ಕನ್ನಡಪ್ರಭ ವಾರ್ತೆ ಬಸವಾಪಟ್ಟಣ
ಸ್ವಾಸ್ಥ ಸಮಾಜ ಸಮಿತಿಯ ವತಿಯಿಂದ ಸಂತೆಮರೂರು ಗ್ರಾಮದಲ್ಲಿರುವ ಸಮಾಜಕಲ್ಯಾಣ ಇಲಾಖೆಯ ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿನಿಲಯದ ಆವರಣದಲ್ಲಿ ಹಣ್ಣು ಮತ್ತು ಇತರೆ ಗಿಡಗಳು, ತೆಂಗಿನ ಗಿಡಗಳನ್ನು ನೆಡುವ ಕಾರ್ಯಕ್ರಮದಲ್ಲಿ ಸ್ವಸ್ಥ ಸಮಾಜದ ಅಧ್ಯಕ್ಷರಾಗಿ ಮಾತನಾಡಿ, ಈಗಾಗಲೇ ಪರಿಸರ ಬಹಳಷ್ಟು ವೈಪರೀತ್ಯದಿಂದ ಹದಗೆಟ್ಟಿದ್ದು ಉತ್ತಮವಾದ ಗಾಳಿ ಸಹ ಲಭ್ಯವಾಗುತ್ತಿಲ್ಲ. ನೆಲ, ಜಲ, ಗಾಳಿ ಎಲ್ಲವೂ ಸಹ ಕಲುಷಿತವಾಗುತ್ತಿದ್ದು ಮುಂದಿನ ಪೀಳಿಗೆಗೆ ಉತ್ತಮ ಪರಿಸರ ನೀಡುವುದು ನಮ್ಮೆಲ್ಲರ ಹೊಣೆಯಾಗಿದೆ. ನಾವು ಸಮರೋಪಾದಿಯಲ್ಲಿ ಪರಿಸರ ಸಂರಕ್ಷಣೆ ಮಾಡಬೇಕಾಗಿದೆ. ಎಲ್ಲರೂ ಸಹ ಇದಕ್ಕಾಗಿ ಶ್ರಮಿಸಬೇಕಾಗಿದೆ. ಸ್ಥಳೀಯವಾಗಿ ಲಭ್ಯವಿರುವ ತಾಜಾ ಹಣ್ಣುಗಳನ್ನು ಹೆಚ್ಚು ಹೆಚ್ಚು ಬೆಳಸಲು ವಿದ್ಯಾರ್ಥಿಗಳಿಗೆ ತಿಳಿಸಿದರು.
ಇದೇ ವೇಳೆ ನಿವೃತ್ತ ಪ್ರಾಂಶುಪಾಲರಾದ ಬಸವರಾಜು, ತಾಪಂ ಮಾಜಿ ಸದಸ್ಯರಾದ ಎಚ್. ಮಾದೇಶ, ರಾಮಶೇಷಲು, ಗ್ರಾಮಪಂಚಾಯ್ತಿ ಮಾಜಿ ಸದಸ್ಯರಾದ ದಡದಹಳ್ಳಿ ಜಗದೀಶ, ಮಾದಿಹಳ್ಳಿ ಮಲ್ಲಿಕಾ, ನಸ್ರುಲ್ಲಾ, ಟಿಪ್ಪು, ಸೋಮಣ್ಣ, ಕಾಂತರಾಜು, ತಾಪಂ ಮಾಜಿಸದಸ್ಯರಾದ ಪಾಂಡುರಂಗ, ಗ್ರಾಮಪಂಚಾಯ್ತಿ ಮಾಜಿ ಅಧ್ಯಕ್ಷರಾದ ವೆಂಕಟೇಶ್, ರಾಜಣ್ಣ, ಸಂತೆಮರೂರು ವಿದ್ಯಾರ್ಥಿನಿಲಯ ಪಾಲಕರಾದ ಉಮೇಶ್ ಕುಮಾರ್, ಸಿಬ್ಬಂದಿ, ಗ್ರಾಮದ ಪ್ರಮುಖರು ಹಾಜರಿದ್ದರು.