ಕಲಾಲೋಕಕ್ಕೂ ಅಂಟಿದ ಮಾಲಿನ್ಯ

KannadaprabhaNewsNetwork |  
Published : Mar 18, 2026, 02:15 AM IST
ಪೋಟೊ17.11: ಕೊಪ್ಪಳ ನಗರದ ಗಾಣಿಗ ಭವನದಲ್ಲಿ ತಿರುಳನ್ನಡ ಸಾಹಿತಿಗಳ ಸಹಕಾರ ಸಂಘ ನಿ, ಗಾಣದ ಕಣ್ಣಪ್ಪ ಪತ್ತಿನ ಸಹಕಾರ ಸಂಘ ನಿ.ಕೊಪ್ಪಳ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಸಂಯುಕ್ತ ಆಶ್ರಯದಲ್ಲಿ ಪ್ರೊ ಕೋರಗಲ್ ವಿರೂಪಾಕ್ಷಪ್ಪನವರ ಎರಡು ಪುಸ್ತಕಗಳ ಬಿಡುಗಡೆ ಕಾರ್ಯಕ್ರಮದ ಉದ್ಘಾಟನೆ ನಡೆಯಿತು. | Kannada Prabha

ಸಾರಾಂಶ

ಯಾವುದೇ ಪುಸ್ತಕಗಳ ಬಿಡುಗಡೆಯ ಕಾರ್ಯಕ್ರಮದಲ್ಲಿ ಊರಿನ ಸಮಸ್ಯೆಯು ಅದರ ತಲೆಬರಹವಾಗಿ ಬಂದಿದ್ದು ಇದೆ ಮೊದಲು ಇರಬೇಕು.

ಕೊಪ್ಪಳ: ಒಂದು ಕಾಲಕ್ಕೆ ಗೋಡೆಗಳ ಮೇಲೆ ವಿಜಯನಗರದ ಉಕ್ಕು ನಮ್ಮ ಹಕ್ಕು ಎನ್ನುವ ಘೋಷಣೆ ಕೇಳುತ್ತಿದ್ದೇವು. ಮೂರು ದಶಕಗಳಲ್ಲಿ ಎಂತಹ ನಾಟಕೀಯ ಬದಲಾವಣೆಗಳಾಗಿವೆ.ಯಾವ ಕಾರ್ಖಾನೆಗಳು ದೇವರಂತೆ ಬಂದು ನಮ್ಮನ್ನು ಉದ್ದರಿಸಬೇಕು ಎಂದು ಯೋಚಿಸಿದ್ದೆವೋ ಅವು ಈಗ ಶಾಪಗ್ರಸ್ತವಾಗಿವೆ. ಮಕ್ಕಳಿಗೆ ಸಿಗುತ್ತಿರುವುದು ಧೂಳು ಮಲೀನ. ಸರ್ಕಾರವನ್ನು ಜಗತ್ತನ್ನು ಆಳುತ್ತಿರುವುದು ಕಾರ್ಪೋರೇಟ್ ಎಂದು ಹಿರಿಯ ಸಂಶೋಧಕ ಡಾ.ರಹಮತ್ ತರಿಕೆರಿ ಹೇಳಿದರು. ನಗರದ ಗಾಣಿಗೇರ ಭವನದಲ್ಲಿ ತಿರುಳನ್ನಡ ಸಾಹಿತಿಗಳ ಸಹಕಾರ ಸಂಘ ನಿ ಕೊಪ್ಪಳ, ಗಾಣದ ಕಣ್ಣಪ್ಪ ಪತ್ತಿನ ಸಹಕಾರ ಸಂಘ ನಿ ಕೊಪ್ಪಳ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಕೊಪ್ಪಳ ಸಂಯುಕ್ತಾಶ್ರಯದಲ್ಲಿ ನಡೆದ ಪ್ರೊ. ಕೋರಗಲ್ ವಿರೂಪಾಕ್ಷಪ್ಪನವರ ಎರಡು ಪುಸ್ತಕಗಳ ಬಿಡುಗಡೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಸಸಿಗೆ ನೀರು ಎರೆಯುವುದರ ಬದಲು ಸಸಿಯ ಮೇಲೆ ಕುಳಿತ ಧೂಳನ್ನು ನೀರು ಹಾಕಿ ತೊಳೆಯುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.

