ಪ್ರತಾಪ್‌ ಸಿಂಹ ದೇಶಪ್ರೇಮ, ಧರ್ಮದ ಪ್ರತೀಕ

KannadaprabhaNewsNetwork |  
Published : Nov 16, 2026, 02:45 AM IST
ತಾಳಿಕೋಟೆ 1 | Kannada Prabha

ಸಾರಾಂಶ

ಮಹಾರಾಣಾ ಪ್ರತಾಪ್ ಸಿಂಹ ಅವರು ರಾಜಮಹಲ್, ವೈಭವದ ಜೀವನ ತ್ಯಜಿಸಿ ಕಾಡು-ಮೇಡುಗಳಲ್ಲಿ ವಾಸಿಸಿ ರೊಟ್ಟಿ ತಿಂದು ಬದುಕಿದರೂ ತಮ್ಮ ಧರ್ಮ, ಸ್ವಾಭಿಮಾನ ಹಾಗೂ ಮಾತೃಭೂಮಿ ರಕ್ಷಣೆಯ ಸಂಕಲ್ಪದಿಂದ ಹಿಂದೆ ಸರಿಯಲಿಲ್ಲ. ಅವರ ತ್ಯಾಗ, ಶೌರ್ಯ, ಧೈರ್ಯ ಮತ್ತು ರಾಷ್ಟ್ರಪ್ರೇಮ ಅನಂತ ಪೀಳಿಗೆಗಳಿಗೂ ಆದರ್ಶವಾಗಬೇಕು ಎಂದು ಕೇಂದ್ರದ ಮಾಜಿ ಸಚಿವ, ಸಂಸದ ಅನುರಾಗ್‌ಸಿಂಗ್ ಠಾಕೂರ್ ಹೇಳಿದರು.

ಕನ್ನಡಪ್ರಭ ವಾರ್ತೆ ತಾಳಿಕೋಟೆ

ಮಹಾರಾಣಾ ಪ್ರತಾಪ್ ಸಿಂಹ ಅವರು ರಾಜಮಹಲ್, ವೈಭವದ ಜೀವನ ತ್ಯಜಿಸಿ ಕಾಡು-ಮೇಡುಗಳಲ್ಲಿ ವಾಸಿಸಿ ರೊಟ್ಟಿ ತಿಂದು ಬದುಕಿದರೂ ತಮ್ಮ ಧರ್ಮ, ಸ್ವಾಭಿಮಾನ ಹಾಗೂ ಮಾತೃಭೂಮಿ ರಕ್ಷಣೆಯ ಸಂಕಲ್ಪದಿಂದ ಹಿಂದೆ ಸರಿಯಲಿಲ್ಲ. ಅವರ ತ್ಯಾಗ, ಶೌರ್ಯ, ಧೈರ್ಯ ಮತ್ತು ರಾಷ್ಟ್ರಪ್ರೇಮ ಅನಂತ ಪೀಳಿಗೆಗಳಿಗೂ ಆದರ್ಶವಾಗಬೇಕು ಎಂದು ಕೇಂದ್ರದ ಮಾಜಿ ಸಚಿವ, ಸಂಸದ ಅನುರಾಗ್‌ಸಿಂಗ್ ಠಾಕೂರ್ ಹೇಳಿದರು.ನಗರದಲ್ಲಿ ಭಾನುವಾರ ಮಹಾರಾಣಾ ಪ್ರತಾಪ್ ಸಿಂಹ ಅವರ ಭವ್ಯ ಕಂಚಿನ ಮೂರ್ತಿ ಅನಾವರಣ ನಂತರ ಎಸ್.ಕೆ.ಕಾಲೇಜ್ ಮೈದಾನದಲ್ಲಿ ನಡೆದ ಸಮಾರಂಭದಲ್ಲಿ ಮಾತನಾಡಿ, ಮಹಾರಾಣಾ ಪ್ರತಾಪ್ ಸಿಂಹ ಅವರು ತಮ್ಮ ರಾಜಸಿಂಹಾಸನದ ಬಗ್ಗೆ ಚಿಂತಿಸದೆ ದೇಶ, ಧರ್ಮ ಮತ್ತು ಸಂಸ್ಕೃತಿಯ ರಕ್ಷಣೆಗಾಗಿ ಜೀವನವನ್ನೇ ಸಮರ್ಪಿಸಿದ ಮಹಾನ್ ವ್ಯಕ್ತಿ. ಅಂತಹ ಮಹಾವೀರನ ಮೂರ್ತಿ ಅನಾವರಣ ಕಾರ್ಯಕ್ರಮಕ್ಕೆ ಆಗಮಿಸಿರುವ ನಾವೆಲ್ಲರೂ ಅವರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.

