ಕಳಪೆ ಗುಣಮಟ್ಟದ ವಿದ್ಯಾರ್ಥಿ ನಿಲಯ: ಬಿಲ್‌ ಪಾವತಿಸದಂತೆ ಸೂಚನೆ

KannadaprabhaNewsNetwork |  
Published : Feb 20, 2025, 12:49 AM IST
೧೯ ಜೆಜಿಎಲ್ 1 : ಜಗಳೂರು : ಬುಧವಾರ ತಾಲೂಕಿನ ಪಲ್ಲಾಗಟ್ಟೆ ಗ್ರಾಮದ ಹೊರವಲಯದಲ್ಲಿ ಬಿಸಿ ಎಂ ಇಲಾಖೆಯ ವ್ಯಾಪ್ತಿಯಲ್ಲಿನ  ಸರಕಾರಿ ಮೇಟ್ರಿಕ್  ನಂತರ ಬಾಲಕಿಯರ ವಿದ್ಯಾರ್ಥಿ ನಿಲಯದ  ನೂತನ ಕಟ್ಟವನ್ನು ಶಾಸಕ ಬಿ. ದೇವೇಂದ್ರಪ್ಪ   ಲೋಕಾರ್ಪಣೆ ಮಾಡಿದರು. | Kannada Prabha

ಸಾರಾಂಶ

Poor quality student hostel: Notice not to pay the bill

-ಶಾಸಕ ಬಿ.ದೇವೇಂದ್ರಪ್ಪ ಅಧಿಕಾರಿಗಳಿಗೆ ಸೂಚನೆ

---

ಕನ್ನಡಪ್ರಭವಾರ್ತೆ ಜಗಳೂರು

ಸರ್ಕಾರ ಬಡ ವಿದ್ಯಾರ್ಥಿಗಳಿಗೆ ಸಾಕಷ್ಟು ಅನುದಾನ ನೀಡುತ್ತಿದ್ದು ಸಮರ್ಪಕವಾಗಿ ಬಳಸಿಕೊಳ್ಳಬೇಕು. ಪಲ್ಲಾಗಟ್ಟೆಯಲ್ಲಿ ನೂತನವಾಗಿ ನಿರ್ಮಾಣ ಸರಕಾರಿ ಮೆಟ್ರಿಕ್‌ ನಂತರ ಬಾಲಕಿಯರ ವಿದ್ಯಾರ್ಥಿ ನಿಲಯದ ಕಟ್ಟಡ ಗುಣ ಮಟ್ಟದಿಂದ ಕೂಡಿಲ್ಲ. ಆದ್ದರಿಂದ, ಇವರಿಗೆ ಬಿಲ್ ಮಾಡಿಕೊಡಬೇಡಿ ಎಂದು ಶಾಸಕ.ಬಿ. ದೇವೆಂದ್ರಪ್ಪ ಬಿಸಿಎಂ ಅಧಿಕಾರಿಗಳಿಗೆ ಸೂಚನೆ ನೀಡಿದರು.

ತಾಲೂಕಿನ ಪಲ್ಲಾಗಟ್ಟೆ ಗ್ರಾಮದ ಹೊರವಲಯದಲ್ಲಿ ಬಿಸಿಎಂ ಇಲಾಖೆಯ ವ್ಯಾಪ್ತಿಗೆ ಬರುವ ಸರ್ಕಾರಿ ಮೆಟ್ರಿಕ್‌ ನಂತರ ಬಾಲಕಿಯರ ವಿದ್ಯಾರ್ಥಿ ನಿಲಯದ ನೂತನ ಕಟ್ಟದ ಲೊಕಾರ್ಪಣೆಗೊಳಿಸಿ ಅವರು ಮಾತನಾಡಿದರು.

೩ಕೋಟಿ ೨೮ಲಕ್ಷ ರು. ವೆಚ್ಚದಲ್ಲಿ ನಿರ್ಮಿಸಲಾಗಿರುವ ಕಟ್ಟಡಕ್ಕೆ ಗುಣಮಟ್ಟದ ನೆಲಹಾಸು, ಸುತ್ತಲು ಕಾಪೌಂಡ್ ವ್ಯವಸ್ಥೆ ಇಲ್ಲ. ವಿದ್ಯಾರ್ಥಿ ನಿಲಯಕ್ಕೆ ಸಮರ್ಪಕವಾಗಿ ರಸ್ತೆ ಸಹ ಇಲ್ಲ. ನಿರ್ಜನ ಪ್ರದೇಶದಲ್ಲಿ ನಿರ್ಮಿಸಲಾಗಿದೆ ಎಂದು ಬಿಸಿಎಂ ಇಲಾಖೆಯ ಜಿಲ್ಲಾ ಅಧಿಕಾರಿ ಗಾಯಿತ್ರಿ ಅವರನ್ನು ತರಾಟೆಗೆ ತೆಗೆದುಕೊಂಡರು. ಕಟ್ಟಡವು ಗುಣಮಟ್ಟದಿಂದ ಇಲ್ಲದೇ ಇರುವುದರಿಂದ ಗುತ್ತಿಗೆದಾರರಿಗೆ ಬಿಲ್ ಮಾಡುವುದನ್ನು ತಡೆಹಿಡಿದು ಉಳಿದಿರುವ ಕೆಲಸಗಳನ್ನು ಸಮರ್ಪಕ ಮಾಡುವವರೆಗೆ ಬಿಲ್ಲ ಪಾವತಿ ಮಾಡಬೇಡಿ ಎಂದು ಸೂಚನೆ ನೀಡಿದರು.

