4 ಮನೆ ಕಳ್ಳತನ ಪ್ರಕರಣ ಬೇಧಿಸಿದ ಪೊಲೀಸರು

KannadaprabhaNewsNetwork |  
Published : Apr 14, 2025, 01:19 AM IST
ಕೂಡ್ಲಿಗಿ ಹಾಗೂ ಹಗರಿಬೊಮ್ಮನಹಳ್ಳಿ ಪೊಲೀಸ್ ಠಾಣೆಗಳ ವ್ಯಾಪ್ತಿಯ 4 ಕಳ್ಳತನ ಪ್ರಕರಣಗಳಲ್ಲಿ ಭಾಗಿಯಿಗಿದ್ದ ಮೂವರು ಆರೋಪಿಗಳನ್ನು ಕೂಡ್ಲಿಗಿ ಪೊಲೀಸರು  ಬಂಧಿಸಿ ಅವರಿಂದ 22 ಲಕ್ಷ ಮೌಲ್ಯದ ಬಂಗಾರ, ಬೆಳ್ಳಿಯ ಆಭರಣಗಳು ಹಾಗೂ  ಒಂದು ಕಾರನ್ನು ವಶಪಡಿಸಿಕೊಂಡಿದ್ದಾರೆ.    | Kannada Prabha

ಸಾರಾಂಶ

ಕೂಡ್ಲಿಗಿ ಪೊಲೀಸ್ ಠಾಣೆ ವ್ಯಾಪ್ತಿಯ 2 ಕಳ್ಳತನ ಪ್ರಕರಣಗಳು ಹಾಗೂ ಹಗರಿಬೊಮ್ಮನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ 2 ಸೇರಿ ಒಟ್ಟು 4 ಪ್ರಕರಣಗಳಲ್ಲಿ ಭಾಗಿಯಾಗಿದ್ದ ಮೂವರು ಆರೋಪಿಗಳನ್ನು ಕೂಡ್ಲಿಗಿ ಪೊಲೀಸರು ಬಂಧಿಸಿ ಅವರಿಂದ ₹22 ಲಕ್ಷ ಮೌಲ್ಯದ ಆಭರಣಗಳು, ಕಾರು ಹಾಗೂ ವಸ್ತು ವಶಪಡಿಸಿಕೊಂಡಿದ್ದಾರೆ.

ಕೂಡ್ಲಿಗಿ:

ಕೂಡ್ಲಿಗಿ ಪೊಲೀಸ್ ಠಾಣೆ ವ್ಯಾಪ್ತಿಯ 2 ಕಳ್ಳತನ ಪ್ರಕರಣಗಳು ಹಾಗೂ ಹಗರಿಬೊಮ್ಮನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ 2 ಸೇರಿ ಒಟ್ಟು 4 ಪ್ರಕರಣಗಳಲ್ಲಿ ಭಾಗಿಯಾಗಿದ್ದ ಮೂವರು ಆರೋಪಿಗಳನ್ನು ಕೂಡ್ಲಿಗಿ ಪೊಲೀಸರು ಬಂಧಿಸಿ ಅವರಿಂದ ₹22 ಲಕ್ಷ ಮೌಲ್ಯದ ಆಭರಣಗಳು, ಕಾರು ಹಾಗೂ ವಸ್ತು ವಶಪಡಿಸಿಕೊಂಡಿದ್ದಾರೆ.

ಹಗರಿಬೊಮ್ಮನಹಳ್ಳಿಯ ರಾಮ್ ರಹೀಮ್ ನಗರದ ಎಂ.ಇಂದ್ರ, ಮರಿಯಮ್ಮನಹಳ್ಳಿಯ ಜಿ.ಸತೀಶ್ ಗೌಡ, ಹಗರಿಬೊಮ್ಮನಹಳ್ಳಿ ತಾಲೂಕಿನ ಯಡ್ರಮ್ಮನಹಳ್ಳಿಯ ವಲ್ಲಿ ಅಲಿಯಾಸ್ ಸುಭಾಷ್ ಬಂಧಿತರು. ಈ ನಾಲ್ಕು ಪ್ರಕರಣಗಳು ಅಲ್ಲದೇ ಈ ಆರೋಪಿಗಳು ರಾಜ್ಯದ ಹಲವಾರು ಪ್ರಕರಣಗಳಲ್ಲಿ ಭಾಗಿಯಾಗಿದ್ದು ಅಂದಾಜು 10-15 ವಾರೆಂಟ್ ಗಳು ಬಾಕಿಯಿವೆ ಎಂದು ಪೊಲೀಸರು ತಿಳಿಸಿದ್ದಾರೆ.ಬಳ್ಳಾರಿ; ಚೀಟಿ ವ್ಯವಹಾರದಲ್ಲಿ ಕೋಟ್ಯಂತರ ರು. ವಂಚಿಸಿದ ಆರೋಪಿ ಪರಾರಿ:ಹಣ ಹೂಡಿಕೆ ಮಾಡಿದ 100 ದಿನಗಳಲ್ಲಿ ಡಬಲ್ ಹಣ ನೀಡುವುದಾಗಿ ಗ್ರಾಹಕರಿಗೆ ವಂಚಿಸುತ್ತಿದ್ದ ಇಲ್ಲಿನ ಗೋಲ್ಡ್‌ ರಸ್ತೆಯ ಕುಂಬಾರ ಓಣಿಯ ನಿವಾಸಿ ವಿಶ್ವನಾಥ್ ಎಂಬಾತ ನೂರಾರು ಜನರಿಗೆ ವಂಚಿಸಿ ಪರಾರಿಯಾಗಿದ್ದು, ಈತನ ಬಂಧನಕ್ಕಾಗಿ ಪೊಲೀಸರು ಬಲೆ ಬೀಸಿದ್ದಾರೆ.

ಆಂಧ್ರಪ್ರದೇಶದ ಗುಂತಕಲ್‌ನಿಂದ ಕೆಲವು ವರ್ಷಗಳ ಹಿಂದೆ ಬಳ್ಳಾರಿಗೆ ಬಂದಿದ್ದ ವಿಶ್ವನಾಥ್ ಎಂಬ ವಂಚಕ ಗೋಲ್ಡ್‌ಸ್ಮಿತ್ ರಸ್ತೆಯಲ್ಲಿ ವಾಸವಿ ಸ್ವಗೃಹ ಹೋಮ್ ನೀಡ್ ಆ್ಯಂಡ್ ಕನ್ಸಲ್ಟನ್ಸಿ ಹೆಸರಿನಲ್ಲಿ ಅಂಗಡಿ ತೆರೆದಿದ್ದ. ಸ್ಥಳೀಯರ ವಿಶ್ವಾಸ ಗಳಿಸಿ ಚೀಟಿ ವ್ಯವಹಾರ ಆರಂಭಿಸಿದ್ದ. 100 ದಿನಗಳಲ್ಲಿ ಹಣ ಡಬಲ್ ನೀಡುವುದಾಗಿ, ತನ್ನ ಅಂಗಡಿಯಲ್ಲಿ ದಿನಸಿ ಅಂಗಡಿಗಳನ್ನು ಖರೀದಿಸುವ ಗ್ರಾಹಕರಿಗೂ ವಿಶೇಷ ಆಫರ್‌ಗಳನ್ನು ನೀಡಿದ್ದ. ದಿನಸಿ ಸಾಮಗ್ರಿಗಳನ್ನು ಪಡೆದ ಮೊತ್ತದಷ್ಟು ಹಣ ನೀಡಿದರೆ, ಅಷ್ಟೇ ಮೊತ್ತವನ್ನು ಒಂದು ತಿಂಗಳಲ್ಲಿ ಹಿಂತಿರುಗಿಸಿ ಕೊಡುತ್ತಿದ್ದ. ಉದಾಹರಣೆಗೆ ದಿನಸಿಯ ಖರೀದಿಯ ಮೊತ್ತ ₹5 ಸಾವಿರ ಆಗಿದ್ದರೆ ₹10 ಸಾವಿರ ನೀಡಬೇಕು. ಈತ ₹10 ಸಾವಿರ ಹಣವನ್ನು ತಿಂಗಳಲ್ಲಿ ವಾಪಸ್ ಮಾಡುತ್ತಿದ್ದ. ಜತೆಗೆ ₹5 ಸಾವಿರ ಮೊತ್ತದ ದಿನಸಿ ಉಚಿತವಾಗಿ ನೀಡುತ್ತಿದ್ದ.ಕಡಿಮೆ ದಿನಗಳಲ್ಲಿ ಭಾರೀ ಲಾಭ ಸಿಗುತ್ತದೆ ಎಂಬ ಆಸೆಯಿಂದಾಗಿ ಸಾಕಷ್ಟು ಜನರು ಈತನ ಜತೆ ವ್ಯವಹಾರ ಮಾಡುತ್ತಿದ್ದರು. ಗ್ರಾಹಕರ ಜತೆ ಅತ್ಯಂತ ಸಭ್ಯನಂತೆ ವರ್ತಿಸುತ್ತಿದ್ದ ಈತ ಆರಂಭದಲ್ಲಿ ಹೇಳಿದ ಸಮಯಕ್ಕೆ ಹಣ ನೀಡಿ ಜನರ ವಿಶ್ವಾಸ ಗಳಿಸಿದ್ದ. ಹೀಗಾಗಿಯೇ ಈತ ಮೋಸದ ಜಾಲವನ್ನು ದೊಡ್ಡ ಪ್ರಮಾಣದಲ್ಲಿ ವಿಸ್ತರಿಸಿಕೊಳ್ಳಲು ಸಾಧ್ಯವಾಗಿತ್ತು. ಹೆಚ್ಚು ಜನರನ್ನು ಆಕರ್ಷಿಸಲು ಹೊಸ ಹೊಸ ಆಫರ್‌ಗಳನ್ನು ಪರಿಚಯಿಸುವ ಮೂಲಕ ಗ್ರಾಹಕರಿಂದ ಹಣ ಸಂಗ್ರಹಿಸುತ್ತಿದ್ದ. ಈತನನ್ನು ನಂಬಿದ್ದ ಜನರು ಹಣ ಡಬಲ್ ಆಗುತ್ತದೆ ಎಂಬ ಆಸೆಯಿಂದ ಬೇರೆಡೆಯಿಂದ ಹಣ ತಂದು ಈತನಿಗೆ ಸುರಿಯುತ್ತಿದ್ದರು.ಖಾಸಗಿ ಉದ್ಯೋಗಿಗಳು, ಸಣ್ಣಪುಟ್ಟ ಉದ್ಯಮಿಗಳು, ಶಿಕ್ಷಕರು, ಉಪನ್ಯಾಸಕರು, ಪೊಲೀಸರು, ಆಟೋ ಚಾಲಕರು, ಬೀದಿಬದಿಯಲ್ಲಿನ ಹೋಟೆಲ್ ವ್ಯಾಪಾರಿಗಳು ಸೇರಿದಂತೆ ಅನೇಕರು ಹಣ ಹೂಡಿಕೆ ಮಾಡಿದ್ದು, 1 ಸಾವಿರಕ್ಕೂ ಹೆಚ್ಚು ಜನರಿಗೆ ₹8 ಕೋಟಿಯಷ್ಟು ಹಣ ವಂಚನೆಯಾಗಿರಬಹುದು ಎಂದು ಪೊಲೀಸರು ಅಂದಾಜಿಸಿದ್ದಾರೆ. ಸಹಕಾರ ಸಂಘಗಳ ಸಹಾಯಕ ನಿಬಂಧಕರು ನೀಡಿದ ದೂರಿನ ಮೇರೆಗೆ ಬ್ರೂಸ್‌ಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು.ಕೆಲ ದಿನಗಳ ಹಿಂದೆ ವಿಶ್ವನಾಥ್ ಕುಟುಂಬ ಸಮೇತ ಪರಾರಿಯಾಗಿದ್ದು, ಈತನ ಹುಡಕಾಟಕ್ಕೆ ಪೊಲೀಸರು ತಂಡ ರಚಿಸಿಕೊಂಡು ಆಂಧ್ರಪ್ರದೇಶ ಮತ್ತಿತರ ಕಡೆ ತೆರಳಿದ್ದಾರೆ. ಆದರೆ, ಈ ವರೆಗೆ ಈತನ ಸುಳಿವು ಸಿಕ್ಕಿಲ್ಲ.

ಕಡಿಮೆ ಅವಧಿಯಲ್ಲಿ ಹಣ ಡಬಲ್ ಮಾಡಿಕೊಡುವ ವಂಚನೆಯ ಪ್ರಕರಣ ಇದೇ ಮೊದಲಲ್ಲ. ಬಳ್ಳಾರಿ ನಗರದಲ್ಲಿಯೇ ಈ ವರೆಗೆ ಹತ್ತಾರು ಬಾರಿ ಇಂತಹ ವಂಚನೆ ಪ್ರಕರಣಗಳು ನಡೆದಿದ್ದು, ಸಾರ್ವಜನಿಕರು ಹಣದ ಆಸೆಗೆ ಮೋಸ ಹೋಗುವ ಪ್ರಕರಣಕ್ಕೆ ಮಾತ್ರ ತೆರೆಬಿದ್ದಿಲ್ಲ. ಚೀಟಿ ವ್ಯವಹಾರದ ಮೂಲಕ ಜನರನ್ನು ವಂಚಿಸಿರುವ ವಿಶ್ವನಾಥನನ್ನು ಬಂಧನಕ್ಕೆ ಜಾಲ ಬೀಸಿದ್ದೇವೆ ಎಂದು ಎಸ್ಪಿ ಡಾ. ಶೋಭಾರಾಣಿ ತಿಳಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಿಪಿಎಲ್‌ ಮಾನದಂಡ ಬದಲಿಗೆ ಮುಂದಾದ ರಾಜ್ಯ
ಸರ್ಕಾರಿ ಶಾಲೆಗೆ ಶೀಘ್ರ 11000 ಶಿಕ್ಷಕರ ನೇಮಕ : ಮಧು