ಹುಬ್ಬಳ್ಳಿ: ಉದ್ಯಮದಲ್ಲಿ ಸಾಧನೆ ತೋರುವ ಹುಮ್ಮಸ್ಸು, ಹಂಬಲವಿದ್ದರೆ ಏನೆಲ್ಲ ಸಾಧಿಸಬಹುದು ಎಂಬುದಕ್ಕೆ ಪ್ರಜ್ವಲ್ ಐತವಾಡಿ ಉತ್ತಮ ಉದಾಹರಣೆ. ಇವರು ನೀರು ಕಾಯಿಸುವ ಸ್ವದೇಶಿ ಬಾಯ್ಲರ್ ತಯಾರಿಸಿ ಮಾರಾಟ ಮಾಡುವ ಮೂಲಕ ಸೈ ಎನಿಸಿಕೊಂಡಿದ್ದಾರೆ.
ಐದು ಬಗೆಯ ಬಾಯ್ಲರ್: ಮೇಳದಲ್ಲಿ ಐದು ಬಗೆಯ ಟಾಕಿಗಳನ್ನು ಪ್ರದರ್ಶನಕ್ಕಿಟ್ಟು ಮಾರಾಟ ಮಾಡುತ್ತಿದೆ. ಇದರಲ್ಲಿ ಎರಡು ಬಗೆಯಲ್ಲಿ ಕಟ್ಟಿಗೆ, ಇಲೆಕ್ಟ್ರಿಕ್, ಗ್ಯಾಸ್, ಡಿಸೇಲ್ ಬಳಕೆ ಮಾಡಿ ನೀರು ಕಾಯಿಸುವ ಬಾಯ್ಲರ್ ದೊರೆಯುತ್ತಿವೆ. ರಾಷ್ಟ್ರೀಯ ಮಾನ್ಯತೆ ಪಡೆದ ಎಂಜಿನಿಯರ್‌ಗಳು ಮೊಟ್ಟಮೊದಲ ಬಾರಿಗೆ ರೂಪಿಸಿದ್ದಾರೆ. ದೀರ್ಘಕಾಲ ಬಾಳಿಕೆ ಬರುವ ಬಾಯ್ಲರ್ ಇದಾಗಿದ್ದು, ಕೇವಲ 7 ನಿಮಿಷದಲ್ಲಿ ಬಿಸಿ ನೀರು ದೊರೆಯುತ್ತದೆ.
ಒಮ್ಮೆ ನೀರು ಕಾಯಿಸಿದರೆ 18 ಗಂಟೆಗಳ ಕಾಲ ಬಿಸಿಯಾಗಿರುತ್ತದೆ. 20 ಲೀಟರ್‌ನಿಂದ ಹಿಡಿದು 1000 ಲೀಟರ್ ಸಾಮರ್ಥ್ಯ ಹೊಂದಿರುವ ಬಾಯ್ಲರ್‌ಗಳು ಮಾರಾಟಕ್ಕೆ ಲಭ್ಯವಿವೆ. 35 ರಿಂದ 40 ವರ್ಷಗಳ ವರೆಗೆ ಬಾಳಿಕೆ ಬರಲಿವೆ. ಕೃಷಿಮೇಳದಲ್ಲಿ ಬುಕ್ ಮಾಡಿದರೆ ಸೂಕ್ತ ರಿಯಾಯಿತಿ ಜತೆಗೆ ಉಚಿತವಾಗಿ ಹೋಂ ಡೆಲಿವರಿ ವ್ಯವಸ್ಥೆ ಕಲ್ಪಿಸಿರುವುದು ವಿಶೇಷ.ಹಲವರಿಂದ ಬುಕ್: ಬಾಯ್ಲರ್‌ನೊಂದಿಗೆ ಟಾಪೆಸ್ಟ್ ಮಾಡಲ್‌ನ ಸೋಲಾರ್‌ಗಳನ್ನು ಮಾರಾಟಕ್ಕಿರಿಸಿರುವುದು ಮತ್ತಷ್ಟು ಗ್ರಾಹಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದೆ. ಜಿಎಲ್, ಜಿಐ, ಎಸ್‌ಎಸ್, ಎಂಎಸ್ ಸೇರಿದಂತೆ ಹಲವು ವಿಧಗಳಲ್ಲಿ ಸೋಲಾರ್‌ಗಳು ಇಲ್ಲಿ ದೊರೆಯುತ್ತಿವೆ. ಕೃಷಿಮೇಳದಲ್ಲಿ ಶನಿವಾರ, ಭಾನುವಾರ ಮತ್ತು ಸೋಮವಾರ 50 ಸಾವಿರಕ್ಕೂ ಅಧಿಕ ಗ್ರಾಹಕರು ಮಳಿಗೆಗೆ ಭೇಟಿ ನೀಡಿ ಮಾಹಿತಿ ಪಡೆದಿದ್ದಾರೆ. ಜತೆಗೆ ಹಲವರು ಬುಕ್ ಮಾಡಿದ್ದಾರೆ.
ಇಲ್ಲಿಗೆ ಸಂಪರ್ಕಿಸಿ: ಬೆಳಗಾವಿ ಜಿಲ್ಲೆಯ ರಾಯಭಾಗ ತಾಲೂಕಿನ ಅಳಗವಾಡಿಯಲ್ಲಿರುವ ಗೊಮ್ಮಟೇಶ ಬಾಯ್ಲರ್ ಆ್ಯಂಡ್ ಸೋಲಾರ್ ಸಂಸ್ಥೆ. ಮೊ: 9972284678, 9686704678, 9353100008 ಸಂಖ್ಯೆಗಳಿಗೆ ಸಂಪರ್ಕಿಸಬಹುದಾಗಿದೆ.ಏನಾದರೂ ಉದ್ಯಮ ಆರಂಭಿಸಬೇಕು ಎಂಬ ಛಲತೊಟ್ಟು ಈ ಉದ್ಯಮ ಆರಂಭಿಸಿದೆ. ಆರಂಭದ ಮೊದಲು ಕೃಷಿಮೇಳ, ಜಾತ್ರೆ, ಜನದಟ್ಟಣೆ ಪ್ರದೇಶಗಳಲ್ಲಿ ಮಳಿಗೆ ಹಾಕಿ ಜನರಲ್ಲಿ ಜಾಗೃತಿ ಮೂಡಿಸಿದ ಫಲವಾಗಿ ಇಂದು ದೊಡ್ಡ ಉದ್ಯಮವಾಗಿ ಹೊರಹೊಮ್ಮಿರುವುದು ಸಂತಸ ತಂದಿದೆ ಎಂದು ಗೊಮ್ಮಟೇಶ ಬಾಯ್ಲರ್ ಆ್ಯಂಡ್ ಸೋಲಾರನ ಮಾಲಿಕ ಪ್ರಜ್ವಲ್ ಐತವಾಡಿ ಹೇಳಿದರು.