ಗಾಯತ್ರಿ ಧ್ಯಾನಪೀಠದಲ್ಲಿ ಕಪಿಲ ಮಹರ್ಷಿಗಳ ಸನ್ನಿಧಾನದಲ್ಲಿ ಪರಿವಾರ ಶಕ್ತಿಯಾಗಿ ಶ್ರೀ ಪ್ರಸನ್ನಾಕ್ಷಿಯ ಪ್ರತಿಷ್ಠಾಪನೆಯೂ ಕ್ಷೇತ್ರದ ಧರ್ಮದರ್ಶಿ ಶ್ರೀ ರಮಾನಂದ ಗುರೂಜಿ ಮಾರ್ಗದರ್ಶನದಲ್ಲಿ, ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಸಂಪನ್ನಗೊಂಡಿತು.
ಕನ್ನಡಪ್ರಭ ವಾರ್ತೆ ಉಡುಪಿ
ಇಲ್ಲಿನ ದೊಡ್ಡಣ್ಣಗುಡ್ಡೆಯ ಶ್ರೀಚಕ್ರ ಪೀಠ ಸುರಪೂಜಿತೆ ಶ್ರೀ ದುರ್ಗಾ ಆದಿಶಕ್ತಿ ಕಾರಣಿಕ ಕ್ಷೇತ್ರದ ಗಾಯತ್ರಿ ಧ್ಯಾನಪೀಠದಲ್ಲಿ ಕಪಿಲ ಮಹರ್ಷಿಗಳ ಸನ್ನಿಧಾನದಲ್ಲಿ ಪರಿವಾರ ಶಕ್ತಿಯಾಗಿ ಶ್ರೀ ಪ್ರಸನ್ನಾಕ್ಷಿಯ ಪ್ರತಿಷ್ಠಾಪನೆಯೂ ಕ್ಷೇತ್ರದ ಧರ್ಮದರ್ಶಿ ಶ್ರೀ ರಮಾನಂದ ಗುರೂಜಿ ಮಾರ್ಗದರ್ಶನದಲ್ಲಿ, ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಸಂಪನ್ನಗೊಂಡಿತು..
ಆದ್ಯ ಗಣಪತಿಯಾಗ, ಪಂಚವೀಂಶತಿ ಕಲಾಶಾರಾಧನೆ, ಪ್ರತಿಷ್ಠಾ ಪ್ರಧಾನ ಹೋಮಗಳೊಂದಿಗೆ ಕಾರ್ಯಕ್ರಮಗಳು ಸಂಪನ್ನಗೊಂಡವು. ಗತಕಾಲದಲ್ಲಿ ಕ್ಷೇತ್ರ ರಚನೆಗೆ ಕಾರಣೀಭೂತರಾಗಿ ತಪಸ್ಸನ್ನು ಆಚರಿಸಿದ ಶ್ರೀ ಕಪಿಲ ಮಹರ್ಷಿಗಳ ಸಾನಿಧ್ಯದಲ್ಲಿ ನವಕ ಕಲಶ ಪ್ರಧಾನ ಹೋಮ, ಕಲಶಾಭಿಷೇಕ, ಕಾಮಧೇನುವಿಗೆ ವಿಶೇಷ ಪೂಜೆಗಳು ವೇದಮೂರ್ತಿ ಹೇರೂರು ಆನಂದ ಭಟ್ ಅವರು ನೆರವೇರಿಸಿದರು.
ಮಹಾಚಂಡಿಕಾಯಿಯಾಗದಲ್ಲಿ ಬ್ರಾಹ್ಮಣ ಸುವಾಸಿನಿಯರು ಅಧಿಕ ಸಂಖ್ಯೆಯಲ್ಲಿ ಆರಾಧನೆ ಸ್ವೀಕರಿಸಿದರು. ವಿಶೇಷವಾದ ಶೃಂಗಾರವಾದ್ಯ, ನಾದಸ್ವರ ವಾದ್ಯ, ಕೊಂಬು ಕಹಳೆ, ಚಂಡೆ ವಾದನದೊಂದಿಗೆ ಶ್ರೀ ಪ್ರಸನ್ನಾಕ್ಷಿಯ ಪ್ರತಿಷ್ಠಾಪನೆ ನೆರವೇರಿತು.
ಕ್ಷೇತ್ರದಲ್ಲಿ ದುರ್ಗಾ ಆದಿಶಕ್ತಿಯನ್ನು ವಿಶೇಷವಾಗಿ ಶ್ರೀ ಆನಂದ್ ಬಾಯಿರಿ ಅಲಂಕರಿಸಿದರು ಅನಿಶಾಚಾರ್ಯ ಮಹಾಪೂಜೆ ನೆರವೇರಿಸಿದರು. ಮಧ್ಯಾಹ್ನ ನೆರವೇರಿದ ಮಹಾ ಅನ್ನಸಂತರ್ಪಣೆಯಲ್ಲಿ ಸಹಸ್ರ ಸಂಖ್ಯೆಗೂ ಅಧಿಕ ಭಕ್ತರು ಅನ್ನಪ್ರಸಾದ ಸ್ವೀಕರಿಸಿದರು ಎಂದು ಕ್ಷೇತ್ರ ಉಸ್ತುವಾರಿ ಶ್ರೀಮತಿ ಕುಸುಮ ನಾಗರಾಜ್ ತಿಳಿಸಿರುತ್ತಾರೆ
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.