ಪವರ್ ಫ್ರೆಂಡ್ಸ್, ಇನ್ನರ್ ವ್ಹೀಲ್ ಕ್ಲಬ್ ಆರೋಗ್ಯ ತಪಾಸಣೆ ಶಿಬಿರ

KannadaprabhaNewsNetwork |  
Published : Aug 20, 2024, 12:56 AM IST
ಪವರ್ ಫ್ರೆಂಡ್ಸ್, ಇನ್ನರ್ ವ್ಹೀಲ್ ಕ್ಲಬ್ ನಿಂದ ಉಚಿತ ಆರೋಗ್ಯ ತಪಾಸಣೆ | Kannada Prabha

ಸಾರಾಂಶ

ಪವರ್ ಫ್ರೆಂಡ್ಸ್ ಬೆದ್ರ( ಮಹಿಳಾ ಘಟಕ) ಮತ್ತು ಇನ್ನರ್ ವ್ಹೀಲ್ ಕ್ಲಬ್ ಆಫ್ ಮೂಡುಬಿದಿರೆ ಆಶ್ರಯದಲ್ಲಿ ಮಂಗಳೂರಿನ ಎ.ಜೆ.ವೈದ್ಯಕೀಯ ಮಹಾವಿದ್ಯಾಲಯ ಆಸ್ಪತ್ರೆಯ ವೈದ್ಯಾಧಿಕಾರಿಗಳಿಂದ ಇಲ್ಲಿನ ಕನ್ನಡ ಭವನದಲ್ಲಿ ಉಚಿತ ಕಣ್ಣಿನ ತಪಾಸಣೆ ಹಾಗೂ ಉಚಿತ ಆರೋಗ್ಯ ತಪಾಸಣಾ ಶಿಬಿರ ಭಾನುವಾರ ನಡೆಯಿತು.

ಕನ್ನಡಪ್ರಭ ವಾರ್ತೆ ಮೂಡುಬಿದಿರೆ

ಪವರ್ ಫ್ರೆಂಡ್ಸ್ ಬೆದ್ರ( ಮಹಿಳಾ ಘಟಕ) ಮತ್ತು ಇನ್ನರ್ ವ್ಹೀಲ್ ಕ್ಲಬ್ ಆಫ್ ಮೂಡುಬಿದಿರೆ ಆಶ್ರಯದಲ್ಲಿ ಮಂಗಳೂರಿನ ಎ.ಜೆ.ವೈದ್ಯಕೀಯ ಮಹಾವಿದ್ಯಾಲಯ ಆಸ್ಪತ್ರೆಯ ವೈದ್ಯಾಧಿಕಾರಿಗಳಿಂದ ಇಲ್ಲಿನ ಕನ್ನಡ ಭವನದಲ್ಲಿ ಉಚಿತ ಕಣ್ಣಿನ ತಪಾಸಣೆ ಹಾಗೂ ಉಚಿತ ಆರೋಗ್ಯ ತಪಾಸಣಾ ಶಿಬಿರ ಭಾನುವಾರ ನಡೆಯಿತು.

ಇನ್ನರ್ ವ್ಹೀಲ್ ಕ್ಲಬ್ ಅಧ್ಯಕ್ಷ ಬಿಂದಿಯಾ ಎಸ್.ಶೆಟ್ಟಿ ಅಧ್ಯಕ್ಷತೆ ವಹಿಸಿ ಶಿಬಿರ ಉದ್ಘಾಟಿಸಿದರು.ಅವರು ಮಾತನಾಡಿ, ನಮಗೆ ಆರೋಗ್ಯ ಮುಖ್ಯವಾಗಿ ಬೇಕು. ಒಂದೊಂದು ಅಂಗವೂ ಪ್ರಾಮುಖ್ಯತೆಯನ್ನು ಹೊಂದಿದೆ. ಆದ್ದರಿಂದ ನಾವೆಷ್ಟು ನಮ್ಮ ಆರೋಗ್ಯದ ಕಡೆ ಗಮನ ಹರಿಸಿದರೂ ಸಾಲದು ಎಂದರು.

ಹೋಲಿ ರೋಸರಿ ಪಿಯು ಕಾಲೇಜಿನ ಪ್ರಭಾರ ಪ್ರಾಂಶುಪಾಲೆ ರಮಾ ಪದ್ಮನಾಭ ಮಾತನಾಡಿ, ಕೆರೆಯ ನೀರನ್ನು ಕೆರೆಗೆ ಚೆಲ್ಲಿ ಎಂಬಂತೆ ಪವರ್ ಫ್ರೆಂಡ್ಸ್ ಸಾಮಾಜಿಕ ಕಳಕಳಿ ಇಟ್ಟುಕೊಂಡು ಸಮಾಜಕ್ಕೆ ಕೊಡುಗೆ ನೀಡುತ್ತಿದೆ. ಸಾಮಾಜಿಕ ಕಳಕಳಿ ಇಟ್ಟುಕೊಳ್ಳುವ ಮೂಲಕ ತನ್ನ ಅಸ್ತಿತ್ವ ಉಳಿಸಿಕೊಂಡಿದೆ ಎಂದರು.

ಪವರ್ ಫ್ರೆಂಡ್ಸ್ ಅಧ್ಯಕ್ಷ ವಿನಯ್ ಕುಮಾರ್, ಯಕ್ಷನಿಧಿಯ ಅಧ್ಯಕ್ಷೆ ಲತಾ ಸುರೇಶ್, ಆಸ್ಪತ್ರೆಯ ವೈದ್ಯೆ ಶ್ರೇಷ್ಠ, ಗ್ರೀಷ್ಮಾ, ಬಡಗ ಎಡಪದವಿನ ಗ್ರಾಮ ಆಡಳಿತಾಧಿಕಾರಿ ಪವಿತ್ರಾ ಶಿವಪ್ರಸಾದ್ ಅತಿಥಿಗಳಾಗಿದ್ದರು.

ವಕೀಲ, ಪವರ್ ಫ್ರೆಂಡ್ಸ್ ನ ಉಪಾಧ್ಯಕ್ಷ ಜಯಪ್ರಕಾಶ್ ಭಂಡಾರಿ ಸ್ವಾಗತಿಸಿ ಶಿಬಿರದ ಬಗ್ಗೆ ಮಾಹಿತಿ ನೀಡಿದರು. ಸುಧಾಕರ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಇನ್ನರ್ ವ್ಹೀಲ್ ಕ್ಲಬ್ ಕಾರ್ಯದರ್ಶಿ ಡಾ.ಸೀಮಾ ಸುದೀಪ್ ವಂದಿಸಿದರು.

ಶಿಬಿರದಲ್ಲಿ 61 ಜನ ಸಾಮಾನ್ಯ ಆರೋಗ್ಯ ತಪಾಸಣೆ, 308 ಜನ ಕಣ್ಣು ತಪಾಸಣೆ, ಉಚಿತ ಕಣ್ಣಿನ ಪೊರೆ ತಪಾಸಣೆಗೆ ಶಸ್ತ್ರ ಚಿಕಿತ್ಸೆ ನಡೆಸಲು 49, ಕಿವಿ ಮೂಗು, ಗಂಟಲು ತಪಾಸಣೆ 57, ದಂತ‌ -70, ಮಧುಮೇಹ,ರಕ್ತ ಒತ್ತಡ 285, ಹೃದಯ ಸಂಬಂಧಿಗೆ 84 ಹೀಗೆ ಒಟ್ಟು 914 ಜನರು ತಪಾಸಣೆ ಮಾಡಿಸಿಕೊಂಡರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