29ರಂದು ಮೈಸೂರಿನಲ್ಲಿ ಶರಣರ ಸಂದೇಶ ಸಾರುವ ಪ್ರಭುಲಿಂಗಲೀಲೆ ನಾಟಕ ಪ್ರದರ್ಶನ

KannadaprabhaNewsNetwork |  
Published : Aug 26, 2025, 01:03 AM IST
ಆ. ೨೯ರಂದು ಮೈಸೂರಿನಲ್ಲಿ ಶರಣರ ಸಂದೇಶ ಸಾರುವ ಪ್ರಭುಲಿಂಗಲೀಲೆ ನಾಟಕ ಪ್ರದರ್ಶನ-ಕಲ್ಮಹಳ್ಳಿ ನಟರಾ | Kannada Prabha

ಸಾರಾಂಶ

ಡಾ. ಶಿವರಾತ್ರಿ ರಾಜೇಂದ್ರ ಮಹಾಸ್ವಾಮೀಜಿ ೧೧೦ನೇ ಜಯಂತಿ ಮಹೋತ್ಸವ ಆಚರಣಾ ನಿಮಿತ್ತವಾಗಿ ಮೈಸೂರಿನ ಶ್ರೀ ಶಿವರಾತ್ರಿ ರಾಜೇಂದ್ರ ಕಲಾ ಬಳಗದ ವತಿಯಿಂದ ಆ. ೨೯ರಂದು ರಾತ್ರಿ ೯ ಗಂಟೆಗೆ ಸುತ್ತೂರು ಶಾಖಾ ಮಠದ ಆವರಣದಲ್ಲಿ ಪ್ರಭುಲಿಂಗಲೀಲೆ ನಾಟಕ ಪ್ರದರ್ಶನ ಮಾಡಲಾಗುತ್ತಿದೆ ಎಂದು ವೀರಶೈವ ಲಿಂಗಾಯಿತ ಮಹಾಸಭಾದ ನಿರ್ದೇಶಕ, ಅಲ್ಲಮ ಪ್ರಭು ಪಾತ್ರಧಾರಿ ಕಲ್ಮಹಳ್ಳಿ ನಟರಾಜ್ ಹೇಳಿದರು.

ಕನ್ನಡಪ್ರಭ ವಾರ್ತೆ, ಚಾಮರಾಜನಗರ

ನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸುತ್ತೂರು ಶಿವರಾತ್ರಿ ದೇಶಿಕೇಂದ್ರ ಮಹಾ ಸ್ವಾಮೀಜಿ ದಿವ್ಯ ಸಾನಿಧ್ಯದಲ್ಲಿ ಭಕ್ತಿ ಪ್ರಧಾನ ನಾಟಕ ಪ್ರದರ್ಶನವ ಏರ್ಪಡಿಸಲಾಗಿದೆ ಎಂದರು.

೧೨ನೇ ಶತಮಾನದಲ್ಲಿ ಜಾತ್ಯಾತೀತಾ ಹಾಗೂ ಮಾನವತೆಯ ಸಂದೇಶ ಸಾರಿ ಮಾನವ ಒಂದೇ ಎಂದು ಸಾರಿದ ಶರಣರನ್ನು ನಾವು ನೋಡಲು ಸಾಧ್ಯವಿಲ್ಲ. ಆದರೆ ಇಂತಹ ನಾಟಕಗಳ ಮೂಲಕ ಆವರ ಸಂದೇಶಗಳನ್ನು ಹೇಳುವ ಮೂಲಕ ಜನರನ್ನು ಜಾಗೃತಗೊಳಿಸುವುದೇ ಈ ನಾಟಕ ಪ್ರದರ್ಶನದ ಉದ್ದೇಶ ಎಂದರು.

ಸಿದ್ದಗಂಗಾ ಶ್ರೀಗಳು ಸೇರಿದಂತೆ ಹಲವಾರು ಹರಗುರು ಚರಮೂರ್ತಿಗಳು ಈ ನಾಟಕವನ್ನು ವೀಕ್ಷಣೆ ಮಾಡಲಿದ್ದು, ಕೇಂದ್ರ ಮತ್ತು ರಾಜ್ಯ ಸರ್ಕಾರ ಸಚಿವರು, ಶಾಸಕರು ಭಾಗವಹಿಸಲಿದ್ದಾರೆ.

ವೀರಶೈವ ಲಿಂಗಾಯಿತ ಮಹಾಸಭಾದ ಜಿಲ್ಲಾಧ್ಯಕ್ಷ ಮೂಡ್ಲುಪುರ ನಂದೀಶ್, ನಿರ್ದೇಕರಾದ ಕಲಾವಿದ ಎನ್. ಪುರುಷೋತ್ತಮ್, ಬಿಸಲವಾಡಿ ಉಮೇಶ್, ಕಲಾವಿದರಾದ ನಂಜೇದೇವನಪುರ ಶೇಖರಪ್ಪ, ಶಿವಕುಮಾರ್, ಮುಖಂಡರಾದ ಟಿ. ಗುರು, ತೊರವಳ್ಳಿ ಶಿವಕುಮಾರ್ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!