ಕನ್ನಡಪ್ರಭ ವಾರ್ತೆ ಕೊರಟಗೆರೆ
ಉಪಾಧ್ಯಕ್ಷೆ ಸಿ.ಎಸ್.ಲಕ್ಷ್ಮೀರಂಗಧಾಮಯ್ಯ ಮಾತನಾಡಿ ಒಂದು ಸಹಕಾರ ಸಂಘ ಅಭಿವೃದ್ಧಿ ಹೊಂದಬೇಕಾದರೆ ನಮ್ಮ ರೈತರು, ಊರಿನ ವ್ಯಾಪಾರಿಗಳ ಸಹಕಾರ ಮುಖ್ಯ. ಸಾಲ ಸೌಲಭ್ಯ ಸೇರಿದಂತೆ ಇಲ್ಲಾ ವ್ಯವಹಾರವನ್ನ ಸಹಕಾರ ಸಂಘಗಳಲ್ಲಿ ನಡೆಸಿದರೆ. ಸಂಘಗಳು ಅಭಿವೃದ್ಧಿ ಆಗಲು ಸಾಧ್ಯ. ಊರಿನ ಮುಖಂಡರು ಗ್ರಾಮಸ್ಥರ ಸಹಕಾರದಿಂದ ಉಪಾಧ್ಯಕ್ಷೆಯಾಗಿ ಅಧಿಕಾರ ವಹಿಸಿಕೊಳ್ಳುತ್ತಿದ್ದೇನೆ ಎಲ್ಲಾರಿಗೂ ನನ್ನ ಹೃದಯ ಪೂರ್ವಕ ಧನ್ಯವಾದಗಳು ಎಂದು ಹೇಳಿದರು.ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಶ್ವಥ್‌ನಾರಾಯಣ್ ಮಾತನಾಡಿ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹಾಗೂ ಸಹಕಾರ ಸಚಿವ ರಾಜಣ್ಣ ಅವರ ಆದೇಶದಂತೆ ಕೋಡ್ಲಹಳ್ಳಿ ಸಹಕಾರ ಸಂಘದ ಅಧ್ಯಕ್ಷ ಉಪಾಧ್ಯಕ್ಷೆ ಸ್ಥಾನಗಳಿಗೆ ಅವಿರೋಧ ಆಯ್ಕೆಯಾಗಿದ್ದು, ಸುಮಾರು ೩೦ ವರ್ಷಗಳ ನಂತರ ಅವಿರೋಧವಾಗಿ ಆಯ್ಕೆಯಾಗಿರುವುದು ಸಂತಸ ತಂದಿದೆ. ಎಂದು ತಿಳಿಸಿದರು.ಡಿಸಿಸಿ ಬ್ಯಾಂಕ್ ಮೇಲ್ವಿಚಾರಕ ಬೋರಣ್ಣ ಮಾತನಾಡಿ ಕಳೆದ ೩೦ ವರ್ಷಗಳ ಹಿಂದೆ ಸಹಕಾರದಲ್ಲಿ ಚುನಾವಣೆ ಇಲ್ಲದೇ ಆಯ್ಕೆಯಾಗಿದೆ. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಆಶ್ವಥ್‌ನಾರಾಯಣ್ ಅವರ ನೇತೃತ್ವದಲ್ಲಿ ಎಲ್ಲ ನಿರ್ದೇಶಕರ ಸಹಕಾರ ಪಡೆದು ಅವಿರೋಧವಾಗಿ ಆಯ್ಕೆ ಮಾಡಿದ್ದಾರೆ. ನಮ್ಮ ಸಹಕಾರ ಸಂಘದ ವಹಿವಾಟು ೯೦೦ ಕ್ವಂಟಲ್‌ನಷ್ಟು ಅಡಿಕೆ ದಾಸ್ತಾನು ಮಾಡಲಾಗಿದೆ. ಅಡಿಕೆ ಅಂತ ೨ ಕೋಟಿಯಷ್ಟು ಸಾಲ ನೀಡಲಾಗಿದೆ. ಸುಮಾರು ೨.೫ ಕೋಟಿಯಷ್ಟು ಸಾಲ ನೀಡಲಾಗಿದೆ ಎಂದು ತಿಳಿಸಿದರು.ಇದೆ ಸಂದರ್ಭದಲ್ಲಿ ಡಿಸಿಸಿ ಬ್ಯಾಂಕ್ ಮೇಲ್ವಿಚಾರಕ ಬೋರಣ್ಣ ಮುಖ್ಯ ಕಾರ್ಯನಿರ್ವಣಾಧಿಕಾರಿ ಐ.ಕೆ.ಬಾಬು ನಿರ್ದೇಶಕರಾದ ಜಗದೀಶ್, ಬಸವರಾಜು, ಬಲರಾಜು, ಮಂಜುನಾಥ್, ಪಾರ್ವತಮ್ಮ, ಕೆಂಪರಾಜು, ಸಿದ್ದಲಿಂಗಪ್ಪ, ಶಿವರಾಜು, ನರಸಿಂಹಮೂರ್ತಿ, ರಾಜಗೋಪಾಲರೆಡ್ಡಿ ಮುಖಂಡರಾದ ಚಂದ್ರಣ್ಣ, ಉಮಣ್ಣ, ಶ್ರೀನಿವಾಸ್, ಶಶಿಕುಮಾರ್, ರಾಘವೇಂದ್ರ, ಕುಮಾರ್, ಹನುಮಂತರಾಜು, ನಾಗರಾಜು, ವರದರಾಜು, ವಿದ್ಯಾಶಂಕರ್, ರಾಮಚಂದ್ರ, ಸೇರಿದಂತೆ ಇತರರು ಇದ್ದರು.