ಕನ್ನಡಪ್ರಭ ವಾರ್ತೆ ಉಡುಪಿ
ಉಡುಪಿ ಶ್ರೀ ಅದಮಾರು ಮಠ ಶಿಕ್ಷಣ ಮಂಡಳಿಯ ಉಡುಪಿ ವಿಭಾಗದ ಆಡಳಿತಾಧಿಕಾರಿಗಳಾಗಿರುವ ಡಾ. ಎ.ಪಿ. ಭಟ್ ಮಾತನಾಡಿ, ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದ ಬೇರೆ ಬೇರೆ ಕಾಲೇಜುಗಳ ಸುಮಾರು ಒಂದೂವರೆ ಸಾವಿರದಷ್ಟು ವಿದ್ಯಾರ್ಥಿಗಳು ಉಜ್ವಲ ಭವಿಷ್ಯವನ್ನು ಹೊಂದಿದ್ದಾರೆ ಎಂದರು.
ಪೂರ್ಣಪ್ರಜ್ಞ ಕಾಲೇಜಿನ ಹಳೆವಿದ್ಯಾರ್ಥಿ ಸಂಘ ಕಾರ್ಯಾಧ್ಯಕ್ಷ ಡಾ. ಎಂ.ಆರ್. ಹೆಗಡೆ, ಕಾಲೇಜಿನ ಪ್ರಾಂಶುಪಾಲ ಡಾ. ರಾಮು ಎಲ್., ಪ್ರಜ್ಞಾ ಉತ್ಸವದ ಮುಖ್ಯ ಸಂಯೋಜಕ ಡಾ. ರಮೇಶ್ ಟಿ.ಎಸ್., ಸಹ ಸಂಯೋಜಕಿ ಜಯಲಕ್ಷ್ಮೀ, ಶೈಕ್ಷಣಿಕ ಸ್ಪರ್ಧೆಗಳ ಸಂಯೋಜಕಿ ಪ್ರತಿಭಾ ಆಚಾರ್ಯ, ಸಾಂಸ್ಕೃತಿಕ ಸ್ಪರ್ಧೆಗಳ ಸಂಯೋಜಕ ಡಾ. ಮಂಜುನಾಥ ಕರಬ, ಐಕ್ಯುಎಸಿ ಸಂಯೋಜಕ ಡಾ. ವಿನಯ್ ಕುಮಾರ್, ಕಾಲೇಜಿನ ವಿದ್ಯಾರ್ಥಿ ಸಂಘ ಅಧ್ಯಕ್ಷ ಮಾನುಷ್ ಕೋಟ್ಯಾನ್, ವಿದ್ಯಾರ್ಥಿ ಸಂಘದ ಪದಾದಿಕಾರಿಗಳಾದ ಅಮೃತಾ ಭಟ್, ಚೇತನಾ ಪೈ, ನಿಕ್ಷಿತಾ ಉಪಸ್ಥಿತರಿದ್ದರು.ಇತಿಹಾಸ ವಿಭಾಗದ ಮುಖ್ಯಸ್ಥ ಮಹೇಶ್ ಶೆಟ್ಟಿ ಸ್ವಾಗತಿಸಿದರು. ಆಂಗ್ಲಭಾಷಾ ವಿಭಾಗದ ಸಹಾಯಕ ಪ್ರಾಧ್ಯಾಪಕ ಸಂದೀಪ್ ಸತ್ಯಮೂರ್ತಿ ಅಭ್ಯಾಗತರಿಗೆ ಸ್ವಾಗತಪುಷ್ಪ ನೀಡಿದರು. ವಾಣಿಜ್ಯಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ಸುಮಲತಾ ನಿರೂಪಿಸಿದರು. ಡಾ. ಮಂಜುನಾಥ ಕರಬ ವಂದಿಸಿ, ಡಾ. ರಮೇಶ್ ಟಿ.ಎಸ್ ಸಮಗ್ರ ತಂಡಪ್ರಶಸ್ತಿ ವಿಜೇತರ ಪಟ್ಟಿಯನ್ನು ವಾಚಿಸಿದರು.
ಪ್ರಜ್ಞಾ-೨೦೨೪ ಉತ್ಸವದ ಶೈಕ್ಷಣಿಕ ಹಾಗೂ ಸಾಂಸ್ಕೃತಿಕ ವಿಭಾಗಗಳ ೪೫ ಬಗೆಯ ವಿವಿಧ ಸ್ಪರ್ಧೆಗಳಲ್ಲಿ ರಾಜ್ಯಮಟ್ಟದ ೨೫ ಕಾಲೇಜುಗಳು ಭಾಗವಹಿಸಿದ್ದವು.