ಸಾಧನೆಗೆ ಬಡತನ ಅಡ್ಡಿ ಆಗಲ್ಲ: ಹೊನ್ನಳ್ಳಿ

KannadaprabhaNewsNetwork |  
Published : May 16, 2024, 12:47 AM IST
ಲಕ್ಷ್ಮೇಶ್ವರ ಸಮೀಪದ ಆದರಳ್ಳಿ ಗ್ರಾಮದ ರೆವೀನಾ ಸೋಮಪ್ಪ ಲಮಾಣಿ ಅವರನ್ನು ಸನ್ಮಾನಿಸಿದರು. | Kannada Prabha

ಸಾರಾಂಶ

ರೆವಿನಾ ತಂದೆ ತಾಯಿ ಓದದೆ ಇದ್ದರೂ ಮಗಳನ್ನು ಕಷ್ಟಪಟ್ಟು ಓದಿಸಿ ಈ ಮಟ್ಟಕ್ಕೆ ತಂದಿದ್ದು ಹೆಮ್ಮೆಯ ವಿಷಯ

ಲಕ್ಷ್ಮೇಶ್ವರ: ಲಂಬಾಣಿ ಸಮಾಜದ ಹೆಣ್ಣುಮಕ್ಕಳು ಶಿಕ್ಷಣ ಕಡೆ ಗಮನ ಕೊಟ್ಟು ಸಮಾಜದ ಗೌರವ ಹೆಚ್ಚಿಸಿದ್ದು, ಅಭಿಮಾನ ಪಡುವ ಸಂಗತಿಯಾಗಿದೆ ಎಂದು ಗೋವಾದ ಜೀವನ ಹೇಲ್ತಕೇರ ನರ್ಸಿಂಗ್ ಬ್ಯುರೋ ಏಜೆನ್ಸಿ ಮುಖ್ಯಸ್ಥೆ ಡಾ.ರೇಣುಕಾರಾವ್ ಹೊನ್ನಳ್ಳಿ ಹೇಳಿದರು.

ಲಕ್ಷ್ಮೇಶ್ವರ ತಾಲೂಕಿನ ಆದರಹಳ್ಳಿಯಲ್ಲಿ ಇತ್ತೀಚಿಗೆ ದ್ವಿತೀಯ ಪಿಯುಸಿ ಕಲಾ ವಿಭಾಗದಲ್ಲಿ ರಾಜ್ಯಕ್ಕೆ ಎರಡನೇ ಸ್ಥಾನ ಪಡೆದು ರಾಜ್ಯಕ್ಕೆ ಕೀರ್ತಿ ತಂದ ರೇವಿನಾ ಸೋಮಪ್ಪ ಲಮಾಣಿ ಅವರನ್ನು ಸನ್ಮಾನಿಸಲು ಗೋವಾದಿಂದ ಆಗಮಿಸಿ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು.

ರೆವಿನಾ ತಂದೆ ತಾಯಿ ಓದದೆ ಇದ್ದರೂ ಮಗಳನ್ನು ಕಷ್ಟಪಟ್ಟು ಓದಿಸಿ ಈ ಮಟ್ಟಕ್ಕೆ ತಂದಿದ್ದು ಹೆಮ್ಮೆಯ ವಿಷಯವಾಗಿದ್ದು, ಸಾಧನೆಗೆ ಬಡತನ ಅಡ್ಡಿ ಬರಲ್ಲ ಎಂಬುದಕ್ಕೆ ರೇವಿನಾ ಸಾಕ್ಷಿ ಆಗಿದ್ದಾಳೆ. ಮಕ್ಕಳು ಮೊಬೈಲ್ ಗೀಳಿನಿಂದ ಹೊರ ಬಂದರೆ ಜೀವನದಲ್ಲಿ ಸಾಧನೆ ಮಾಡಬಹುದು ಎಂದರು.

ಕಾರ್ಯಕ್ರಮ ಉದ್ದೇಶಿಸಿ ಸಮಂತಾ ಎಚ್ ಮಾತನಾಡಿದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ರೇವಿನಾ ಲಮಾಣಿ, ದೂರದ ಗೋವಾ ರಾಜ್ಯದಿಂದ ಬಂದು ಸನ್ಮಾನ ಮಾಡುತ್ತಿರುವುದು ಸಂತೋಷ ತಂದಿದೆ. ಸನ್ಮಾನಗಳೇ ಮುಂದಿನ ಸಾಧನೆಗೆ ಪ್ರೇರಣೆ ಆಗುತ್ತದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಸೋಮಪ್ಪ ಲಮಾಣಿ, ರೇಣವ್ವ ಲಮಾಣಿ, ನಾರಾಯಣ ಲಮಾಣಿ, ಸುದೀಪ ಲಮಾಣಿ, ವೆಂಕಟೇಶ ಲಮಾಣಿ, ರೇಷ್ಮಾ ಲಮಾಣಿ, ಪರಮೇಶ ಲಮಾಣಿ, ಸುರೇಶ ಲಮಾಣಿ ಗ್ರಾಮಸ್ಥರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!