- ಪಾಲಿಕೆಯಲ್ಲಿ ಕನ್ನಡ ರಾಜ್ಯೋತ್ಸವ: ಕವಿಗೋಷ್ಠಿ ಕಾರ್ಯಕ್ರಮ, ಸನ್ಮಾನ - - - ಕನ್ನಡಪ್ರಭ ವಾರ್ತೆ ದಾವಣಗೆರೆ
ನಗರದ ಮಹಾನಗರ ಪಾಲಿಕೆ ರಂಗಮಂದಿರದಲ್ಲಿ ಶುಕ್ರವಾರ ದಾವಣಗೆರೆ ಮಹಾನಗರ ಪಾಲಿಕೆ, ಕನ್ನಡಪರ ಸಂಘಟನೆಗಳು, ಪತ್ರಕರ್ತರ ಹಾಗೂ ಚುಟುಕು ಸಾಹಿತ್ಯ ಪರಿಷತ್ತು ಸಹಯೋಗದಲ್ಲಿ 69ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಅಂಗವಾಗಿ ಆಯೋಜಿಸಿದ್ದ ಕವಿಗೋಷ್ಠಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಕವಿತೆ, ಕವನಗಳಿಗೆ ಲೋಕದ ಅಂಕುಡೊಂಕುಗಳನ್ನು ತಿದ್ದುವ ಶಕ್ತಿ ಇದೆ. ಕರಾಳ ಶಕ್ತಿಗಳು ಇಂದು ವಿಜೃಂಭಣೆಯಿಂದ ಮೆರೆಯುತ್ತಿವೆ. ಈ ದೇಶದ, ಈ ನಾಡಿನ ಸಂಸ್ಕೃತಿ, ಪ್ರೀತಿ, ಭ್ರಾತೃತ್ವ ಕಡಿಮೆಯಾಗಿದೆ. ಜನ ದ್ವೇಷ, ಹಿಂಸೆಗಳ ಬಗ್ಗೆ, ಜಾತಿ-ಜಾತಿ, ದೇಶ-ದೇಶ, ಪ್ರಾಂತ್ಯ-ಪ್ರಾಂತ್ಯಗಳ ಬಗ್ಗೆ ಮಾತನಾಡುತ್ತಾರೆ. ನಮ್ಮಲ್ಲಿ ಏನು ಒಳ್ಳೆತನ ಇದೆಯೋ ಅದನ್ನು ಯಾರೂ ಹೇಳುತ್ತಿಲ್ಲ. ನಮ್ಮಲ್ಲಿರುವ ವ್ಯತ್ಯಾಸಗಳನ್ನು ಹೇಳುತ್ತಿದ್ದಾರೆ ಎಂದರು.ಇಂದು ಜನ ಜೀವದ ಬಗ್ಗೆ ಮಾತನಾಡುತ್ತಾರೆ. ಜೀವ ನಾವು ಕೇಳಿ ಬಂದಿಲ್ಲ, ಹೇಳಿ ಹೋಗಲ್ಲ. ಅಪ್ಲಿಕೇಷನ್ ಹಾಕಿ ಈ ಧರ್ಮ, ಈ ತಂದೆ- ತಾಯಂದರಿಗೆ ಹುಟ್ಟುತ್ತೇನೆ ಎಂದು ಕೇಳಿ ಬಂದಿಲ್ಲ. ಎಲ್ಲ ಧರ್ಮಗಳು ಅವರ ಸಮಕಾಲೀನ ಭಾಷೆಯಲ್ಲಿ ಮನುಷ್ಯ ಹೇಗೆ ಉತ್ತಮವಾಗಿ ಬದುಕಬಹುದು ಎಂಬುದನ್ನು ಹೇಳಿದ್ದಾರೆ. ಎಲ್ಲರೂ ದೇವರಲ್ಲಿ ಕೇಳಿಕೊಳ್ಳುವುದು ನನಗೆ ಆಯಾಸವಿಲ್ಲದ ಮರಣ ಕೊಡು, ಯಾರ ಹಂಗಿನಲ್ಲೂ ಬದುಕಲು ಬಿಡಬೇಡ, ಕೇವಲ ನಿನ್ನ ಹಂಗಿನಲ್ಲಿ ಇರಲು ವ್ಯವಸ್ಥೆ ಮಾಡು. ನನ್ನ ಜೊತೆಗೆ ನೀನು ಇರು ಎಂದು ಪ್ರಾರ್ಥಿಸುತ್ತಾರೆ ಎಂದು ಹೇಳಿದರು.
ಚುಸಾಪ ಜಿಲ್ಲಾಧ್ಯಕ್ಷ ಗುಂಡಗಟ್ಟಿ ರಾಜಶೇಖರ ಅಧ್ಯಕ್ಷತೆ ವಹಿಸಿ ಮಾತನಾಡಿ, ಪಾಲಿಕೆಯಲ್ಲಿನ ಕನ್ನಡ ರಾಜ್ಯೋತ್ಸವದಲ್ಲಿ ಚುಟುಕು ಸಾಹಿತ್ಯ ಪರಿಷತ್ತು ಒಂದು ಅಂಗ. ಪ್ರತಿವರ್ಷ ಜಿಲ್ಲೆಯ ವಿವಿಧೆಡೆಯಿಂದ ಪಾಲಿಕೆಯಲ್ಲಿ ನಡೆಯುವ ರಾಜ್ಯೋತ್ಸವದಲ್ಲಿ ನಡೆಯುವ ಕವಿಗೋಷ್ಠಿ ಕಾರ್ಯಕ್ರಮಗಳಿಗೆ ಬರುತ್ತಾರೆ. ಕವಿಗಳಿಗೆ ವೇದಿಕೆಯನ್ನು ಕಲ್ಪಿಸುವುದು ಚುಟುಕು ಸಾಹಿತ್ಯ ಪರಿಷತ್ತು ಕರ್ತವ್ಯವಾಗಿದೆ ಎಂದು ತಿಳಿಸಿದರು.
- - - -29ಕೆಡಿವಿಜಿ31: ದಾವಣಗೆರೆಯ ಮಹಾನಗರ ಪಾಲಿಕೆಯಲ್ಲಿ ಕನ್ನಡ ರಾಜ್ಯೋತ್ಸವ ಅಂಗವಾಗಿ ನಡೆದ ಕವಿಗೋಷ್ಠಿ ಕಾರ್ಯಕ್ರಮವನ್ನು ಮೇಯರ್ ಕೆ.ಚಮನ್‌ಸಾಬ್ ಉದ್ಘಾಟಿಸಿದರು.