ಕನ್ನಡಪ್ರಭ ವಾರ್ತೆ ಮೈಸೂರು
ಪ್ರಕಾಶ್ ಪುಟ್ಟಪ್ಪ ಅವರ ''''''''ಅಥೆನ್ಸಿನ ಪಾರಿವಾಳ'''''''' ಕವನ ಸಂಕಲವನ್ನು ಚಿ. ಶ್ರೀನಿವಾಸರಾಜು ಕಾವ್ಯ ಮಾಲಿಕೆಯಲ್ಲಿ ಸಂಗಾತ ಪುಸ್ತಕ ಪ್ರಕಟಿಸಿದೆ. ಜಿ.ಪಿ. ಬಸವರಾಜು ಅವರ ಮುನ್ನುಡಿ ಇದೆ. ಈ ಸಂಕಲನದಲ್ಲಿ 41 ಕವಿತೆಗಳಿವೆ. ಉರಿಗಣ್ಣಿನ ನಕ್ಷತ್ರಗಳು, ಪಾರ್ಥೇನಿಯಂ, ನಾನು ಮತ್ತು ಬೆಕ್ಕು, ಅಥೆನ್ಸ್ ನಗರದ ಪಾರಿವಾಳದ ವಾರ್ತೆ, ಧರಣಿ ಮಂಡಲ ಮಧ್ಯದೊಳಗೆ, ನಿಮ್ಮ ಪ್ರಮಥರ ಮೇಲಾಣೆ, ಕಂಚಿನ ಹರಿವಾಣ, ಅಸ್ಪೃಶ್ಯ ಗಿಳಿ ಮತ್ತು ಮಾಯಕಾರ, ಹೂಳಲು ಜಾಗ ಕೊಡಿ, ಯುದ್ಧವೆಂದರೆ ಕನಸು ಕಾಣುವುದಲ್ಲ ಸೇರಿದಂತೆ ಇಲ್ಲಿರುವ ಎಲ್ಲಾ ಕವಿತೆಗಳಲ್ಲಿ ಕವಿಯ ಸೂಕ್ತ ಸಂವೇದನೆ ವ್ಯಕ್ತವಾಗುತ್ತದೆ. ಇಲ್ಲಿ ಪುರಾಣ, ಚರಿತ್ರೆ, ವರ್ತಮಾನ ಎಲ್ಲವೂ ಬರುತ್ತದೆ.
''''''''ಜೀವವೇ ಇಲ್ಲದ, ಕಣ್ಣಲ್ಲಿ ಬೆಳಕೇ ಇಲ್ಲದ ಬೆದರುಗೊಂಬೆಗಳಂಥ ಕವಿತೆಗಳೇ ಹೆಚ್ಚು ಅಡ್ಡಹಾಯುವ ಈ ದಿನಗಳಲ್ಲಿ ಅಪರೂಪಕ್ಕೆ ಎನ್ನುವಂತೆ ಕವಿ ಚೇತನವೊಂದು ಹೊಳೆಯುತ್ತ, ಬೆಳಗುತ್ತ ನಿಜ ಕವಿತೆಯಾಗಿ ಕಣ್ ಮಿಟುಕಿಸಿದರೆ ಆಗುವ ಖುಷಿ ಈ ಕವಿತೆಗಳನ್ನು ಓದುವಾಗ ಆಗುತ್ತದೆ. ಹೊಸ ತಲೆಮಾರಿನ ಪ್ರಕಾಶ್ ಪುಟ್ಟಪ್ಪ ಬದುಕನ್ನು ಬೊಗಸೆಯಲ್ಲಿ ತುಂಬಿಕೊಳ್ಳುವ, ಕಣ್ತೆರದು ನೋಡುವ, ಚಿಂತಿಸುವ, ನಲಗುವ, ನಲಿಯುವ ನಾಲ್ಕು ಹನಿ ಕಣ್ಣೀರು ಸುರಿಸುವ ಪರಿಯನ್ನು ಈ ಕವಿತೆಗಳು ಕಾಣಿಸುತ್ತವೆ'''''''' ಎಂಬ ಜಿ.ಪಿ. ಬಸವರಾಜು ಅವರ ಮಾತುಗಳು ಈ ಸಂಕಲನದ ಮಹತ್ವವನ್ನು ಸಾರುತ್ತವೆ.''''''''ಉರಿಗಣ್ಣಿನ ನಕ್ಷತ್ರಗಳು'''''''' ಕವನ ಗಮನಿಸಿದಾಗ
ಕೆಂಗಣ್ಣಿನಿಂದ ಕೆಕ್ಕರಿಸಿ ಬಿಟ್ಟಷ್ಟಕ್ಕೆ ನೀವು ಯುದ್ಧ
ರಾಜಧಾನಿಯಲಿ ತುತ್ತಿಗೆ ಬಿಕ್ಕಳಿಸುವ ಅವ್ವಂದಿರ
ಬೆಳಕಿನೊಟ್ಟಿಗೆ ಬೆಂಕಿ ಉಗುಳಿದರೆ
ಗಾಂದೀ ರೋಡು, ಗಾಂಧಿ ಬಜಾರು ಎಂದರೆ
ಕಂಡೆಯಾ
ಕೊನೆಗೆ ಸತ್ಯವನು
ಎಂಬ ಸಾಲುಗಳನ್ನು ಗಮನಿಸಿದಾಗ ಮಾರ್ಮಿಕತೆ, ವಿಡಂಬನೆ ಕಣ್ಣಿಗೆ ರಾಚುತ್ತದೆ.ಆಸಕ್ತರು ಪ್ರಕಾಶ್ ಪುಟ್ಟಪ್ಪ, ಮೊ. 99728 23222 ಸಂಪರ್ಕಿಸಬಹುದು.