ಭಟ್ಕಳ: ಇಲ್ಲಿನ ಸಿದ್ಧಾರ್ಥ ಪದವಿ ಪೂರ್ವ ಕಾಲೇಜಿನಿಂದ 2025ನೇ ಸಾಲಿನಲ್ಲಿ ಎಂಬಿಬಿಎಸ್ ಗೆ ಪ್ರವೇಶ ಪಡೆದ ವಿದ್ಯಾರ್ಥಿಗಳು ಮತತ್ತು ಅವರ ಪಾಲಕರನ್ನು ಸನ್ಮಾನಿಸಿ ಗೌರವಿಸಲಾಯಿತು.
ಶಿರಾಲಿ ಸಮುದಾಯ ಆರೋಗ್ಯ ಕೇಂದ್ರದ ವೈದ್ಯ ಬಾಲಚಂದ್ರ ಮೇಸ್ತ ಮಾತನಾಡಿ, ಹಿಂದೆ ನಾವು ಎಂಬಿಬಿಎಸ್ ಮಾಡುವ ಸಂದರ್ಭದಲ್ಲಿ ಬಹಳಷ್ಟು ಕಷ್ಟ ಪಡಬೇಕಾಗಿತ್ತು. ಆದರೆ ಇಂದಿನ ಪರಿಸ್ಥಿತಿ ಹಾಗಿಲ್ಲ. ಪರಿಸ್ಥಿತಿ ಬದಲಾಗಿದ್ದು, ಉತ್ತಮ ಅವಕಾಶಗಿವೆ. ಉತ್ತಮ ಅಭ್ಯಾಸ ಮಾಡಿ ಉತ್ತಮ ವೈದ್ಯರಾಗಿರಿ ಎಂದು ಅವರು ವಿದ್ಯಾರ್ಥಿಗಳಿಗೆ ಧೈರ್ಯ ತುಂಬಿದರು. ಸ್ಟೇಟ್ ಬ್ಯಾಂಕ್ ಆಪ್ ಇಂಡಿಯಾದ ಕಾರವಾರ ಪ್ರಾದೇಶಿಕ ಕಚೇರಿ ಮುಖ್ಯ ವ್ಯವಸ್ಥಾಪಕ ಕೃಷ್ಣ ಮೊಗೇರ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಳಿಗಳಿಗೆ ಬಡ್ಡಿರಹಿತ ಶೈಕ್ಷಣಿಕ ಸಾಲದ ಕುರಿತು ಮಾಹಿತಿ ನೀಡಿದರು.ಉಪನ್ಯಾಸಕ ಎಂ.ಕೆ. ನಾಯ್ಕ, ರಾಷ್ಟ್ರೀಯ ಅರ್ಹತಾ ಪರೀಕ್ಷೆ, ನೀಟ್ ಮತ್ತು ಅದರ ಮೂಲಕ ಆಯ್ಕೆ ಮಾಡಿಕೊಳ್ಳಬಹುದಾದ ವೈದ್ಯಕೀಯ ಶಿಕ್ಷಣ ಸಂಸ್ಥೆಗಳ ಕುರಿತು ಮಾಹಿತಿ ನೀಡಿದರು.
ಎಂಬಿಬಿಎಸ್ ಗೆ 2025ನೇ ಸಾಲಿನಲ್ಲಿ ಪ್ರವೇಶ ಪಡೆದ ವಿದ್ಯಾರ್ಥಿಗಳಾದ ಎಂ. ಪ್ರಣಮ್ ಪಿ.ಗೌಡ, ಎಸ್. ಸುದೀಶ್, ಸಾನಿಕ ಭಟ್ಕಳ, ಲೇಖಾ ಭಂಡಾರಿ, ಆದಿತಿ ಕಾಮತ್, ತೇಜಸ್ವಿನಿ ಶೇಟ್ ಅವರನ್ನು ಮತ್ತು ಇವರ ಪಾಲಕರನ್ನು ಸನ್ಮಾನಿಸಿ ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಯಿತು.ಸಿದ್ಧಾರ್ಥ ಶಿಕ್ಷಣ ಸಂಸ್ಥೆಯ ಅಧ್ಯಕ್ಷೆ, ಪ್ರಾಂಶುಪಾಲೆ ಆರ್ಚನಾ ಯು. ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. ಉಪಪ್ರಾಂಶುಪಾಲ ಪ್ರಕಾಶ್ ಕೆದಿಲಾಯ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡಿದರು. ಉಪನ್ಯಾಸಕರಾದ ಗಣಪತಿ ನಾಯ್ಕ ಮತ್ತು ನಿರಂಜನ್ ಹೆಗ್ಡೆ ನಿರೂಪಿಸಿದರು. ರಾಘವೇಂದ್ರ ಮಡಿವಾಳ್ ವಂದಿಸಿದರು.
ಭಟ್ಕಳದ ಸಿದ್ಧಾರ್ಥ ಪಿಯು ಕಾಲೇಜಿನಿಂದ ಎಂಬಿಬಿಎಸ್ ಪ್ರವೇಶ ಪಡೆದ ವಿದ್ಯಾರ್ಥಿಗಳು ಮತ್ತು ಅವರ ಪಾಲಕರಿಗೆ ಸನ್ಮಾನಿಸಿರುವುದು.