ಕಲ್ಲು, ಮಣ್ಣಿಗೆ ಹಾಲು ಹಾಕಿ ವ್ಯರ್ಥ ಮಾಡಬಾರದು. ಆಹಾರ ದೇವರ ಸ್ವರೂಪ. ಆಹಾರದಿಂದ ಮನುಷ್ಯನಿಗೆ ಚೈತನ್ಯ ದೊರಕುವುದು. ಇಂಥ ಅಮೂಲ್ಯವಾದ ಜೀವಸತ್ವ ಆಹಾರವನ್ನು ಮೌಢ್ಯ ಆಚರಣೆಗಳ ಮೂಲಕ ಹಾಳು ಮಾಡಬಾರದು. ಆಹಾರ ಹಾಳು ಮಾಡುವುದರಿಂದ ಪಾಪ ಅಂಟಿಕೊಳ್ಳುವುದು. ಆಹಾರವನ್ನು ಗೌರವಿಸುವವರಿಗೆ ಬಡತನ ಬರುವುದಿಲ್ಲ ಎಂದು ವಿಜಯ ಮಹಾಂತೇಶ್ವರ ಸಂಸ್ಥಾನ ಮಠದ ಗುರು ಮಹಾಂತ ಸ್ವಾಮೀಜಿ ಹೇಳಿದರು.
ಕನ್ನಡಪ್ರಭ ವಾರ್ತೆ ಇಳಕಲ್ಲ

ನಗರದ ಎಸ್.ಆರ್. ಕಂಠಿ ವೇದಿಕೆ, ಕುಲಕರ್ಣಿ ಪೇಟೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ನಂ.೧ರಲ್ಲಿ ಆಯೋಜಿಸಿದ್ದ ಹಾಲು ಕುಡಿಯುವ ಹಬ್ಬದ ಕಾರ್ಯಕ್ರಮದಲ್ಲಿ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
ಸತ್ಕಾರ ಸ್ವೀಕರಿಸಿದ ಪಂಚ ಯೋಜನೆಗಳ ಅನುಷ್ಠಾನ ಸಮಿತಿಯ ಇಳಕಲ್ಲ ತಾಲೂಕು ಅಧ್ಯಕ್ಷ ಮಹಾಂತೇಶ ಹನುಮನಾಳ, ಇಳಕಲ್ಲ ತಾಲೂಕ ವಕೀಲರ ಸಂಘದ ಅಧ್ಯಕ್ಷ ಮಹಾಂತೇಶ ಹೊಸೂರ, ಇಳಕಲ್ಲ ತಾಲೂಕು ಶಿಕ್ಷಕರ ಸಂಘದ ಅಧ್ಯಕ್ಷ ಆರ್.ಎಂ. ಮಾಸರೆಡ್ಡಿ ಮಾತನಾಡಿದರು.
ಹಾಲು ಕುಡಿಯುವ ಹಬ್ಬದ ನಿಮಿತ್ತ ಏರ್ಪಡಿಸಿದ್ದ ವಚನ ಸ್ಪರ್ಧೆಗಳಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಮುಖ್ಯಗುರುಮಾತೆ ಎ.ಎಸ್. ಕುರಿ ಸಭೆಯ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಕಂಠಿ ವೇದಿಕೆಯ ಅಧ್ಯಕ್ಷೆ ಮಹಾದೇವಿ ತೊಂತನಾಳ, ಕರ್ನಾಟಕ ರಕ್ಷಣಾ ವೇದಿಕೆಯ ನಗರ ಚಾಲಕರ ಘಟಕದ ಅಧ್ಯಕ್ಷ ಮಲ್ಲಪ್ಪ ಅಂಗಡಿ, ಕಂಠಿ ವೇದಿಕೆಯ ಹಿರಿಯ ಸದಸ್ಯೆ ಶೈಲಾ ಪಟ್ಟಣಶೆಟ್ಟಿ ಉಪಸ್ಥಿತರಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.