ಲೋಕಸಭೆ ಚುನಾವಣೆ ಭದ್ರತೆ: ಹೊನ್ನಾಳಿ ಸಂಚಲನ ಪಟ್ಟಣದಲ್ಲಿ ಪೊಲೀಸ್ ಪಥ ಸಂಚಲನ

KannadaprabhaNewsNetwork |  
Published : Apr 24, 2024, 02:24 AM IST
ಹೊನ್ನಾಳಿ ಫೋಟೋ 23ಎಚ್ಎಲ್ಐ1.  ಲೋಕಸಭಾ ಚುನಾವಣೆ ಹಿನ್ನಲೆಯಲ್ಲಿ ಅವಳಿ ತಾಲೂಕಿನಾಧ್ಯಂತ ಬಿಗಿ ಪೊಲೀಸ್ ಪಹರೆ ಹೆಚ್ಚು ಮಾಡಲಾಗಿದ್ದು,ಪೊಲೀಸ್  ಇನ್ಸಪೆಕ್ಟರ್  ಮುದ್ದುರಾಜ್ ನೇತೃತ್ವದಲ್ಲಿ ರ ಪೊಲೀಸರು ಹೊನ್ನಾಳಿ ನಗರದ ಪ್ರಮುಖ ರಸ್ತೆಗಳಲ್ಲಿ ಪಥ ಸಂಚಲನ ನಡೆಸಿದರು.ಪಿಎಸೈಗಳಾದ ನವೀನ್,ಶಾಂತಮ್ಮ,ನಿರ್ಮಲ,ಪೊಲಿಸ್ ಸಿಬ್ಬಂಧಿಗಳಾದ ಜಗದೀಶ್,ಬಸವರಾಜು,ಮಲ್ಲೇಶ್,ಸುನಿಲ್ ಹಾಗೂ ಇತರರು ಇದ್ದರು. | Kannada Prabha

ಸಾರಾಂಶ

ಲೋಕಸಭಾ ಚುನಾವಣೆ ಹಿನ್ನೆಲೆ ಹೊನ್ನಾಳಿ ಹಾಗೂ ನ್ಯಾಮತಿ ಅವಳಿ ತಾಲೂಕಿನಾದ್ಯಂತ ಪೊಲೀಸ್ ಪಹರೆ ಇನ್ನಷ್ಟು ಹೆಚ್ಚಿಸಲಾಗಿದೆ. ಈ ನಿಟ್ಟಿನಲ್ಲಿ ಸಾರ್ವಜನಿಕರಲ್ಲಿ ಮಾಹಿತಿ ಹಾಗೂ ಸುರಕ್ಷತಾ ಭಾವನೆ ಮೂಡಿಸುವ ಸಲುವಾಗಿ ಪೊಲೀಸ್ ಇನ್‌ಸ್ಪೆಕ್ಟರ್‌ ಮುದ್ದುರಾಜ್ ನೇತೃತ್ವದಲ್ಲಿ ಪೊಲೀಸರು ಹೊನ್ನಾಳಿ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಪಥ ಸಂಚಲನ ನಡೆಸಿದರು.

ಕನ್ನಡಪ್ರಭ ವಾರ್ತೆ ಹೊನ್ನಾಳಿ

ಲೋಕಸಭಾ ಚುನಾವಣೆ ಹಿನ್ನೆಲೆ ಹೊನ್ನಾಳಿ ಹಾಗೂ ನ್ಯಾಮತಿ ಅವಳಿ ತಾಲೂಕಿನಾದ್ಯಂತ ಪೊಲೀಸ್ ಪಹರೆ ಇನ್ನಷ್ಟು ಹೆಚ್ಚಿಸಲಾಗಿದೆ. ಈ ನಿಟ್ಟಿನಲ್ಲಿ ಸಾರ್ವಜನಿಕರಲ್ಲಿ ಮಾಹಿತಿ ಹಾಗೂ ಸುರಕ್ಷತಾ ಭಾವನೆ ಮೂಡಿಸುವ ಸಲುವಾಗಿ ಪೊಲೀಸ್ ಇನ್‌ಸ್ಪೆಕ್ಟರ್‌ ಮುದ್ದುರಾಜ್ ನೇತೃತ್ವದಲ್ಲಿ ಪೊಲೀಸರು ಹೊನ್ನಾಳಿ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಪಥ ಸಂಚಲನ ನಡೆಸಿದರು.

