ಹಿರೀಸಾವೆ ಡಿಗ್ರಿ ಕಾಲೇಜಲ್ಲಿ ಅಂಚೆ ಚೀಟಿ ಪ್ರದರ್ಶನ

KannadaprabhaNewsNetwork |  
Published : Feb 16, 2026, 01:45 AM IST
15ಎಚ್ಎಸ್ಎನ್14 : ೧೫೦ನೇ ಯ ಪ್ರದರ್ಶನದ ಸಲುವಾಗಿ ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷರು ಹೋಬಳಿ ಘಟಕ ಅಧ್ಯಕ್ಷರಾದ ಪ್ರಮೋದ್ ರವರು ವಿಶೇಷವಾಗಿ ಸನ್ಮಾನಿಸಿದರು.  | Kannada Prabha

ಸಾರಾಂಶ

ಅಂಚೆಚೀಟಿ ಮತ್ತು ನಾಣ್ಯಗಳ ೧೫೦ನೇ ಪ್ರದರ್ಶನವನ್ನು ಎಚ್. ಕೆ. ಸತೀಶ್. ನ್ಯಾಯಾಂಗ ಇಲಾಖೆಯವರು ಏರ್ಪಡಿಸಿದ್ದರು. ಕಾರ್ಯಕ್ರಮವನ್ನು ಕನ್ನಡ ಸಾಹಿತ್ಯ ಪರಿಷತ್‌ ಹೋಬಳಿ ಘಟಕದ ಅಧ್ಯಕ್ಷ ಎಚ್. ಎ. ಪ್ರಮೋದ್ ಉದ್ಘಾಟಿಸಿ ಮಾತನಾಡಿ, ಪದವಿ ಹಂತದಲ್ಲಿ ಸಮಯ ಎನ್ನುವುದು ಬಹಳ ಮುಖ್ಯ ಈ ಹಂತದಲ್ಲಿ ಯುವಜನತೆ ಮುಂದಿನ ಭವಿಷ್ಯಕ್ಕೆ ಬೇಕಾದ ಸರಿಯಾದ ಮಾರ್ಗದರ್ಶನವನ್ನು ತಜ್ಞರಿಂದ ಪಡೆಯುವುದು ಒಳಿತು ಎಂದು ಸಲಹೆ ನೀಡಿದರು.

ಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣ

ಅಂಚೆ ಚೀಟಿ ಮತ್ತು ನಾಣ್ಯಗಳ ೧೫೦ನೇ ಪ್ರದರ್ಶನವನ್ನು ಹಿರೀಸಾವೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಕನ್ನಡ ಸಾಹಿತ್ಯ ಪರಿಷತ್‌ ಹೋಬಳಿ ಘಟಕದ ಸಹಯೋಗದಲ್ಲಿ ಏರ್ಪಡಿಸಲಾಯಿತು.

ಅಂಚೆಚೀಟಿ ಮತ್ತು ನಾಣ್ಯಗಳ ೧೫೦ನೇ ಪ್ರದರ್ಶನವನ್ನು ಎಚ್. ಕೆ. ಸತೀಶ್. ನ್ಯಾಯಾಂಗ ಇಲಾಖೆಯವರು ಏರ್ಪಡಿಸಿದ್ದರು. ಕಾರ್ಯಕ್ರಮವನ್ನು ಕನ್ನಡ ಸಾಹಿತ್ಯ ಪರಿಷತ್‌ ಹೋಬಳಿ ಘಟಕದ ಅಧ್ಯಕ್ಷ ಎಚ್. ಎ. ಪ್ರಮೋದ್ ಉದ್ಘಾಟಿಸಿ ಮಾತನಾಡಿ, ಪದವಿ ಹಂತದಲ್ಲಿ ಸಮಯ ಎನ್ನುವುದು ಬಹಳ ಮುಖ್ಯ ಈ ಹಂತದಲ್ಲಿ ಯುವಜನತೆ ಮುಂದಿನ ಭವಿಷ್ಯಕ್ಕೆ ಬೇಕಾದ ಸರಿಯಾದ ಮಾರ್ಗದರ್ಶನವನ್ನು ತಜ್ಞರಿಂದ ಪಡೆಯುವುದು ಒಳಿತು ಎಂದು ಸಲಹೆ ನೀಡಿದರು.

ಕರ್ನಾಟಕ ರಾಜ್ಯದ ನೆಲ ಜಲ ಸಂಸ್ಕೃತಿ ಹಾಗೂ ಸ್ವಾತಂತ್ರ್ಯ ಹೋರಾಟಗಾರರ ವಿಶೇಷ ಅಂಚೆ ಲಕೋಟೆಗಳ ಸಂಗ್ರಹಣೆಯನ್ನು ಮಾಡಿರುವ ಸತೀಶ್ ಅವರು ಸುಮಾರು ಐದು ವರ್ಷಗಳಿಂದ ವಿವಿಧ ಶಾಲಾ-ಕಾಲೇಜುಗಳಲ್ಲಿ ಏರ್ಪಡಿಸಿರುವ ಅಂಚೆಚೀಟಿ ಮತ್ತು ನಾಣ್ಯಗಳ ಪ್ರದರ್ಶನ ಏರ್ಪಡಿಸಿಕೊಂಡು ಬಂದಿರುತ್ತಾರೆ. ಹಿರೀಸಾವೆಯ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಯೋಜಿಸಿದ್ದ ೧೫೦ನೆಯ ವಸ್ತು ಪ್ರದರ್ಶನವು ಎಲ್ಲರ ಗಮನ ಸೆಳೆಯಿತು. ಸುಮಾರು ೨೦ ವರ್ಷಗಳಿಂದ ದೇಶದ ವಿವಿಧೆಡೆ ಸುತ್ತಾಡಿ ೧೦ ಲಕ್ಷ ರು.ಗಳಿಗೂ ಹೆಚ್ಚು ವೆಚ್ಚ ಮಾಡಿ ಅಂಚೆಲಕೋಟೆಗಳು ಅಂಚೆ ಚೀಟಿಗಳು ಮತ್ತು ನಾಣ್ಯ ಸಂಗ್ರಹ ಮಾಡಿರುವ ಸತೀಶ್ ಅವರು ವಿಶ್ವದ ಮೊದಲ ಖಾದಿ ಸ್ಟ್ಯಾಂಪ್, ವಿಶ್ವದ ಮೊದಲ ಖಾದಿ ಲಕೋಟೆ, ರೇಷ್ಮೆ ಲಕೋಟೆಗಳನ್ನು ಸಂಗ್ರಹಣೆ ಮಾಡಿರುವುದು ಅಭಿನಂದನಾರ್ಹ. ೧೦,೦೦೦ ಅಂಬೇಡ್ಕರ್‌ ನಾಣ್ಯಗಳನ್ನು ಸಂಗ್ರಹಿಸಿದ ಮೊದಲ ಭಾರತೀಯರಾದ ಸತೀಶ್‌ ಜಿಲ್ಲಾ ರಾಜೋತ್ಸವ ಪ್ರಶಸ್ತಿ, ಮಕಂದರ್ ಪ್ರಶಸ್ತಿ ಹಾಗೂ ಇಂಡಿಯನ್ ಬುಕ್ ಆಫ್ ರೆಕಾರ್ಡ್‌ಗೆ ಸೇರ್ಪಡೆಯಾಗಿರುತ್ತಾರೆ. ನಾಡಿನ ವಿವಿಧಡೆ ಪ್ರದರ್ಶನ ನೀಡಿರುವಂತಹ ಇವರು ಮಹಾತ್ಮ ಗಾಂಧೀಜಿಯವರ ವಿಶೇಷ ಅಂಚೆ ಲಕೋಟೆಗಳನ್ನು ಸಂಗ್ರಹಣೆ ಮಾಡಿರುತ್ತಾರೆ ಹಾಗೂ ಭಾರತ ಸಂವಿಧಾನಕ್ಕೆ ಸಂಬಂಧಿಸಿದಂತೆ ವಿಧಿಗಳಿಗೆ ಅನುಗುಣವಾಗಿ ನಾಣ್ಯಗಳು ಮತ್ತು ಅಂಚೆ ಚೀಟಿಗಳನ್ನು ಸಂಗ್ರಹಣೆ ಮಾಡಿರುತ್ತಾರೆ. ಜೊತೆಗೆ ಹಿರೀಸಾವೆ ಕಾಲೇಜಿನಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಪೂರಕವಾಗಿ ಅಂಚೆಚೀಟಿ ಮತ್ತು ನಾಣ್ಯಗಳ ಪ್ರದರ್ಶನವನ್ನು ನೀಡಿ ಸುಮಾರು ೨ ಗಂಟೆಗಳ ಕಾಲ ಉಪನ್ಯಾಸವನ್ನು ನೀಡಿದ್ದು ಮಕ್ಕಳಿಗೆ ಕುತೂಹಲ ಹಾಗೂ ಹೆಚ್ಚಿನ ಜ್ಞಾನಾರ್ಜನೆಯನ್ನು ನೀಡಿರುತ್ತಾರೆ ಎಂದರು.ನ್ಯಾಯಾಂಗ ಇಲಾಖೆ ನೌಕರರಾದ ಸತೀಶ್‌ರವರು ಮಾತನಾಡಿ ಲಕೋಟೆಗಳು ಚೀಟಿಗಳ ಸಂಗ್ರಹ ಹಾಗೂ ಪ್ರದರ್ಶನವನ್ನು ನಾನು ಆತ್ಮತೃಪ್ತಿಗಾಗಿ ಮಾಡುತ್ತಾ ಬಂದಿದ್ದೇನೆ, ಸ್ವಾತಂತ್ರ್ಯ ಹೋರಾಟಗಾರರಿಗೆ ಗೌರವ ಕೊಡುವುದು ನಮ್ಮ ಕರ್ತವ್ಯ ಹಾಗೆಯೇ ಅವರನ್ನು ಮುಂದಿನ ಪೀಳಿಗೆಗೆ ಪರಿಚಯಿಸುವುದು ಬಹಳ ಮುಖ್ಯ ಎಂದರು. ಇವರ ೧೫೦ನೇ ಪ್ರದರ್ಶನದ ಸಲುವಾಗಿ ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷರು ಹೋಬಳಿ ಘಟಕ ಅಧ್ಯಕ್ಷರಾದ ಪ್ರಮೋದ್ ವಿಶೇಷವಾಗಿ ಸನ್ಮಾನಿಸಿದರು. ಕಾಲೇಜಿನ ಉಪನ್ಯಾಸಕ ಮಂಜುನಾಥ್ ಹಾಗೂ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗಂಡಸಿಯಲ್ಲಿ ಶಾಸಕ ಶಿವಲಿಂಗೇಗೌಡರ ಹುಟ್ಟುಹಬ್ಬ ಆಚರಣೆ
ರಾಜ್ಯ ಸರ್ಕಾರದ ಲಂಚಗುಳಿತನದಿಂದ ರೈತರ ಬದುಕು ಶೋಷಣೆ: ಗುರುಪ್ರಸಾದ್‌