ರಾಂ ಅಜೆಕಾರು ಕಾರ್ಕಳ
ಕಾರ್ಕಳ ತಾಲೂಕಿನ ಕೇಮಾರ್‌ನಲ್ಲಿರುವ 220 ಕೆವಿ ಸ್ವೀಕರಣ ಕೇಂದ್ರದ ಪ್ರಮುಖ 100 ಎಂವಿಎ ಟ್ರಾನ್ಸ್‌ಫಾರ್ಮರ್ 2025ರ ಆಗಸ್ಟ್ ತಿಂಗಳ ಕೊನೆಯ ವಾರದಲ್ಲಿ ಕೆಟ್ಟು ಹೋದ ಬಳಿಕ, ಸಂಪೂರ್ಣ ಉಡುಪಿ ಜಿಲ್ಲೆ ವಿದ್ಯುತ್ ಸಮಸ್ಯೆಗೆ ಒಳಪಟ್ಟಂತಾಗಿದೆ.
ಕಾರ್ಕಳದ ಕೆಮಾರ್ ಸ್ವೀಕರಣ ಕೇಂದ್ರವು ಉಡುಪಿ ಮಂಗಳೂರು ಜಿಲ್ಲೆಗಳಿಗೆ ವಿದ್ಯುತ್ ವಿತರಣೆಯ ಮುಖ್ಯಕೇಂದ್ರವಾಗಿದೆ.ಈಗಾಗಲೆ ಕಾರ್ಕಳ ಉಡುಪಿ ಬ್ರಹ್ಮಾವರ ಕುಂದಾಪುರ ಬ್ರಹ್ಮಾವರ ಕಾಪು ತಾಲೂಕುಗಳಿಗೆ ವಿದ್ಯುತ್ ಆಧಾರವಾಗಿದೆ. ಇಲ್ಲಿ ಉಂಟಾದ ಈ ತಾಂತ್ರಿಕ ವೈಫಲ್ಯ ನೇರವಾಗಿ ಜನಜೀವನದ ಮೇಲೆ ಪರಿಣಾಮ ಬೀರುತ್ತಿದೆ.ಟ್ರಾನ್ಸ್‌ಫಾರ್ಮರ್ ದೋಷಗೊಂಡ ಬಳಿಕ ಪರ್ಯಾಯ ವ್ಯವಸ್ಥೆಗಳ ಮೂಲಕ ವಿದ್ಯುತ್ ಸರಬರಾಜು ನಿರ್ವಹಿಸಲಾಗುತ್ತಿದೆಯಾದರೂ, ಬೇಸಿಗೆ ಸಮೀಪಿಸುತ್ತಿರುವ ಹಿನ್ನಲೆಯಲ್ಲಿ ವಿದ್ಯುತ್ ಬೇಡಿಕೆ ಗಣನೀಯವಾಗಿ ಏರಿಕೆಯಾಗಿದ್ದು, ನಿಯಂತ್ರಿತ ವಿದ್ಯುತ್ ಪೂರೈಕೆ ಅನಿವಾರ್ಯವಾಗಿದೆ. ಇದರಿಂದ ವಾಣಿಜ್ಯ ಸಂಸ್ಥೆಗಳು, ಕೈಗಾರಿಕಾ ಘಟಕಗಳು, ಆಸ್ಪತ್ರೆಗಳು ಹಾಗೂ ಶೈಕ್ಷಣಿಕ ಸಂಸ್ಥೆಗಳು ನಿರಂತರ ಅಡಚಣೆಯನ್ನು ಎದುರಿಸುತ್ತಿವೆ.ಸಮಸ್ಯೆ ಪರಿಹಾರಕ್ಕೆ ಪ್ರಯತ್ನ ವೇಗವಾಗಿ ನಡೆಯುತ್ತಿದ್ದು ಜನವರಿ ಅಂತ್ಯದ ವೇಳೆಗೆ ಹೊಸ ಟ್ರಾನ್ಸ್‌ಫಾರ್ಮರ್ ಕಾರ್ಯಾಚರಿಸುವ ಸಂಭವವಿದೆ.
-ಶ್ರಿನಿವಾಸ್, ಎಕ್ಸಿಕ್ಯುಟಿವ್ ಇಂಜಿನಿಯರ್ ಕೇಮಾರು, ಕಾರ್ಕಳ,