ಉದ್ದೇಶಪೂರ್ವಕವಾಗಿ ನಿರ್ವಾಹಕನ ಮೇಲೆ ಪೋಕ್ಸೋ ಕೇಸ್‌: ರಾಮಲಿಂಗಾರೆಡ್ಡಿ

KannadaprabhaNewsNetwork |  
Published : Feb 25, 2025, 12:52 AM IST
ಹಲ್ಲೆಗೊಳಗಾದ ಬಸ್‌ ನಿರ್ವಾಹಕನ ಆರೋಗ್ಯವನ್ನು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ವಿಚಾರಿಸಿದರು. | Kannada Prabha

ಸಾರಾಂಶ

ಬಸ್‌ ನಿರ್ವಾಹನ ಮೇಲೆ ಬೇಕೆಂತಲೇ ಪೋಕ್ಸೊ ಪ್ರಕರಣದ ಕುರಿತು ದೂರು ಕೊಟ್ಟಿದ್ದಾರೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಹೇಳಿದರು.

ಕನ್ನಡಪ್ರಭ ವಾರ್ತೆ ಬೆಳಗಾವಿ

ಬಸ್‌ ನಿರ್ವಾಹನ ಮೇಲೆ ಬೇಕೆಂತಲೇ ಪೋಕ್ಸೊ ಪ್ರಕರಣದ ಕುರಿತು ದೂರು ಕೊಟ್ಟಿದ್ದಾರೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಹೇಳಿದರು.

ನಗರದಲ್ಲಿ ಸೋಮವಾರ ಜಿಲ್ಲಾಸ್ಪತ್ರೆಯಲ್ಲಿ ಬಸ್‌ ನಿರ್ವಾಹಕ ಮಹಾದೇವಪ್ಪ ಹುಕ್ಕೇರಿ ಅವರ ಆರೋಗ್ಯ ವಿಚಾರಿಸಿದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

ಹಲ್ಲೆಗೊಳಗಾದ ಮಹಾದೇವಪ್ಪ ಹುಕ್ಕೇರಿ ಅದೇ ಮಾರ್ಗದಲ್ಲಿ ಕೆಲಸ ಮಾಡುತ್ತಾರೆ. ಅಂದು ಇಬ್ಬರು ಅಪ್ರಾಪ್ತರು ಬಸ್‌ನಲ್ಲಿ ಪ್ರಯಾಣಿಸುತ್ತಿದ್ದರು. ಇಬ್ಬರೂ ಜಿರೋ ಟಿಕೆಟ್‌ ಪಡೆದು ಪ್ರಯಾಣ ಮಾಡುತ್ತಿದ್ದರು. ಇದನ್ನು ಪ್ರಶ್ನೆ ಮಾಡಿದ ನಿರ್ವಾಹಕನಿಗೆ ಮರಾಠಿ ಬರಲ್ಲ, ಅವರಿಗೆ ಕನ್ನಡ ಬರಲ್ಲ. ಹಾಗಾಗಿ ಮಾತಿಗೆ ಮಾತು ಬೆಳೆದಿದೆ. ಯುವಕ ತನ್ನ ಸ್ನೇಹಿತರನ್ನು ಕರೆಸಿ ಹಲ್ಲೆ ಮಾಡಿಸಿದ್ದಾನೆ ಎಂದರು.

ನಿರ್ವಾಹಕರು ದೂರು ನೀಡಿದ ಬಳಿಕ ಐವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಬಳಿಕ ಅಪ್ರಾಪ್ತೆಯು ನಿರ್ವಾಹಕನ ವಿರುದ್ಧ ಬೇಕೆಂತಲೇ ಪೋಕ್ಸೋ ಪ್ರಕರಣ ದಾಖಲಿಸಿದ್ದಾಳೆ. ಈ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂದು ತಿಳಿಸಿದರು.

