ಜಯನಗರ ಠಾಣೆ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿ, 2 ಮನೆ ಕೆಲಸದವರಿಂದ ಕಳ್ಳತನ ಪ್ರಕರಣ
ಕನ್ನಡಪ್ರಭ ವಾರ್ತೆ ಮೈಸೂರು
ನಗರ ಪೊಲೀಸ್ ಘಟಕದಿಂದ ಕಳೆದ 3 ತಿಂಗಳಲ್ಲಿ 41 ಕಳವು, 3 ವಂಚನೆ ಪ್ರಕರಣಗಳು ಪತ್ತೆಯಾಗಿದ್ದು, 2.09 ಕೋಟಿ ರೂ. ಮೌಲ್ಯದ 1 ಕೆ.ಜಿ. 578 ಗ್ರಾಂ ಚಿನ್ನಾಭರಣ, 3 ಕೆ.ಜಿ 578 ಗ್ರಾಂ ಬೆಳ್ಳಿ ಪದಾರ್ಥ, 10 ವಾಹನಗಳು ಮತ್ತು 2.76 ಲಕ್ಷ ಹಣ ಮತ್ತು ಇತರೆ ಸ್ವತ್ತುಗಳನ್ನು ವಶಪಡಿಸಿಕೊಂಡಿದ್ದಾರೆ.ಕಳೆದ 3 ತಿಂಗಳಲ್ಲಿ 1 ದರೋಡೆ ಸಂಚು, 2 ಸುಲಿಗೆ, 10 ಕನ್ನ ಕಳುವು, 9 ಮನೆ ಕಳ್ಳತನ, 4 ಮನೆ ಕೆಲಸದವರಿಂದ ಕಳ್ಳತನ, 10 ವಾಹನ ಕಳ್ಳತನ, 5 ಸಾಮಾನ್ಯ ಕಳ್ಳತನ ಹಾಗೂ 3 ವಂಚನೆ ಪ್ರಕರಣ ಸೇರಿದಂತೆ ಒಟ್ಟು 44 ಪ್ರಕರಣಗಳನ್ನು ಪತ್ತೆ ಮಾಡಿದ್ದು, ಈ ಪ್ರಕರಣಗಳಿಂದ ಒಟ್ಟು 2.09 ಕೋಟಿ ರೂ. ಮೌಲ್ಯದ ಚಿನ್ನಾಭರಣ, ಬೆಳ್ಳಿ ಪದಾರ್ಥ, ವಾಹನಗಳು, ಹಣ ಹಾಗೂ ಇತರೇ ಮಾಲು ವಶಪಡಿಸಿಕೊಂಡು, ಈ ಪ್ರಕರಣಗಳಲ್ಲಿ ಒಟ್ಟು 55 ಜನ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್ ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಪ್ರಮುಖ ಪತ್ತೆ ಕಾರ್ಯಮಂಡಿ ಠಾಣೆ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿ, ವಂಚನೆ ಪ್ರಕರಣಕ್ಕೆ ಸಂಬಂಧಪಟ್ಟಂತೆ 90 ಲಕ್ಷ ಮೌಲ್ಯದ ಒಟ್ಟು 660 ಗ್ರಾಂ ಚಿನ್ನದ ಗಟ್ಟಿಯನ್ನು ವಶಪಡಿಸಿಕೊಂಡಿದ್ದಾರೆ.ವಿಜಯನಗರ ಠಾಣೆ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿ, 2 ಮನೆ ಕೆಲಸದವರಿಂದ ಕಳ್ಳತನ ಪ್ರಕರಣಗಳನ್ನು ಪತ್ತೆ ಮಾಡಿ 23.50 ಲಕ್ಷ ರೂ. ಮೌಲ್ಯದ 170 ಗ್ರಾಂ ಚಿನ್ನಾಭರಣ ಮತ್ತು ಗಾರ್ಮೆಂಟ್ಸ್ ಬಟ್ಟೆಗಳನ್ನು ವಶಪಡಿಸಿಕೊಂಡಿದ್ದಾರೆ.