ಮಾಲಿನ್ಯ ಇದು ಗಾಳಿಗೆ ಸಂಬಂಧಿಸಿದ್ದಲ್ಲ, ಇದು ಪ್ರಜಾಸತ್ತೆಯ ಮಾಲಿನ್ಯ ಇದು.ಯಾವುದೇ ಪುಸ್ತಕಗಳ ಬಿಡುಗಡೆಯ ಕಾರ್ಯಕ್ರಮದಲ್ಲಿ ಊರಿನ ಸಮಸ್ಯೆಯು ಅದರ ತಲೆಬರಹವಾಗಿ ಬಂದಿದ್ದು ಇದೆ ಮೊದಲು ಇರಬೇಕು.

ಬರಹ ಎನ್ನುವುದು ಮದ್ಯಮ ವರ್ಗದವರ ವಿಲಾಸ ಅಲ್ಲ. ಜನರ ನೋವಿಗೆ ಮೀಡಿಯದಿದ್ದರೆ ಅದಕ್ಕೆ ಅರ್ಥವಿಲ್ಲ. ಕೊಪ್ಪಳ ನನ್ನನ್ನು ವೈಚಾರಿಕವಾಗಿ ಬೆಳೆಸಿದ ಕರ್ಮಭೂಮಿ.ಪುಸ್ತಕ ಬಹಳಷ್ಟಿವೆ.ಆದರೆ ವೈಚಾರಿಕ ಸ್ಪಷ್ಟತೆ ಮುಖ್ಯ.ಪ್ರಜಾಪ್ರಭುತ್ವಕ್ಕಷ್ಟೇ ಅಲ್ಲ ಇಂದಿನ ದಿನಗಳಲ್ಲಿ ಕಲಾಲೋಕಕ್ಕೂ ಮಾಲಿನ್ಯ ಆವರಿಸಿದೆ ಎಂದರು.

ವಿರುಪಾಕ್ಷಪ್ಪ ಕೊರಗಲ್ ಅವರ ಬರಹಗಳಲ್ಲಿ ಚಳವಳಿಯ ಅಂತಃಸತ್ವವಿದೆ.ಸೋಗಿಲ್ಲದ ಭಾಷೆ ಅವರದು. ಕೇವಲ ಕೊಪ್ಪಳ ಅಷ್ಟೇ ಅಲ್ಲದೇ ನಿಪ್ಪಾಣಿ ಹಾಗೂ ಹಾವೇರಿಯ ಭಾಷೆ ಇದೆ. ಕಣ್ಣಿಗೆ ಕಟ್ಟುವಂತೆ ಬರೆಯುತ್ತಾರೆ. 86 ವರ್ಷದಲ್ಲೂ ಸೃಜನಶೀಲರಾಗಿ ಬರೆಯುತ್ತಿದ್ದಾರೆ. ಬೌದ್ಧಿಕ ಎಚ್ಚರ ಇಷ್ಟು ವರ್ಷ ಕಾದಿಟ್ಟುಕೊಂಡಿದ್ದಾರೆ. ಮನುಷ್ಯರು ಸ್ಥಾನ ಬಲದಿಂದ ಅಲ್ಲ ಸಹಜ ಮಾನವೀಯ ವರ್ತನೆಗಳಿಂದ ದೊಡ್ಡವರಾಗಿರುವವರ ಬಗ್ಗೆ ಬರಹವಿದೆ.ಅಂತಃಕರಣದ ಸಾಹಿತಿ ವಿರುಪಾಕ್ಷಪ್ಪ ಕೊರಗಲ್. ಮನುಷ್ಯತ್ವದ ವಿಶ್ವಕೋಶ ತಮ್ಮ ಪುಟ್ಟ ಕೃತಿಯಲ್ಲಿ ನೀಡಿದ್ದಾರೆ.ಎಲ್ಲರೊಳಗೂ ದೊಡ್ಡ ಚೈತನ್ಯವಿದೆ. ಆ ಚೈತನ್ಯ ಗುರುತಿಸುವ ಬರಹಗಾರ ಕೊರಗಲ್ ಇದು ಫಿಲಾಸಫಿ ಎಂದು ಹೇಳಿದರು.