ಕಂಡಕ್ಟರ್ ಆರೋಗ್ಯ ಸ್ಥಿರವಾಗಿದೆ. ಏನು ತೊಂದರೆ ಇಲ್ಲ. ನಮ್ಮ ಎಂಡಿ, ಸ್ಥಳೀಯ ಅಧಿಕಾರಿಗಳು ಆರೋಗ್ಯ ವಿಚಾರಣೆ ಮಾಡುತ್ತಿದ್ದಾರೆ. ಪೋಕ್ಸೋ ಕೇಸ್‌ನಿಂದ ಚಿಂತೆ ಹಚ್ಚಿಕೊಂಡಿದ್ದಾರೆ. ನಮ್ಮ ಎಂಡಿ, ಕಮಿಷನರ್ ಮಾತನಾಡಿದ್ದಾರೆ. ಸುಳ್ಳು ಕೇಸ್ ಕೊಟ್ಟಿದ್ದಾರೆ. ಏನ ಕಂಪ್ಲೀಂಟ್ ಕೊಟ್ಟರೂ ತನಿಖೆ ಮಾಡುತ್ತಾರೆ ಎಂದ ಅವರು, ಪೋಕ್ಸೋ ಕಾಯ್ದೆ ಪ್ರಕರಣಕ್ಕೂ ಮೊದಲು ಪೊಲೀಸರು ಕಾಮನ್‌ಸೆನ್ಸ್‌ ಉಪಯೋಗಿಸಬೇಕಿತ್ತು. ಬಸ್‌ನಲ್ಲಿ 90 ಜನ ಪ್ರಯಾಣ ಮಾಡುತ್ತಿದ್ದರು. ರಾಜ್ಯದಲ್ಲಿ ಪ್ರತಿದಿನ 1ಲಕ್ಷ 72ಸಾವಿರ ಟ್ರಿಪ್ ಇರುತ್ತದೆ. 65 ವರ್ಷಗಳಿಂದ ನಮ್ಮ ಇಲಾಖೆ ನೌಕರರ ಮೇಲೆ ಈ ರೀತಿಯ ದೂರು ಬಂದಿಲ್ಲ. ಉದ್ದೇಶಪೂರ್ವಕವಾಗಿ ಪೋಕ್ಸೋ ಕೇಸ್ ಕೊಟ್ಟಿದ್ದಾರೆ. ಪೋಕ್ಸೋ ಕೇಸ್ ದಾಖಲಿಸಿದ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳುವಂತೆ ಈಗಾಗಲೇ ಎಂಡಿ ಮಾತನಾಡಿದ್ದಾರೆ. ನಾನು ಕೂಡ ಈ ಸಂಬಂಧ ಗೃಹ ಸಚಿವರ ಜೊತೆಗೆ ಮಾತುಕತೆ ನಡೆಸುತ್ತೇನೆ ಎಂದು ಹೇಳಿದರು.

ಮಹಾದೇವಪ್ಪ ಪರವಾಗಿ ಎಲ್ಲರೂ ಇದ್ದಾರೆ. ಈ ತರದ ಬೆಳವಣಿಗೆ ಆದಾಗ ಬಸ್‌ಗಳಿಗೆ ಮಸಿ ಬಳಿಯೋದು ಅರ್ಥವಿಲ್ಲ. ಇದರಿಂದ ಎರಡೂ ರಾಜ್ಯಗಳು ಸಾರಿಗೆ ಇಲಾಖೆಗಳಿಗೆ ನಷ್ಟ ಆಗುತ್ತದೆ. ಇದೊಂದು ಕ್ಷುಲ್ಲಕ ವಿಚಾರ ಅಂತಾ ಹೇಳಬಹುದು. ಈಗಾಗಲೇ ತಪ್ಪ ಮಾಡಿದವರು ಅರೆಸ್ಟ್ ಮಾಡಿ ಜೈಲಿಗೆ ಕಳುಹಿಸಿದ್ದಾರೆ ಎಂದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