ಇನ್ನೂ ಸಿಸಿಬಿ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿ 3 ಕನ್ನಕಳುವು, 1 ಮನೆಕಳ್ಳತನ ಸೇರಿದಂತೆ ಒಟ್ಟು 4 ಕರಣಗಳನ್ನು ಪತ್ತೆ ಮಾಡಿ, 21 ಲಕ್ಷ ರೂ. ಮೌಲ್ಯದ 173 ಗ್ರಾಂ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದಾರೆ. ಅಲ್ಲದೆ, 1 ವಂಚನೆ ಪ್ರಕರಣ ಪತ್ತೆ ಮಾಡಿ 4 ಆರೋಪಿಗಳನ್ನು ಬಂಧಿಸಿ, 2.74 ಲಕ್ಷ ಹಣವನ್ನು ವಶಪಡಿಸಿಕೊಂಡಿದ್ದಾರೆ.ಸರಸ್ವತಿಪುರಂ ಠಾಣೆ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿ, 4 ಮನೆ ಕಳ್ಳತನ ಪ್ರಕರಣಗಳನ್ನು ಪತ್ತೆ ಮಾಡಿ 18.40 ಲಕ್ಷ ರೂ. ಮೌಲ್ಯದ 143 ಗ್ರಾಂ ಚಿನ್ನಾಭರಣ ವಶಪಡಿಸಿಕೊಂಡಿದ್ದಾರೆ.ಲಷ್ಕರ್ ಠಾಣೆ ಪೊಲೀಸರು 4 ಜನ ಆರೋಪಿಗಳನ್ನು ಬಂಧಿಸಿ 3 ಸಾಮಾನ್ಯ ಕಳುವು, 1 ಮನೆ ಕೆಲಸದವರಿಂದ ಕಳ್ಳತನ ಒಟ್ಟು 4 ಪ್ರಕರಣಗಳನ್ನು ಪತ್ತೆ ಮಾಡಿ, 11.45 ಲಕ್ಷ ರೂ. ಮೌಲ್ಯದ 202 ಗ್ರಾಂ ಚಿನ್ನಾಭರಣಗಳು, 196 ಗ್ರಾಂ ಬೆಳ್ಳಿ ಪದಾರ್ಥಗಳನ್ನು ವಶಪಡಿಸಿಕೊಂಡಿದ್ದಾರೆ.ನಜರ್ ಬಾದ್ ಠಾಣೆ ಪೊಲೀಸರು 2 ಆರೋಪಿಗಳನ್ನು ಬಂಧಿಸಿ, 1 ದೇವಸ್ಥಾನ ಕನ್ನಕಳುವು, 1 ವಂಚನೆ ಪ್ರಕರಣ ಪತ್ತೆ ಮಾಡಿ, 9.25 ಲಕ್ಷ ರೂ. ಮೌಲ್ಯದ 43 ಗ್ರಾಂ ಚಿನ್ನಾಭರಣ ಮತ್ತು 1 ಕೆ.ಜಿ 250 ಗ್ರಾಂ ಬೆಳ್ಳಿ ಪದಾರ್ಥಗಳನ್ನು ವಶಪಡಿಸಿಕೊಂಡಿದ್ದಾರೆ.ಡಿಸಿಪಿಗಳಾದ ಡಾ. ಹರ್ಷಾ ಪ್ರಿಯಂವದಾ, ಕೆ.ಎಸ್. ಸುಂದರ್‌ರಾಜ್, ಎಸಿಪಿಗಳಾದ ಮ್ಯಾಥ್ಯೂ ಥಾಮಸ್, ರಾಜೇಂದ್ರ, ರವಿಪ್ರಸಾದ್, ಕೆ.ಸಿ. ಪ್ರಕಾಶ್, ಎಸಿಪಿ ಮಹಮ್ಮದ್ ಶರೀಫ್ ರಾವುತರ್ ಇದ್ದರು.----ಕೋಟ್...ಕಳೆದ ಮೂರು ತಿಂಗಳಲ್ಲಿ ಸಾರ್ವಜನಿಕರು ಕಳೆದುಕೊಂಡಿದ್ದ ಮೊಬೈಲ್ ಗಳನ್ನು ಸಿಇಐಆರ್‌ಪೋರ್ಟಲ್ ನಲ್ಲಿ ಒಟ್ಟು 26.08 ಲಕ್ಷ ರೂ. ಮೌಲ್ಯದ 234 ಮೊಬೈಲ್ ಗಳನ್ನು ಪತ್ತೆ ಹಚ್ಚಿ ಮಾಲೀಕರಿಗೆ ಹಿಂದಿರುಗಿಸಲಾಗುತ್ತಿದೆ.- ಸೀಮಾ ಲಾಟ್ಕರ್, ನಗರ ಪೊಲೀಸ್ ಆಯುಕ್ತರು, ಮೈಸೂರು
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.