ಪ್ರತಾಪ ಸಿಂಹರಿಂದ ದಲಿತ ಸಮಿತಿಗೆ ಅಪಮಾನ: ದಸಂಸ ಜಿಲ್ಲಾ ಸಂಚಾಲಕ ಅರೇಹಳ್ಳಿ ನಿಂಗರಾಜು ಆಕ್ಷೇಪ

KannadaprabhaNewsNetwork |  
Published : Sep 24, 2026, 01:30 AM IST
ದಸಂಸ ಜಿಲ್ಲಾ ಸಂಚಾಲಕ ಅರೇಹಳ್ಳಿ ನಿಂಗರಾಜು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. | Kannada Prabha

ಸಾರಾಂಶ

ಬಿಜೆಪಿಯವರು ಇವರನ್ನು ಸರಿ ಮಾಡದಿದ್ದಲ್ಲಿ ಮುಂದಿನ ದಿನಗಳಲ್ಲಿ ದೊಡ್ಡ ಪರಿಣಾಮ ಎದುರಿಸಬೇಕಾಗುತ್ತದೆ. ಸಂಘ ಸಂಸ್ಥೆಗಳು ಅನ್ಯಾಯ ಕಂಡು ಬಂದಲ್ಲಿ ನ್ಯಾಯಕ್ಕಾಗಿ ಹೋರಾಟ ಮಾಡುವುದು ಸಹಜ. ಹೋರಾಟದ ಸಮಯದಲ್ಲಿ ನೀಲಿ ಶಾಲು ಧರಿಸುವುದು ಶಾಂತಿ ಸಂಕೇತ. ಇದರ ಅರಿವಿಲ್ಲದ ಮಾಜಿ ಸಂಸದರು ಕ್ಷಮೆ ಕೇಳಬೇಕು.

ಕನ್ನಡಪ್ರಭ ವಾರ್ತೆ, ಬೇಲೂರು

ನೀಲಿ ಶಾಲು ಧರಿಸಿ ಪ್ರತಿಭಟನೆಗೆ ಮುಂದಾಗುತ್ತಾರೆ ಎಂದು ಮಾಜಿ ಸಂಸದ ಪ್ರತಾಪ ಸಿಂಹ ವಿವಾದಾತ್ಮಕ ಹೇಳಿಕೆ ನೀಡುವ ಮೂಲಕ ದಲಿತ ಸಮಿತಿಗೆ ಅಪಮಾನ ಮಾಡಿದ್ದು ತಮ್ಮ ರಾಜಕೀಯ ಅಸ್ತಿತ್ವಕ್ಕಾಗಿ ಸಮಾಜದಲ್ಲಿ ಗೊಂದಲ ಸೃಷ್ಟಿಸುವ ಕೆಲಸವನ್ನು ಮಾಡುತಿದ್ದಾರೆ ಎಂದು ದಸಂಸ ಜಿಲ್ಲಾ ಸಂಚಾಲಕ ಅರೇಹಳ್ಳಿ ನಿಂಗರಾಜು ಆರೋಪಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ದಲಿತರು, ನಿರ್ಗತಿಕರು ಹಾಗೂ ಶೋಷಿತರ ಪರ ಕೆಲಸ ಮಾಡುವ ದಲಿತ ಸಂಘರ್ಷ ಸಮಿತಿಯವರ ಬಗ್ಗೆ ವಿಚಾರ ತಿಳಿಯದೆ ಹೇಳಿಕೆ ನೀಡುವ ಮೂಲಕ ರಾಜ್ಯದ ದಲಿತ ಸಮುದಾಯಕ್ಕೆ ಮತ್ತು ಡಾ.ಅಂಬೇಡ್ಕರ್ ಅವರಿಗೆ ಅಪಮಾನ ಮಾಡಿದ್ದಾರೆ. ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಮಾಜಿ ಸಂಸದರು ಸುಳ್ಳುಗಳ ಮೂಲಕ ಕಿಚ್ಚು ಹಚ್ಚುವಲ್ಲಿ ನಿಸ್ಸೀಮರಾಗಿದ್ದಾರೆ. ನೀಲಿ ಶಾಲಿನ ಬಗ್ಗೆ ಮಾಜಿ ಸಂಸದರು ಹೇಳಿಕೆ ನೀಡಿರುವುದನ್ನು ಖಂಡಿಸುವುದಾಗಿ ತಿಳಿಸಿದರು.

ಬಿಜೆಪಿಯವರು ಇವರನ್ನು ಸರಿ ಮಾಡದಿದ್ದಲ್ಲಿ ಮುಂದಿನ ದಿನಗಳಲ್ಲಿ ದೊಡ್ಡ ಪರಿಣಾಮ ಎದುರಿಸಬೇಕಾಗುತ್ತದೆ. ಸಂಘ ಸಂಸ್ಥೆಗಳು ಅನ್ಯಾಯ ಕಂಡು ಬಂದಲ್ಲಿ ನ್ಯಾಯಕ್ಕಾಗಿ ಹೋರಾಟ ಮಾಡುವುದು ಸಹಜ. ಹೋರಾಟದ ಸಮಯದಲ್ಲಿ ನೀಲಿ ಶಾಲು ಧರಿಸುವುದು ಶಾಂತಿ ಸಂಕೇತ. ಇದರ ಅರಿವಿಲ್ಲದ ಮಾಜಿ ಸಂಸದರು ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದರು.ಕರ್ನಾಟಕ ರಾಜ್ಯ ಹಜ್ ಸಮಿತಿ ಸದಸ್ಯ ನಾಸಿರುದ್ದಿನ್ ಮಾತನಾಡಿ, ಈ ಹಿಂದೆ ಮೈಸೂರು - ಕೊಡಗು ಸಂಸದರಾಗಿದ್ದ ಪ್ರತಾಪ್ ಸಿಂಹ ಪಕ್ಷ ಟಿಕೆಟ್ ನೀಡದ ಪರಿಣಾಮ ಬಿಜೆಪಿ ಮುಖಂಡರು ತನ್ನನ್ನು ಗುರುತಿಸಲೆಂದು ಮತ್ತು ಹತಾಶರಾಗಿ ಇಂತಹ ವಿವಾದತ್ಮಕ ಹೇಳಿಕೆ ನೀಡುತ್ತಿದ್ದಾರೆ. ಅಂಬೇಡ್ಕರ್ ಬಗ್ಗೆ ತಿಳಿದಿದ್ದರೆ ಇಂತಹ ಹೇಳಿಕೆ ಕೊಡುತ್ತಿರಲಿಲ್ಲ ಎಂದು ಹೇಳಿದರು.

ಸಮಾಜ ಸೇವಕ ಉಮರ್ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪಾಂಚಜನ್ಯ ಗಣಪತಿ ಅದ್ಧೂರಿ ವಿಸರ್ಜನಾ ಮೆರವಣಿಗೆ
ವಿದ್ಯಾಭ್ಯಾಸ ವೇಳೆ ಕಲಿಕೆ ತುಡಿತ, ಉತ್ಸಾಹ ಸ್ವಾಭಿಮಾನದ ಬದುಕಿಗೆ ಸಹಕಾರಿ: ಡಾ. ಕೃಷ್ಣೇಗೌಡ