ಜಾಹೀರಾತು ದರ ನಿಗದಿಗೆ ರಾಜಕೀಯ ಪಕ್ಷಗಳ ಸಭೆ

KannadaprabhaNewsNetwork | Published : Nov 20, 2023 12:45 AM

ಸಾರಾಂಶ

ಮುಂಬರುವ ಲೋಕಸಭೆ ಚುನಾವಣೆ-೨೦೨೪ರ ಹಿನ್ನೆಲೆ ಭಾರತ ಚುನಾವಣಾ ಆಯೋಗದ ಸೂಚನೆಯಂತೆ ಮುದ್ರಣ ಮತ್ತು ವಿದ್ಯುನ್ಮಾನ ಜಾಹೀರಾತು ದರಗಳ ಕುರಿತಂತೆ ವಿವಿಧ ರಾಜಕೀಯ ಪಕ್ಷಗಳ ಮುಖಂಡರೊಂದಿಗೆ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿಗಳಾದ ರಘುನಂದನ್ ಮೂರ್ತಿ ಚರ್ಚಿಸಿ ದರ ಅಂತಿಮಗೊಳಿಸಿದರು.ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶನಿವಾರ ಲೋಕಸಭೆ ಚುನಾವಣೆಗೆ ಸಂಬಂಧಿಸಿದಂತೆ, ವಿವಿಧ ರಾಜಕೀಯ ಪಕ್ಷಗಳು ಹಾಗೂ ಚುನಾವಣಾ ಅಭ್ಯರ್ಥಿಗಳು ನೀಡುವ ಟಿವಿ ಮಾಧ್ಯಮ, ರೆಡೀಯೋ ಹಾಗೂ ಪತ್ರಿಕಾ ಮಾಧ್ಯಮಗಳ ಚುನಾವಣಾ ಜಾಹೀರಾತುಗಳಿಗೆ ನಿಗದಿತ ದರ ನಿಗದಿಪಡಿಸುವ ಪೂರ್ವ ಸಿದ್ಧತಾ ಸಭೆ ನಡೆಯಿತು.

ಕನ್ನಡಪ್ರಭ ವಾರ್ತೆ ಹಾವೇರಿ

ಮುಂಬರುವ ಲೋಕಸಭೆ ಚುನಾವಣೆ-೨೦೨೪ರ ಹಿನ್ನೆಲೆ ಭಾರತ ಚುನಾವಣಾ ಆಯೋಗದ ಸೂಚನೆಯಂತೆ ಮುದ್ರಣ ಮತ್ತು ವಿದ್ಯುನ್ಮಾನ ಜಾಹೀರಾತು ದರಗಳ ಕುರಿತಂತೆ ವಿವಿಧ ರಾಜಕೀಯ ಪಕ್ಷಗಳ ಮುಖಂಡರೊಂದಿಗೆ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿಗಳಾದ ರಘುನಂದನ್ ಮೂರ್ತಿ ಚರ್ಚಿಸಿ ದರ ಅಂತಿಮಗೊಳಿಸಿದರು.

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶನಿವಾರ ಲೋಕಸಭೆ ಚುನಾವಣೆಗೆ ಸಂಬಂಧಿಸಿದಂತೆ, ವಿವಿಧ ರಾಜಕೀಯ ಪಕ್ಷಗಳು ಹಾಗೂ ಚುನಾವಣಾ ಅಭ್ಯರ್ಥಿಗಳು ನೀಡುವ ಟಿವಿ ಮಾಧ್ಯಮ, ರೆಡೀಯೋ ಹಾಗೂ ಪತ್ರಿಕಾ ಮಾಧ್ಯಮಗಳ ಚುನಾವಣಾ ಜಾಹೀರಾತುಗಳಿಗೆ ನಿಗದಿತ ದರ ನಿಗದಿಪಡಿಸುವ ಪೂರ್ವ ಸಿದ್ಧತಾ ಸಭೆ ನಡೆಯಿತು.

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಟಿವಿ, ರೇಡಿಯೋ ಹಾಗೂ ಪತ್ರಿಕಾ ಮಾಧ್ಯಮಗಳಿಗೆ ಆಯಾ ಮುದ್ರಣ ಮತ್ತು ವಿದ್ಯುನ್ಮಾನ ಮಾಧ್ಯಮಗಳ ಪ್ರಸಾರ ಸಂಖ್ಯೆಗಳಿಗೆ ಅನುಗುಣವಾಗಿ ಜಿಲ್ಲಾ, ಪ್ರಾದೇಶಿಕ ಹಾಗೂ ರಾಜ್ಯ ಮಟ್ಟದ ಆವೃತ್ತಿಗೆ ನಿದಿಪಡಿಸಿದ ದರವನ್ನು ಚುನಾವಣಾ ಜಾಹೀರಾತಿಗೂ ಅನ್ವಯ ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ವಿವರಿಸಿದರು.

ಸಭೆಯಲ್ಲಿ ಉಪಸ್ಥಿತರಿದ್ದ ವಿವಿಧ ರಾಜಕೀಯ ಪಕ್ಷಗಳ ಪದಾಧಿಕಾರಿಗಳು ಲೋಕಸಭೆ ಚುನಾವಣೆಗೆ ಸಂಬಂಧಿಸಿದಂತೆ ಮುದ್ರಣ ಮತ್ತು ವಿದ್ಯುನ್ಮಾನ ಮಾಧ್ಯಮಗಳ ಪತ್ರಿಕಾವಾರು ಹಾಗೂ ಟಿವಿವಾರು ಜಾಹೀರಾತು ದರಗಳ ಆವೃತ್ತಿವಾರು ಮಾಹಿತಿ ಪಡೆದು, ಕರ್ನಾಟಕ ಸರ್ಕಾರದ ವಾರ್ತಾ ಇಲಾಖೆ ನಿಗದಿಪಡಿಸಿದ ದರವನ್ನು ನಿಗದಿಪಡಿಸಲು ಸಮ್ಮತಿಸಿದರು.

ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಲೆಕ್ಕಾಧಿಕಾರಿ ವಸಂತಕುಮಾರ, ವಾರ್ತಾಧಿಕಾರಿ ಡಾ. ಬಿ.ಆರ್. ರಂಗನಾಥ್, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಉಪನಿರ್ದೇಶಕ ರಮೇಶ ಎಂ.ಎಸ್., ಕೈಗಾರಿಕಾ ಇಲಾಖೆ ಜಂಟಿ ನಿರ್ದೇಶಕ ವಿನಾಯಕ ಜೋಶಿ, ಚುನಾವಣಾ ತಹಸೀಲ್ದಾರ ರಾಜಕುಮಾರ ಮಡತೂರ್‌ಕರ್, ಹಾವೇರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಎಂ. ಮೈದೂರ, ಉಪಾಧ್ಯಕ್ಷ ಅಮೀರಖಾನ್ ಬೇಪಾರಿ, ಜಿಲ್ಲಾ ಯುವ ಕಾಂಗ್ರೆಸ್ ಪ್ರಸನ್ನ ಹಿರೇಮಠ, ಜೆಡಿಎಸ್ ಮಾಧ್ಯಮ ಮತ್ತು ಸಮನ್ವಯ ಸಮಿತಿ ಸಲಹೆಗಾರ ಪ್ರವೀಣಕುಮಾರ ವದ್ದಿಗೇರಿ, ರಾಣಿಬೆನ್ನೂರು ತಾಲೂಕು ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಸುಭಾಸಗೌಡ ರಾಮಲಿಂಗಣ್ಣನವರ ಉಪಸ್ಥಿತರಿದ್ದರು.

Share this article