ಹಿರಿಯ ಸಾಹಿತಿ ಎ.ಎಂ. ಮದರಿ ಅವರು ರೇಷ್ಮೆ ಕೌದಿ (ವೈಚಾರಿಕ ಬರಹಗಳು) ಕುರಿತು ಮಾತನಾಡಿದರು.

ವೈತರಣಿಯಲ್ಲಿ ಹೆಣ್ಣು (ಕಥಾ ಸಂಕಲನ) ಕುರಿತು ಸಾವಿತ್ರಿ ಮುಜುಮದಾರ ಮಾತನಾಡಿದರು.

ಅಧ್ಯಕ್ಷತೆಯನ್ನು ಪ್ರೊ.ಅಲ್ಲಮಪ್ರಭು ಬೆಟ್ಟದೂರು ವಹಿಸಿಕೊಂಡಿದ್ದರು.ಕಾರ್ಯಕ್ರಮದಲ್ಲಿ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಎಚ್.ಎಸ್.ಪಾಟೀಲ್,ಹಿರಿಯ ಸಾಹಿತಿ ಡಾ. ಕೆ.ಬಿ.ಬ್ಯಾಳಿ, ಜಿಲ್ಲಾ ಗಾಣಿಗ ಸಮಾಜದ ಅಧ್ಯಕ್ಷ ತೋಟಪ್ಪ ಕಾಮನೂರ,ಉಪನ್ಯಾಸಕ ಡಾ.ಪ್ರವೀಣ ಪೊಲೀಸ್ ಪಾಟೀಲ, ಸಂಗನಗೌಡ ಬಿ.ಟಿ ಪಾಟೀಲ ಸೇರಿದಂತೆ ಅನೇಕರು ಇದ್ದರು.

ಲೇಖಕ ವಿರುಪಾಕ್ಷಪ್ಪ ಕೊರಗಲ್ ತಮ್ಮ ಕೊಪ್ಪಳದ ಸಾಹಿತ್ಯ ಬಳಗದ ಬದುಕಿನ ಒಡನಾಟವನ್ನು ಆತ್ಮೀಯವಾಗಿ ಸ್ಮರಿಸಿಕೊಂಡರು.ಅರುಣಾ ನರೇಂದ್ರ ಸ್ವಾಗತಿಸಿದರು. ನಿವೃತ್ತ ಉಪನ್ಯಾಸಕ ಶಂಭುಲಿಂಗಪ್ಪ ಹರಗೇರಿ ನಿರೂಪಿಸಿದರು. ವಿರುಪಾಕ್ಷಪ್ಪ ಕೊರಗಲ್ ರ ಕುಟುಂಬಸ್ತರು, ಬರಹಗಾರರು, ಸಾಹಿತ್ಯ ಅಭಿಮಾನಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಾಲಕ್ಕೆ ಹೆದರಿ ಗುತ್ತಲ ರೈತ ಆತ್ಮಹತ್ಯೆ
ರಂಜಾನ್, ಯುಗಾದಿ ಆಚರಣೆ ಸೌಹಾರ್ದತೆಯ ಸಂಕೇತ-ಬಿ.ಸಿ. ಪಾಟೀಲ್‌