ಅಪ್ರಾಪ್ತರ ರಕ್ಷಣೆಗೆ ಪೋಕ್ಸೋ ಕಾಯ್ದೆ ಪ್ರಬಲ ಅಸ್ತ್ರ: ನ್ಯಾಯಾಧೀಶ ಪ್ರವೀಣ್ ಆರ್.ಜೆ.ಎಸ್.

KannadaprabhaNewsNetwork | Published : Jan 26, 2024 1:50 AM

ಸಾರಾಂಶ

ಅಪ್ರಾಪ್ತರ ಮೇಲೆ ಲೈಂಗಿಕ ದೌರ್ಜನ್ಯ, ಲೈಂಗಿಕ ಕಿರುಕುಳ, ಲೈಂಗಿಕ ಹಲ್ಲೆ ನಡೆಸಿದವರಿಗೆ ಪೋಕ್ಸೋ ಕಾಯ್ದೆ ಅಡಿಯಲ್ಲಿ 5,7 ವರ್ಷ, ಜೀವಾವಧಿ ಹಾಗೂ ಕಠಿಣ ಜೀವಾವಧಿ ಶಿಕ್ಷೆ ನೀಡಲು ಅವಕಾಶ ಇದೆ. 2012 ರಲ್ಲಿ ರಚನೆ ಆದ ಈ ಕಾನೂನು ಅಪ್ರಾಪ್ತರಿಗೆ ಹೆಚ್ಚಿನ ರಕ್ಷಣೆ ಒದಗಿಸುತ್ತದೆ ಎಂದು ನ್ಯಾಯಾಧೀಶ ಪ್ರವೀಣ್ ಆರ್.ಜೆ.ಎಸ್. ತಿಳಿಸಿದರು. ಹೊಳೆನರಸೀಪುರ ಕಾರ್ಯಕ್ರಮದಲ್ಲಿ ಮಾತನಾಡಿದರು.

ಪೋಕ್ಸೋ ಕಾಯ್ದೆ ಅರಿವು ಕಾರ್ಯಕ್ರಮಕನ್ನಡಪ್ರಭ ವಾರ್ತೆ ಹೊಳೆನರಸೀಪುರ

ಅಪ್ರಾಪ್ತರ ಮೇಲೆ ಲೈಂಗಿಕ ದೌರ್ಜನ್ಯ, ಲೈಂಗಿಕ ಕಿರುಕುಳ, ಲೈಂಗಿಕ ಹಲ್ಲೆ ನಡೆಸಿದವರಿಗೆ ಪೋಕ್ಸೋ ಕಾಯ್ದೆ ಅಡಿಯಲ್ಲಿ 5,7 ವರ್ಷ, ಜೀವಾವಧಿ ಹಾಗೂ ಕಠಿಣ ಜೀವಾವಧಿ ಶಿಕ್ಷೆ ನೀಡಲು ಅವಕಾಶ ಇದೆ. 2012 ರಲ್ಲಿ ರಚನೆ ಆದ ಈ ಕಾನೂನು ಅಪ್ರಾಪ್ತರಿಗೆ ಹೆಚ್ಚಿನ ರಕ್ಷಣೆ ಒದಗಿಸುತ್ತದೆ ಎಂದು ನ್ಯಾಯಾಧೀಶ ಪ್ರವೀಣ್ ಆರ್.ಜೆ.ಎಸ್. ತಿಳಿಸಿದರು.

ಪಟ್ಟಣದ ಸರ್ಕಾರಿ ಬಾಲಕಿಯರ ಪದವಿಪೂರ್ವ ಕಾಲೇಜಿನಲ್ಲಿ ತಾಲೂಕು ಕಾನೂನು ಸೇವಾ ಪ್ರಾಧಿಕಾರ, ವಕೀಲರ ಸಂಘ ಆಯೋಜಿಸಿದ್ದ ಪೋಕ್ಸೋ ಕಾಯ್ದೆ ಅರಿವು ಕಾರ್ಯಕ್ರಮದಲ್ಲಿ ಮಾತನಾಡಿದರು. ಅಪ್ರಾಪ್ತ ಬಾಲಕಿಯರನ್ನು ರಸ್ತೆಯಲ್ಲಿ ರೇಗಿಸಿದರೆ ಅದು ಲೈಂಗಿಕ ದೌರ್ಜನ್ಯವಾಗುತ್ತದೆ. ಬಸ್‌ಗಳಲ್ಲಿ ಜನದಟ್ಟಣಿಯಲ್ಲಿ ಮುಟ್ಟಿ ಇರುಸು ಮುರುಸು ಉಂಟುಮಾಡಿದರೆ ಲೈಂಗಿಕ ಹಿಂಸೆ ಆಗುತ್ತದೆ. ಬಲವಂತಪಡಿಸಿದರೆ ಲೈಂಗಿಕ ಹಲ್ಲೆ ಎನಿಸುತ್ತದೆ. ಇಂತಹ ಘಟನೆಗಳು ನಡೆದಾಗ ಘಟನೆಗೆ ಕಾರಣರಾದವರು ಹಾಗೂ ನಡೆದದ್ದನ್ನು ನೋಡಿ ಸುಮ್ಮನಿದ್ದರೆ ಅವರ ವಿರುದ್ಧ ಕಾನೂನು ಕ್ರಮ ಜರುಗಿಸಬಹುದು ಎಂದು ತಿಳಿಸಿದರು.