ಚುನಾವಣೆ ಪ್ರಚಾರ, ಸಭೆ ಸಮಾರಂಭ ಹಾಗೂ ಮತದಾನದ ವೇಳೆ ಯಾವುದೇ ಅಹಿತಕರ ಘಟನೆಗಳು ಸಂಭವಿಸದಂತೆ ಎಚ್ಚರಿಕೆ ವಹಿಸಲು ಈಗಾಗಲೇ ಅನೇಕ ಕ್ರಮಗಳನ್ನು ಕೈಗೊಂಡಿದ್ದೇವೆ ಎಂದು ಇನ್‌ಸ್ಪೆಕ್ಟರ್‌ ಮುದ್ದುರಾಜು ತಿಳಿಸಿದರು.

ಹೊನ್ನಾಳಿ ತಾಲೂಕಿನ ಗೊಲ್ಲರಹಳ್ಳಿ, ಕುಳಗಟ್ಟೆ, ಹೊಳೆ ಹರಳಹಳ್ಳಿಯಲ್ಲಿ ಚೆಕ್‍ಪೋಸ್ಟ್ ನಿರ್ಮಾಣ ಮಾಡಲಾಗಿದೆ. ಆ ರಸ್ತೆಗಳಲ್ಲಿ ಬರುವ ಎಲ್ಲ ವಾಹನಗಳನ್ನು ತಪಾಸಣೆ ಮಾಡುತ್ತಿದ್ದೇವೆ. ಚೆಕ್‍ಪೋಸ್ಟ್ ತಪ್ಪಿಸಿ, ವಾಮಮಾರ್ಗದಲ್ಲಿ ಹಣ ಅಥವಾ ಮದ್ಯವನ್ನು ಸಾಗಿಸುವವರ ಬಗ್ಗೆಯೂ ಎಚ್ಚರ ವಹಿಸಲಾಗಿದೆ ಎಂದು ಹೇಳಿದರು.

ಗ್ರಾಮೀಣ ಅಥವಾ ನಗರ ಪ್ರದೇಶಗಳಲ್ಲಿ ಅನಗತ್ಯವಾಗಿ ಸಾರ್ವಜನಿಕ ಶಾಂತಿಭಂಗ ಮಾಡುವವರ ಬಗ್ಗೆಯೂ ಪಟ್ಟಿ ಮಾಡಿ, ಅವರನ್ನು ಕರೆಯಿಸಿ ಎಚ್ಚರಿಕೆ ನೀಡಲಾಗಿದೆ ಎಂದರು.

ಪಿಎಸ್‌ಐಗಳಾದ ನವೀನ್, ಶಾಂತಮ್ಮ, ನಿರ್ಮಲ, ಪೊಲಿಸ್ ಸಿಬ್ಬಂದಿ ಜಗದೀಶ್, ಬಸವರಾಜು, ಮಲ್ಲೇಶ್, ಸುನಿಲ್ ಹಾಗೂ ಇತರರು ಪಥ ಸಂಚಲನದಲ್ಲಿ ಭಾಗವಹಿಸಿದ್ದರು.

- - - -23ಎಚ್ಎಲ್ಐ1:

ಲೋಕಸಭಾ ಚುನಾವಣೆ ಹಿನ್ನೆಲೆ ಹೊನ್ನಾಳಿ ಪಟ್ಟಣದಲ್ಲಿ ಪೊಲೀಸ್‌ ಇಲಾಖೆಯಿಂದ ಪ್ರಮುಖ ರಸ್ತೆಗಳಲ್ಲಿ ಪಥ ಸಂಚಲನ ನಡೆಸಲಾಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

5-6 ತಿಂಗಳಿಂದ ನೀರು ಪೋಲು: ಕ್ರಮಕೈಗೊಳ್ಳದ ಅಧಿಕಾರಿಗಳು
ತಮ್ಮ ಮೇಲಿನ ಆರೋಪ ಸುಳ್ಳು, ಆಧಾರ ರಹಿತ : ಮುನೀಶ್‌ ಮೌದ್ಗಿಲ್‌