..ಬಾಕ್ಸ್..

ಶಾಸಕ ಬಿ. ದೇವೇಂದ್ರಪ್ಪ ಎಚ್ಚರಿಕೆ

ಸಮಯಕ್ಕೆ ಸರಿಯಾಗಿ ಕಾಮಗಾರಿ ಪೂರ್ಣಗೊಳಿಸಿಲ್ಲ. ಹಾಗಾಗಿ, ಮಕ್ಕಳನ್ನು ಕರೆದುಕೊಂಡು ಹೋಗಿ ವಿಧಾನಸಭೆಯ ಮುಂದೆ ಪ್ರತಿಭಟನೆ ಮಾಡಿಬಿಡುವೇ ಎಚ್ಚರಿಕೆಯಿಂದ ಕೆಲಸ ಮಾಡಿ ಎಂದು ಗುತ್ತಿಗೆದಾರರಿಗೆ ಮತ್ತು ಬಿಸಿಎಂ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.

----

ಈ ಸಂದರ್ಭದಲ್ಲಿ ಗ್ರಾ.ಪಂ ಅಧ್ಯಕ್ಷೆ ರೇಣುಕಮ್ಮ ಗುರು ಮೂರ್ತಿ , ಬಿಜೆಪಿ ಮಾಜಿ ಮಂಡಲ ಅಧ್ಯಕ್ಷ ಪಲ್ಲಾಗಟ್ಟೆ ಮಹೇಶ್, ಮಾಝಿ ಜಿ.ಪಂ.ಸದಸ್ಯೆ ಜಯಲಕ್ಷ್ಮಿಮಹೇಶ್, ಇ.ಓ. ಕೆಂಚಪ್ಪ, ಬಿಇಓ ಹಾಲಮೂರ್ತಿ, ಟಿಪಿಓ ಸುರೇಶ್ ರೆಡ್ಡಿ, ಹಿರಿಯ ನಿಲಯ ಮೇಲ್ವಿಚಾರಕ ದೇವೇಂದ್ರಪ್ಪ, ಗೋಡೆ ಪ್ರಕಾಶ್, ದಿವ್ಯ ಸತೀಶ್, ಪ್ರವೀಣ್, ಚೆನ್ನಪ್ಪ,, ಮಂಜುನಾಥ್, ಕೆ.ಸಿ.ಎನ್.ರಾಜು, ರತ್ನಮ್ಮ ವಿರುಪಾಕ್ಷಪ್ಪ, ವೀರೇಶ್ ಇದ್ದರು.

----

ಫೋಟೊ: ೧೯ ಜೆಜಿಎಲ್ 1

ಜಗಳೂರು ಪಲ್ಲಾಗಟ್ಟೆ ಗ್ರಾಮದ ಹೊರವಲಯದಲ್ಲಿ ಬಿಸಿಎಂ ಇಲಾಖೆಯ ವ್ಯಾಪ್ತಿಯ ಸರ್ಕಾರಿ ಮೆಟ್ರಿಕ್‌ ನಂತರ ಬಾಲಕಿಯರ ವಿದ್ಯಾರ್ಥಿ ನಿಲಯದ ನೂತನ ಕಟ್ಟವನ್ನು ಶಾಸಕ ಬಿ. ದೇವೇಂದ್ರಪ್ಪ ಲೋಕಾರ್ಪಣೆ ಮಾಡಿದರು.

PREV

Recommended Stories

ನಾಳೆ ಕರಾವಳಿ, ಮಲೆನಾಡು ಜಿಲ್ಲೆಗಳಿಗೆ ರೆಡ್‌ ಅಲರ್ಟ್‌
ಮೈಸೂರು ದಸರಾ ಆನೆಗಳಿಗೆ 630 ಟನ್‌ ಆಹಾರ!