ಸ್ಥಳೀಯ ಸಮಸ್ಯೆಗಳಿಗೆ ಪ್ರಜಾಸೇವೆ ಆಂದೋಲನಾ ಪರಿಹಾರ

KannadaprabhaNewsNetwork |  
Published : Nov 08, 2026, 02:30 AM IST
 ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ದೂರದೃಷ್ಠಿಯ ಪ್ರಜಾಸೇವಾ ಆಂಧೋಲನಾ ಕಾರ್ಯಕ್ರಮವನ್ನು ಕೂಡ್ಲಿಗಿ ಶಾಸಕ ಡಾ.ಎನ್.ಟಿ.ಶ್ರೀನಿವಾಸ್ ತಾಲೂಕಿನ  ಗುಡೇಕೋಟೆ ಹೋಬಳಿಯ ಚಂದ್ರಶೇಖರಪುರದಲ್ಲಿ ಶನಿವಾರ ಉದ್ಗಾಟಿಸಿದರು. | Kannada Prabha

ಸಾರಾಂಶ

ಸಿ.ಎಸ್.ಪುರದ ಪತ್ರಿ ಒಣಿಯಿಂದ ಕೂಡ್ಲಿಗಿ ಮುಖ್ಯ ರಸ್ತೆಗೆ ಮಂಜೂರಾಗಿದೆ, ಪ್ರತಿ ಗ್ರಾಮದಲ್ಲಿ ವಿದ್ಯುತ್ ಕಂಬಗಳ ಬದಲಾವಣೆಗೆ ಕ್ರಮ ಕೈಗೊಳ್ಳಲಾಗಿದೆ

ಕೂಡ್ಲಿಗಿ: ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ದೂರದೃಷ್ಠಿಯ ಪ್ರಜಾಸೇವಾ ಆಂದೋಲನಾ ಗುಡೇಕೋಟೆ ಹೋಬಳಿಯ ಚಂದ್ರಶೇಖರಪುರದಲ್ಲಿ ಶನಿವಾರ ನಡೆಯಿತು.

ಕಾರ್ಯಕ್ರಮ ಉದ್ಘಾಟಿಸಿದ ಕೂಡ್ಲಿಗಿ ಶಾಸಕ ಡಾ. ಎನ್.ಟಿ.ಶ್ರೀನಿವಾಸ್ ಮಾತನಾಡಿ, ಸ್ಥಳೀಯ ಸಮಸ್ಯೆಗಳಿಗೆ ಪ್ರಜಾಸೇವೆ ಆಂದೋಲನ ಕಾರ್ಯಕ್ರಮದಿಂದ ಪರಿಹಾರ ದೊರೆಯುತ್ತವೆ ಎಂದು ತಿಳಿಸಿದರು.

ಅಧಿಕಾರಿಗಳು ಜನತೆಯ ಸಮಸ್ಯೆಗಳಿಗೆ ಸ್ಪಂದಿಸಲು ಇದೊಂದು ಉತ್ತಮ ವೇದಿಕೆಯಾಗಿದೆ.ಚಂದ್ರಶೇಖರಪುರ ಶಿಕ್ಷಣ ಕ್ಷೇತ್ರದಲ್ಲಿ ಹೆಸರಾಗಿದ್ದು, ನರಸಿಂಹಗಿರಿಗೂ ಇಲ್ಲಿಗೆ ಅವಿನಾಭಾವ ಸಂಬಂಧ ಇದೆ.ಶೈಕ್ಷಣಿಕ ಕೊಡುಗೆಯಲ್ಲಿ ಮಹತ್ತರ ಪಾತ್ರ ವಹಿಸಿದ ಗ್ರಾಮ ಚಂದ್ರಶೇಖರಪುರ ಆಗಿದೆ ಎಂದರು.

ಚಂದ್ರಶೇಖರಪುರ ಕೆಪಿಎಸ್ ಶಾಲೆ ಉನ್ನತಿಕರಣಕ್ಕೆ ಮಂಜೂರು ಮಾಡಿದ್ದು ,ವಿಶೇಷ ಅನುದಾನದಲ್ಲಿ ರಾಮದುರ್ಗ ಸರ್ಕಲ್ ಅಭಿವೃದ್ಧಿಗೆ ಹಣ ಮಂಜೂರು ಮಾಡಲಾಗಿದ್ದು,ನಾಗರಹುಣಸೆಯಿಂದ ರಾಮದುರ್ಗ ಶ್ರೀಕಂಠಾಪುರದ ವರೆಗೆ ಮರು ಡಾಂಬರೀಕರಣ, ನಾಗರಹುಣಸೆ ಸಿಸಿ ರಸ್ತೆ ಟೆಂಡರ್ ಕಾಲ್ ಆಗಿದೆ. ಸಿ.ಎಸ್.ಪುರದ ಪತ್ರಿ ಒಣಿಯಿಂದ ಕೂಡ್ಲಿಗಿ ಮುಖ್ಯ ರಸ್ತೆಗೆ ಮಂಜೂರಾಗಿದೆ, ಪ್ರತಿ ಗ್ರಾಮದಲ್ಲಿ ವಿದ್ಯುತ್ ಕಂಬಗಳ ಬದಲಾವಣೆಗೆ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು. ಪ್ರತಿ ಗ್ರಾಪಂಗೆ ₹1 ಕೋಟಿ ಅನುದಾನ ಬಿಡುಗಡೆ ಮಾಡಲಾಗಿದೆ, ತಾಲೂಕಿನ ₹30 ಕೋಟಿ ಅನುದಾನ ಬಿಡುಗಡೆ ಮಾಡಲಾಗಿದೆ, ₹20 ಸಾವಿರ ಕೋಟಿ ಹಣದಿಂದ ಲೋಕೋಪಯೋಗಿ ಇಲಾಖೆಯಿಂದ ತಾಲೂಕಿನ ಎಲ್ಲ ರಸ್ತೆಗಳ ಅಭಿವೃದ್ಧಿಗೆ,ಹಣ ಬಿಡುಗಡೆ ಮಾಡಲಾಗಿದೆ ಎಂದರು.

