ಕನ್ನಡಪ್ರಭ ವಾರ್ತೆ ಮೈಸೂರು
ನಗರದ ನ್ಯೂ ಸಯ್ಯಾಜಿರಾವ್ ರಸ್ತೆಯಲ್ಲಿರುವ ಜೀವದಾರ ರಕ್ತನಿಧಿ ಕೇಂದ್ರದಲ್ಲಿ ಪ್ರಜ್ಞಾವಂತ ನಾಗರಿಕ ವೇದಿಕೆಯು ಸ್ವಾತಂತ್ರ್ಯ ವೀರ ಸಾವರ್ಕರ್ ಜಯಂತಿ ಅಂಗವಾಗಿ ಗುರುವಾರ ಆಯೋಜಿಸಿದ್ದ ಸ್ವಯಂ ಪ್ರೇರಿತ ರಕ್ತದಾನ ಶಿಬಿರದಲ್ಲಿ ಅವರು ಮಾತನಾಡಿದರು.
ಇತ್ತೀಚೆಗಷ್ಟೇ ಸುಪ್ರೀಂಕೋರ್ಟ್ ರಾಹುಲ್ ಗಾಂಧಿಗೆ ಛೀಮಾರಿ ಹಾಕಿದೆ. ಇದರ ನಡುವೆ ಅನೇಕ ಯುವಕರು ಇಂದಿಗೂ ಸಾವರ್ಕರ್ ಹೆಸರಿನಲ್ಲಿ ಸೇವಾಕಾರ್ಯ ಮಾಡುತ್ತಿರುವುದು ಶ್ಲಾಘನಿಯ ಎಂದು ಅವರು ಹೇಳಿದರು.ಮಾಜಿ ಮೇಯರ್ ಸಂದೇಶ್ ಸ್ವಾಮಿ ಮಾತನಾಡಿ, ಸಾವರ್ಕರ್ ವಿಚಾರಗಳನ್ನು ಇಂದಿನ ಯುವಕರು ಓದಬೇಕು. ಸಾವರ್ಕರ್ ಬಗ್ಗೆ ರಾಜಕೀಯ ಕಾರಣಗಳಿಂದ ಅಪ ಪ್ರಚಾರಗಳಾಗುತ್ತಿದ್ದು, ಜನರೇ ಇಂತಹ ಸೇವಾ ಕಾರ್ಯಕ್ರಮಗಳ ಮೂಲಕ ಸೂಕ್ತ ಉತ್ತರ ನೀಡಬೇಕಿದೆ ಎಂದರು.
ಈ ಶಿಬಿರದಲ್ಲಿ 40 ಜನ ಸ್ವಯಂ ಪ್ರೇರಿತವಾಗಿ ರಕ್ತದಾನ ಮಾಡಿದರು. ಬಿಜೆಪಿ ಚಾಮುಂಡೇಶ್ವರಿ ನಗರ ಮಂಡಲ ಅಧ್ಯಕ್ಷ ರಾಕೇಶ್ ಭಟ್, ಜೀವದಾರ ರಕ್ತನಿಧಿ ಕೇಂದ್ರದ ನಿರ್ದೇಶಕ ಗಿರೀಶ್, ಮುಖಂಡರಾದ ನಾಗಮಣಿ, ಶಿವು ಪಟೇಲ್, ಸುಚೇಂದ್ರ, ಮಿರ್ಲೆ ಫಣೀಶ್, ಸುರೇಶ್, ಮಮತಾ ಮೊದಲಾದವರು ಇದ್ದರು.