾವಿರ ಕೋಟಿ ಎಸ್ಇಪಿ ಮತ್ತು ಟಿಎಸ್ಪಿ ಅನುದಾನವನ್ನು ಬೇರೆ ಉದ್ದೇಶಕ್ಕೆ ಬಳಸಿಕೊಂಡಿದ್ದು, ಅದನ್ನು ಮತ್ತೆ ವಾಪಸ್ ಪಡೆದು ದಲಿತರ ಉದ್ಧಾರಕ್ಕೆ ಬಳಕೆ ಮಾಡಿಕೊಳ್ಳಬೇಕೆಂದು ರಾಜ್ಯದ ಮುಖ್ಯಮಂತ್ರಿಗಳಿಗೆ ಸೂಚಿಸಬೇಕೆಂದು ಒತ್ತಾಯಿಸಿದರಲ್ಲದೆ, ಚುನಾವಣೆ ಕಚೇರಿಯಲ್ಲಿ‌ ಮುಖ್ಯಮಂತ್ರಿ ತಮ್ಮ ಸಂಪುಟ ಸಹದ್ಯೋಗಿಗಳೊಂದಿಗೆ ಪ್ರತಿಭಟನೆ ಮಾಡಲು ಕಾನೂನಿನಲ್ಲಿ ಅವಕಾಶವಿಲ್ಲ. ರಾಜ್ಯಪಾಲರು ಮಧ್ಯ ಪ್ರವೇಶ ಮಾಡಿ ಸರ್ಕಾರವನ್ನು ಅಮಾನತಿನಲ್ಲಿಡಬೇಕು ಎಂದು ಆಗ್ರಹಿಸಿದರು.

ಫಾರ್ಮ್ 7 ಅಕ್ರಮವಲ್ಲ. ಸಂಶಯದ ಮೇಲೆ ಬಂದ ಅರ್ಜಿಯನ್ನು ಪರಿಶೀಲಿಸಿ ಸರಿಯಿದ್ದರೆ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಅರ್ಜಿ ತಿರಸ್ಕರಿಸಬೇಕು. ಅದನ್ನು ಬಿಜೆಪಿ ಕಾರ್ಯಕರ್ತರನ್ನು ಪೊಲೀಸ್ ಠಾಣೆಗೆ ಕರೆಸಿಕೊಂಡು ತನಿಖೆ ಮಾಡುವುದನ್ನು ನಿಲ್ಲಿಸಬೇಕು. ಪೊಲೀಸರು ಈ ಕ್ರಮವನ್ನು ಖಂಡಿಸಿ ಜನರು ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಬೇಕು ಎಂದು ಹೇಳಿದರು.

ಸಿಜೆಪಿ ಮುಖ್ಯಸ್ಥ ದೀಪ್ಕೆ ನೆಹರೂ ಅವರೇ ಅಂಬೇಡ್ಕರ್ ಅವರನ್ನು ಮುನ್ನೆಲೆಗೆ ತಂದಿದ್ದರು ಎಂದು ಹೇಳಿಕೆ ನೀಡಿರುವುದು ಖಂಡನೀಯ‌. ಅಂಬೇಡ್ಕರ್ ಅವರ ತಮ್ಮ ಜ್ಞಾನ ಪಾಂಡಿತ್ಯದಿಂದ ಜಗತ್ತಿನಲ್ಲಿ ತಮ್ಮನ್ನು ತಾವು ಗುರುತಿಸಿಕೊಂಡಿದ್ದಾರೆ ಹೊರತು ಯಾರೂ ಅವರನ್ನು ಬೆಳಕಿಗೆ ತಂದಿಲ್ಲ. ಅವರನ್ನು‌ ಲೋಕಸಭೆಗೆ ಕಳಿಸದೆ ನೆಹರೂ ಅವರೇ ಅಂಬೇಡ್ಕರ್ ಅವರ ಹಿನ್ನೆಡೆಗೆ ಕಾರಣರಾಗಿದ್ದಾರೆ. ನೆಹರೂ ಅವರು ಎಂದಿಗೂ ದಲಿತರಿಗೆ ಸಹಾಯ ಮಾಡಿಲ್ಲ ದೀಪ್ಕೆ ಅವರು ತಿಳಿದು ಮಾತನಾಡಬೇಕೆಂದರು.

ಬಿಜೆಪಿ ಗ್ರಾಮೀಣ ಘಟಕದ ಅಧ್ಯಕ್ಷ ಸಂಗಣ್ಣಗೌಡ ಪಾಟೀಲ, ನಗರ ಘಟಕ ಅಧ್ಯಕ್ಷ ಕರಬಸಯ್ಯ ಹಿರೇಮಠ, ಬಿಜೆಪಿ ಮುಖಂಡರಾದ ಕೆ.ಆರ್.ಮಾಚಪ್ಪನವರ, ಕಲ್ಲಪ್ಪ ಸಬರದ, ಅರುಣ ಕಾರಜೋಳ, ಸೋನಾಪ್ಪಿ ಕುಲಕರ್ಣಿ, ಸದಾಶಿವ ತೇಲಿ, ನಾಗಪ್ಪ ಅಂಬಿ, ಶ್ರೀಶೈಲ ಚಿನ್ನಣ್ಣವರ ಸೇರಿದಂತೆ ಇತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಿಬ್ಬಂದಿ ಕೊರತೆ; ಸಾರ್ವಜನಿಕ ಸೇವೆಗಳಿಗೆ ಅಡಚಣೆ
ಶೇಡಬಾಳದಲ್ಲಿ ಚಿರತೆ ಹೆಜ್ಜೆ ಗುರುತು ಪತ್ತೆ