ಕುಡಿಯುವ ನೀರಿಗಾಗಿ ಅನುದಾನಕ್ಕೆ ತೊಂದರೆ ಇಲ್ಲ, ಯಾವುದೇ ಕಾರಣಕ್ಕೂ ಕುಡಿಯುವ ನೀರಿನ ಸಮಸ್ಯೆ ಆಗಬಾರದು. ಸಿ.ಎಸ್.ಪುರ ಅಭಿವೃದ್ಧಿಗೆ ₹2 ಕೋಟಿ ಅನುದಾನ ಬಿಡುಗಡೆ ಮಾಡಲಾಗಿದೆ. ಶಾಸಕರ ವಿವೇಚನೆ ನಿಧಿಯಲ್ಲಿ ಧಾರ್ಮಿಕ ಕ್ಷೇತ್ರಗಳಿಗೆ ಅನುದಾನ ಬಿಡುಗಡೆ ಮಾಡಲಾಗಿದೆ.ಗುಡೇಕೋಟೆ ಆಸ್ವತ್ರೆ, ಸಮುದಾಯ ಆರೋಗ್ಯ ಕೇಂದ್ರವಾಗಿ ಉನ್ನತಿಕರಣಕ್ಕೆ ಸರ್ಕಾರ ನಮ್ಮ ಬೇಡಿಕೆ ಈಡೇರಿಸಿದೆ ಎಂದು ಶಾಸಕರು ತಿಳಿಸಿದರು.

ಕೂಡ್ಲಿಗಿ ತಾಪಂ ಇಓ ನರಸಪ್ಪ ಮಾತನಾಡಿ, ತಾಲೂಕಿನಲ್ಲಿ 12 ಜನರಿಗೆ ಅನುಕಂಪದ ಆಧಾರದ ಮೇಲೆ ನೌಕರಿ ಸಿಕ್ಕಿದೆ ಎಂದರು.

ಇದೇ ಸಂದರ್ಭದಲ್ಲಿ ಸೇವಾ ಸಮಯದಲ್ಲಿ ಮರಣ ಹೊಂದಿದ ಸಿಬ್ಬಂದಿಗೆ ಆದೇಶ ಪತ್ರವನ್ನು ಶಾಸಕರು ನೀಡಿದರು. ಡಿವೈಎಸ್ಪಿ ಮಲ್ಲೇಶಪ್ಪ ದೊಡ್ಡಮನಿ ಬಿಸಿಎಂ ಅಧಿಕಾರಿ ಶ್ಯಾಮಪ್ಪ, ನೌಕಕರ ಸಂಘದ ಅಧ್ಯಕ್ಷ ಎಸ್. ವೆಂಕಟೇಶ್, ಸಿಡಿಪಿಒ ಮಾಲುಂಬಿ, ಬಣವಿಕಲ್ಲು ಯರ್ರಿಸ್ವಾಮಿ, ಬಣಕಾರ ವೀರಭದ್ರಪ್ಪ, ಗ್ಯಾರಂಟಿ ಸಮಿತಿ ಅಧ್ಯಕ್ಷ ಜಿಲಾನ್, ನಿವೃತ್ತ ಇಒ ಬಸಣ್ಣ, ಜಿ.ಎಂ. ಪ್ರಸನ್ನ, ಸಿಡೇಗಲ್ ಬಸವರಾಜ, ಗುಡೇಕೋಟೆ ಎಸ್. ನಾಗರಾಜ್ , ಬಣವಿಕಲ್ಲು ಎರ್ರಿಸ್ವಾಮಿ, ಸಿದ್ದಬಸಣ್ಣ, ಅಂಜಿನಪ್ಪ, ಲಿಂಗಪ್ಪ, ಬಿಷ್ಣಳ್ಳಿ ನಿಂಗಣ್ಣ, ಶ್ರೀಧರ ನಾಯ್ಕ, ಕುಮಾರಸ್ವಾಮಿ, ಗುರುಸಿದ್ದಣ್ಣ, ಓಂ.ರಾಜಪ್ಪ, ಪೂಜಾರಿ ಲಕ್ಷ್ಮಣ, ಚಿತ್ತಪ್ಪ, ಪಾಲಯ್ಯ, ಶಿವರಾಂ, ಷಡಕ್ಷರಿ, ಬಾಬು,ಮಲಿಯಪ್ಪ ಮುಂತಾದವರಿದ್ದರು.

ಪ್ರಾಸ್ತಾವಿಕವಾಗಿ ಇಒ ಬಸಣ್ಣ ಮಾತನಾಡಿದರು. ತಾಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು. ಜನತೆ ತಮ್ಮ ಅಹವಾಲು ತಂದು ಶಾಸಕರಿಗೆ ಅಧಿಕಾರಿಗಳಿಗೆ ನೀಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕವಿ ಹೃದಯದ ಡಾ.ಚೆನ್ನಬಸವ ಶ್ರೀಗಳು: ತೋಂಟದಾರ್ಯ ಶ್ರೀ
ಶಿರಗುಪ್ಪಿ ಕಾರ್ಖಾನೆಯಿಂದ ₹4,000 ದರ ಘೋಷಣೆ