ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿ
ಬನಹಟ್ಟಿಯ ಶ್ರೀಈಶ್ವರಲಿಂಗ ಮೈದಾನದ ಸಾಂಸ್ಕೃತಿಕ ಭವನದಲ್ಲಿ ಶನಿವಾರ ರಾತ್ರಿ ಆಯೋಜಿಸಿದ್ದ ನಾರಿಶಕ್ತಿ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಮಹಿಳೆಯರು ಇಂದು ಎಲ್ಲ ಕ್ಷೇತ್ರಗಳಲ್ಲಿ ಅಭಿವೃದ್ಧಿಯ ದಾಪುಗಾಲಿಡುತ್ತಿದ್ದು, ಮಹಿಳಾ ಅಭ್ಯುದಯಕ್ಕೆ, ದೀನ-ದಲಿತ, ಅಲ್ಪಸಂಖ್ಯಾತ ಬಡ ಕುಟುಂಬಗಳ ಅಭ್ಯುದಯಕ್ಕೆ ರಾಜ್ಯ ಸರ್ಕಾರ ಸಾಕಷ್ಟು ಶ್ರಮಿಸುತ್ತಿದೆ ಎಂದು ಹೇಳಿದರು.
ಬಾಗಲಕೋಟೆ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದು, ಕ್ಷೇತ್ರದ ಜನತೆ ಆಶೀರ್ವದಿಸುವ ನಂಬಿಕೆ ಇದೆ. ಕ್ಷೇತ್ರದಲ್ಲಿ ನಿರೀಕ್ಷಿತ ಅಭಿವೃದ್ಧಿ ಮಾಡುವಲ್ಲಿ ಹಾಲಿ ಸಂಸದರು ವಿಫಲರಾಗಿದ್ದು, ಅವರದೇ ಸರ್ಕಾರವಿದ್ದರೂ ಅಭಿವೃದ್ಧಿ ಮರೀಚಿಕೆಯಾಗಿದೆ. ಕ್ಷೇತ್ರದ ಪ್ರಗತಿಗೆ ಬದ್ಧಳಾಗಿರುವ ನನಗೆ ಈ ಬಾರಿ ಅವಕಾಶ ದೊರೆತಲ್ಲಿ ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸುವೆ ಎಂದರು.ಎಐಸಿಸಿ ವಕ್ತಾರೆ ಭವ್ಯ ನರಸಿಂಹಮೂರ್ತಿ ಸರ್ಕಾರದ ಸಾಧನೆಗಳ ಬಗ್ಗೆ ವಿವರಿಸಿದರು.ಸಾಧನೆ ಮೆರೆದ ಮಹಿಳೆಯರು, ಸಾಧಕರಿಗೆ ಸನ್ಮಾನಿಸಲಾಯಿತು. ವೇದಿಕೆಯಲ್ಲಿ ಧುರೀಣರಾದ ಸಿದ್ದು ಕೊಣ್ಣೂರ, ಲಲಿತಾ ನಂದೆಪ್ಪನವರ, ರೇಣುಕಾ ಮಡ್ಡಿಮನಿ, ಆಯೇಷಾ ಫಣಿಬಂಧ, ಕವಿತಾ ಕೊಣ್ಣೂರ, ವಿದ್ಯಾ ಬಿಳ್ಳೂರ, ಲಕ್ಷ್ಮಣ ದೇಸಾರಟ್ಟಿ, ಮಲ್ಲಪ್ಪ ಸಿಂಗಾಡಿ, ರಾಜೇಂದ್ರ ಭದ್ರನ್ನವರ, ಬಸವರಾಜ ದಲಾಲ ಉಪಸ್ಥಿತರಿದ್ದರು.