ವಿದ್ಯಾರ್ಥಿಗಳಿಗೆ ಎಲ್ಲೇ ಆದರೂ ಲೈಂಗಿಕ ದೌರ್ಜನ್ಯ ನಡೆದರೆ ಪೋಷಕರಿಗೆ, ಶಿಕ್ಷಕರಿಗೆ ಅಥವಾ ಪೊಲೀಸರಿಗೆ ಮಾಹಿತಿ ನೀಡಿ ಎಂದು ಸಲಹೆ ನೀಡಿದರು.

ವಕೀಲರ ಸಂಘದ ಅಧ್ಯಕ್ಷ ಶಿವಕುಮಾರ್ ಮಾತನಾಡಿ, ಪೋಷಕರು ಹಾಗೂ ಶಿಕ್ಷಕರು ವಿದ್ಯಾರ್ಥಿನಿಯರಿಗೆ ಲೈಂಗಿಕ ದೌರ್ಜನ್ಯ ನಡೆದಾಗ ನಿಮ್ಮ ಬಳಿ ಹೇಳಿ ಪರಿಹಾರ ಕಂಡುಕೊಳ್ಳುವಂತಹ ವಾತಾವರಣ ಶಾಲೆಗಳಲ್ಲಿ ಇರಲಿ. ಯಾವ ವಿದ್ಯಾರ್ಥಿನಿಯೂ ಲೈಂಗಿಕ ದೌರ್ಜನ್ಯಕ್ಕೆ ಒಳಗಾಗದಂತೆ ನೋಡಿಕೊಳ್ಳಿ ಎಂದರು.

ಕ್ಷೇತ್ರ ಶಿಕ್ಷಣಾಧಿಕಾರಿ ಸೋಮಲಿಂಗೇಗೌಡ ಮಾತನಾಡಿ, ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಆತ್ಮರಕ್ಷಣೆ ಕಲೆಯನ್ನು ಕರಾಟೆ ಕಲಿಸುತ್ತಿದೆ. ಎಲ್ಲರೂ ಆಸಕ್ತಿಯಿಂದ ಕಲಿಯಿರಿ. ಅಗತ್ಯ ಸಮಯದಲ್ಲಿ ಉಪಯೋಗವಾಗುತ್ತದೆ ಎಂದರು.

ಉಪಪ್ರಾಂಶುಪಾಲ ಕಾಳೇಗೌಡ ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಅಪೂರ್ವ ಕಾರ್ಯಕ್ರಮಕ್ಕೆ ಶುಭ ಕೋರಿದರು. ಉಪನ್ಯಾಸಕ ಪಾಲಾಕ್ಷ ನಿರೂಪಿಸಿದರು. ರವಿಶಂಕರ್ ಮೂರ್ತಿ ಸ್ವಾಗತಿಸಿ, ರಾಮಚಂದ್ರ ವಂದಿಸಿದರು.

ಹೊಳೆನರಸೀಪುರ ಪಟ್ಟಣದ ಬಾಲಕಿಯರ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದಲ್ಲಿ ಆಯೋಜನೆ ಮಾಡಿದ್ದ ಪೋಸ್ಕೊ ಕಾಯ್ದೆ ಅರಿವು ನೆರವು ಕಾರ್ಯಕ್ರಮವನ್ಮು ನ್ಯಾಯಾಧೀಶ ಪ್ರವೀಣ್ ಆರ್.ಜೆ.ಎಸ್. ಉದ್ಘಾಟಿಸಿದರು.

Share this article