ಕೆಂಭಾವಿ ಪಟ್ಟಣದ ಸಮೀಪ ಮುದನೂರ ಗ್ರಾಮದ ಶ್ರೀ ಕೋರಿಸಿದ್ದೇಶ್ವರರ ಪಲ್ಲಕ್ಕಿ ಉತ್ಸವ ಹಾಗೂ ಶ್ರೀಮಠದ ಜಾತ್ರಾ ಮಹೋತ್ಸವದ ಅಂಗವಾಗಿ ಜಾತ್ರೆಯ ಭಿತ್ತಿ ಪತ್ರಿಕೆ ಬಿಡುಗಡೆ ಮಾಡಲಾಯಿತು.
ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿದ ಸಿದ್ಧಚನ್ನಮಲ್ಲಿಕಾರ್ಜುನ ಶಿವಾಚಾರ್ಯರು, ಫೆ.8 ರಂದು ನಾಲವಾರದ ಪೂಜ್ಯ ಸಿದ್ಧತೋಟೆಂದ್ರ ಶಿವಾಚಾರ್ಯ ಮಹಾಸ್ವಾಮೀಜಿ ಅವರ ಭವ್ಯ ಮೆರವಣಿಗೆಯೊಂದಿಗೆ ಕುಂಭ, ಕಳಸ ವಾದ್ಯ ವೈಭವದೊಂದಿಗೆ ಸ್ವಾಗತವಿರುವುದು. ನಂತರ ಧಾರ್ಮಿಕ ಕಾರ್ಯಕ್ರಮಗಳು ಜರಗುವವು. ಫೆ.9 ರಂದು ಬೆಳಿಗ್ಗೆ 8ಕ್ಕೆ ಗಂಗಾಸ್ನಾನ, ಪಲ್ಲಕ್ಕಿ ಉತ್ಸವ, ಪುರವಂತರ ಸೇವೆ ನಂತರ ಧರ್ಮಸಭೆ ನಡೆಯಲಿವೆ ಎಂದು ತಿಳಿಸಿದರು.
ಫೋಟೊ: ಸುರಪುರ ತಾಲೂಕಿನ ಕೆಂಭಾವಿಯ ಮುದನೂರ ಗ್ರಾಮದ ಕೋರಿಸಿದ್ದೇಶ್ವರರ ಪಲ್ಲಕ್ಕಿ ಉತ್ಸವ ಹಾಗೂ ಶ್ರೀಮಠದ ಜಾತ್ರಾ ಮಹೋತ್ಸವದ ಅಂಗವಾಗಿ ಜಾತ್ರೆಯ ಭಿತ್ತಿ ಪತ್ರಿಕೆ ಬಿಡುಗಡೆ ಮಾಡಲಾಯಿತು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.