ಹಿಮಾಚಲ ಪ್ರದೇಶದಿಂದ ತಾಳಿಕೋಟೆಗೆ ಆಗಮಿಸಿರುವುದನ್ನು ಉಲ್ಲೇಖಿಸಿದ ಅವರು, ದೈಹಿಕ ಆಯಾಸಕ್ಕಿಂತ ಮಹಾರಾಣಾ ಪ್ರತಾಪ್ ಅವರ ಮೇಲಿನ ಅಭಿಮಾನ ದೊಡ್ಡದು. ನಾನೂ ಅವರ ಸಂತಾನ ಎಂಬ ಭಾವನೆಯಿಂದ ಈ ಐತಿಹಾಸಿಕ ಕಾರ್ಯಕ್ರಮದಲ್ಲಿ ಭಾಗವಹಿಸಿರುವುದು ಹೆಮ್ಮೆಯ ಸಂಗತಿ ಎಂದರು. ಮಹಾರಾಣಾ ಪ್ರತಾಪ್ ಅವರ ಶೌರ್ಯ, ಮಾತೃಭೂಮಿಗಾಗಿ ನಡೆಸಿದ ಹೋರಾಟ ಪ್ರತಿಯೊಬ್ಬ ಭಾರತೀಯನಲ್ಲೂ ಸ್ವಾಭಿಮಾನ ಮತ್ತು ರಾಷ್ಟ್ರಪ್ರೇಮವನ್ನು ಜಾಗೃತಗೊಳಿಸುತ್ತದೆ. ಅವರು ಕೇವಲ ಒಬ್ಬ ರಾಜನಲ್ಲ, ಸ್ವಾತಂತ್ರ್ಯ, ಸ್ವಾಭಿಮಾನ, ಸಂಘರ್ಷ ಮತ್ತು ಶೌರ್ಯದ ಪ್ರತೀಕವಾಗಿದ್ದಾರೆ. ತಮ್ಮ ಪ್ರೀತಿಯ ಚೇತಕ್ ಕುದುರೆಯ ಮೇಲೆ ಸವಾರಿ ಮಾಡಿ ಶತ್ರುಗಳನ್ನು ಎದುರಿಸಿದ ಅವರ ಸಾಹಸ ಇತಿಹಾಸದಲ್ಲಿ ಅಚ್ಚಳಿಯದೆ ಉಳಿದಿದೆ ಎಂದು ಸ್ಮರಿಸಿದರು.ಭಗವದ್ಗೀತೆಯ ೧೮ನೇ ಅಧ್ಯಾಯದ ೪೩ನೇ ಶ್ಲೋಕ ಉಲ್ಲೇಖಿಸಿದ ಅವರು, ಶೌರ್ಯ, ತೇಜಸ್ಸು, ಧೈರ್ಯ, ಚಾತುರ್ಯ ಮತ್ತು ದಾನಶೀಲತೆ ಕ್ಷತ್ರಿಯರ ಸಹಜ ಗುಣಗಳಾಗಿವೆ. ರಜಪೂತ ಸಮಾಜವೆಂದರೆ ಕೇವಲ ಒಂದು ಜಾತಿಯ ಗುರುತಲ್ಲ, ದೇಶದ ರಕ್ಷಣೆ, ಸಮಾಜದ ಗೌರವ ಮತ್ತು ಧರ್ಮದ ಸಂರಕ್ಷಣೆಯ ಹೊಣೆಗಾರಿಕೆಯನ್ನು ಹೊತ್ತಿರುವ ಪರಂಪರೆಯಾಗಿದೆ ಎಂದರು.ರಜಪೂತ ಸಮಾಜದ ಅಧ್ಯಕ್ಷ ಹರಿಸಿಂಗ್ ಮೂಲಿಮನಿ ಅಧ್ಯಕ್ಷತೆ ವಹಿಸಿದ್ದರು. ಈ ವೇಳೆ ಸಮಾಜದ ವಿಜಯಸಿಂಗ್ ಹಜೇರಿ, ಬಾಲಾಜಿಸಿಂಗ್ ಮಾದುಸಿಂಗ್ ಹಜೇರಿ, ಸಂಜೀವಕುಮಾರ ಲಕ್ಷ್ಮಣಸಿಂಗ್ ಹಜೇರಿ, ದಿ.ಬಿಂದಾಬಾಯಿ ಅಂಬರಸಿಂಗ್ ಹಜೇರಿ, ದಿ.ಶಾಂತಾಬಾಯಿ ವಿಠ್ಠಲಸಿಂಗ್ ಮೂಲಿಮನಿ, ದಿ.ವಿಠ್ಠಲಸಿಂಗ್ ಅಮರಸಿಂಗ್ ಹಜೇರಿ, ದಿ.ಮಾಧುಸಿಂಗ್ ವಿಜಾಪೂರ ಅವರ ಸ್ಮರಣಾರ್ಥ ದೇಣಿಗೆ ನೀಡಿದ ಕುಟುಂಬಸ್ಥರನ್ನು ಸನ್ಮಾನಿಸಲಾಯಿತು.ವೇದಿಕೆಯಲ್ಲಿ ