ಪೊಲೀಸರಿಗೆ ಆರೋಗ್ಯ ಕಾಳಜಿ ಅಗತ್ಯ

KannadaprabhaNewsNetwork |  
Published : Aug 22, 2025, 02:00 AM IST
ಆರಕ್ಷಕರಿಗೆ ಆರೋಗ್ಯ ತಪಾಸಣಾ ಶಿಬಿರ | Kannada Prabha

ಸಾರಾಂಶ

ಕನ್ನಡಪ್ರಭ ವಾರ್ತೆ ವಿಜಯಪುರ ದಿನದ 24 ಗಂಟೆಯೂ ಸಾರ್ವಜನಿಕರ ರಕ್ಷಣೆಯಲ್ಲಿ ತೊಡಗಿರುವ ಪೊಲೀಸರು ತಮ್ಮ ಆರೋಗ್ಯದ ಕಡೆಗೆ ಗಮನ ಹರಿಸುವುದು ಅತ್ಯವಶ್ಯವಾಗಿದೆ ಎಂದು ಐಆರ್‌ಬಿ ಪೊಲೀಸ್ ಬಟಾಲಿಯನ್ ಕಮಾಂಡೆಂಟ್ ಪ್ರಸನ್ನಕುಮಾರ ಹೇಳಿದರು.

ಕನ್ನಡಪ್ರಭ ವಾರ್ತೆ ವಿಜಯಪುರ

ದಿನದ 24 ಗಂಟೆಯೂ ಸಾರ್ವಜನಿಕರ ರಕ್ಷಣೆಯಲ್ಲಿ ತೊಡಗಿರುವ ಪೊಲೀಸರು ತಮ್ಮ ಆರೋಗ್ಯದ ಕಡೆಗೆ ಗಮನ ಹರಿಸುವುದು ಅತ್ಯವಶ್ಯವಾಗಿದೆ ಎಂದು ಐಆರ್‌ಬಿ ಪೊಲೀಸ್ ಬಟಾಲಿಯನ್ ಕಮಾಂಡೆಂಟ್ ಪ್ರಸನ್ನಕುಮಾರ ಹೇಳಿದರು.

ನಗರದ ಹೊರ ವಲಯದ ಅರಕೇರಿಯಲ್ಲಿ ಐಆರ್‌ಬಿ ಪೊಲೀಸ್ ಬಟಾಲಿಯನ್‌ನಲ್ಲಿ ಡಾ.ಅಮರೇಶ ಮಿಣಜಗಿ ನೇತೃತ್ವದಲ್ಲಿ ನಡೆದ ಆರಕ್ಷಕರ ನಡಿಗೆ ಆರೋಗ್ಯದ ಕಡೆಗೆ ಎಂಬ ಘೋಷವಾಕ್ಯದಡಿಯಲ್ಲಿ ಏರ್ಪಡಿಸಿದ್ದ ಬೃಹತ್ ರಕ್ತದಾನ ಶಿಬಿರ, ಆರೋಗ್ಯ ಉಚಿತ ತಪಾಸಣೆ ಮತ್ತು ಔಷಧಿ ವಿತರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಆರೋಗ್ಯವನ್ನು ಲೆಕ್ಕಿಸದೇ ಸದಾ ಕರ್ತವ್ಯ ಪ್ರಜ್ಞೆ ಮೆರೆಯುವ ಪೊಲೀಸರು ಇಂಥ ಶಿಬಿರದ ಪ್ರಯೋಜನ ಪಡೆದುಕೊಳ್ಳಬೇಕು. ಹಿತಮಿತ ಆಹಾರ ಸೇವನೆಯೊಂದಿಗೆ ವಾಯುವಿಹಾರ, ಯೋಗ, ಧ್ಯಾನಗಳನ್ನೂ ರೂಢಿಸಿಕೊಳ್ಳಬೇಕು. ಡಾ.ಅಮರೇಶ ಮಿಣಜಗಿಯವರ ಸಾಮಾಜಿಕ ಸೇವೆ ಹೀಗೆಯೇ ನಿರಂತರವಾಗಿ ಸಾಗಲಿ ಎಂದರು.

ಡಾ.ಅಮರೇಶ ಮಿಣಜಗಿ ಮಾತನಾಡಿ, ತಮ್ಮ ನೆಮ್ಮದಿಯನ್ನೂ ಲೆಕ್ಕಿಸದೇ ಸ್ವಾಸ್ಥ್ಯ ಸಮಾಜಕ್ಕಾಗಿ ಹಗಲಿರುಳು ದುಡಿಯುವ ಪೊಲೀಸರ ಸೇವೆ ಅನುಪಮವಾದುದು. ಪೊಲೀಸರ ಆರೋಗ್ಯದ ಸುರಕ್ಷತೆಗಾಗಿ ತಮ್ಮ ಸೇವೆ ನಿರಂತರವಾಗಿ ಇರಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ಶಿಬಿರದಲ್ಲಿ 20 ಜನ ರಕ್ತದಾನ ಮಾಡಿದರು. 200 ಕ್ಕೂ ಅಧಿಕ ಐಆರ್‌ಬಿ ಪೊಲೀಸರಿಗೆ ರಕ್ತದೊತ್ತಡ, ಮಧುಮೇಹ, ಇಸಿಜಿ, ಹೃದಯ ಸಂಬಂ ಕಾಯಿಲೆ ಸೇರಿದಂತೆ ಮತ್ತಿತರ ರೋಗಗಳ ತಪಾಸಣೆ ನಡೆಸಿ ಔಷದೋಪಚಾರ ನೀಡಲಾಯಿತು.

ನರರೋಗ ತಜ್ಞ ಡಾ.ಹಿತೇಂದ್ರ ನಾಯಕ, ಮನೋವೈದ್ಯೆ ಡಾ.ಸೌಮ್ಯ ನಾಯಕ, ಹೃದ್ರೋಗ ತಜ್ಞರಾದ ಡಾ.ದೀಪಕ ಕಡೇಲಿ, ಡಾ.ಶೀತಲ ನಾಯಕ, ಡಾ.ಈರಣ್ಣ ಬಂಡಿ, ಡಾ.ಸುರೇಶ ಕಾಗಲಕರರೆಡ್ಡಿ, ಡಾ.ಶಂಕರ ಬಡಿಗೇರ, ಡಾ.ಅಪೂರ್ವ ಮಾಗಿ, ಡಾ.ಅಶ್ವಿನಿ ಹೊಸಮನಿ, ಡಾ.ಅಕ್ಷಯ ಪಾಟೀಲ, ಬಸವರಾಜ ಮಾಗಿ, ಮೋಹನಕುಮಾರ ಶ್ರೀಕಂಡೆ, ಹುಸೇನ ಲಾಲಕೋಟ ಮತ್ತಿತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಾಜ್ಯದಲ್ಲಿ ಮದ್ಯ ಮಾರಾಟ ನಿಷೇಧವಾಗುತ್ತಾ ?
ಯಾವ ದೇವ್ರಿಗೆ ಪೂಜೆ ಮಾಡಿಸಿದ್ದೀರಿ? : ಮಧುಗೆ ರವಿ!