ಕನ್ನಡ ಪ್ರಭ ವಾರ್ತೆ ಮುಧೋಳ:ಬೇರೆ ಬೇರೆ ಕ್ಷೇತ್ರಗಳಲ್ಲಿದ್ದರೂ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಕೊಳ್ಳಿ ಎಂದು ನಿವೃತ್ತ ಪ್ರಾಧ್ಯಾಪಕ ಪ್ರೊ.ಅಶೋಕ ಗಂಗಣ್ಣವರ ಹಳೇ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಪ್ರೊ.ಶಾರದಾ ಬಿರಾದಾರ ಮಾತನಾಡಿ, ಗುರು-ಶಿಷ್ಯರ ಪರಂಪರೆ ಇಂದು ಹಂತ ಹಂತವಾಗಿ ಕಡಿಮೆಯಾಗುತ್ತಿರುವ ಸಂದರ್ಭದಲ್ಲಿ, ಕಲಿಸಿದ ಗುರುಗಳನ್ನು ನೆನೆದು ಸನ್ಮಾನಿಸುವ ಮೂಲಕ ಗೌರವಿಸುತ್ತಿರುವುದು ಸಂತಸವನ್ನುಂಟು ಮಾಡಿದೆ ಎಂದರು.ಈ ಸಂದರ್ಭದಲ್ಲಿ ಹಲವರು ತಮ್ಮ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು, ತಾವು ಕಾಲೇಜಿನಲ್ಲಿ ಕಲಿಯುತ್ತಿದ್ದ ಸಂದರ್ಭದಲ್ಲಿ ನಡೆದ ಘಟನಾವಳಿಗಳನ್ನು ಮೆಲುಕು ಹಾಕಿದರು.
ಪ್ರಾಧ್ಯಾಪಕರಾದ ಶಾರದಾ ಬಿರಾದಾರ, ಜೆ.ಪರದೇಶಿ, ಪಿ.ಬಿ.ಬಡಿಗೇರ, ಎಂ.ವ್ಹಿ.ಜಿಗಬಡ್ಡಿ, ಎಸ್.ಬಿ.ಹೆಬ್ಳಿ, ಎ.ಐ.ಗಂಗಣ್ಣವರ ಅವರನ್ನು ಸನ್ಮಾನಿಸಲಾಯಿತು. ಬಸು ಹಳ್ಳದ, ವಿಶಾಲ ಓಸ್ವಾಲ್, ಅಮಿತ್ ಒಣಕುದರಿ, ಈರಣ್ಣ ತೇಲಿ, ಈರಣ್ಣ ಆನದಿನ್ನಿ, ತ್ರಿವೇಣಿ ಹಾದಿಮನಿ ಸೇರಿದಂತೆ ಹಲವು ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.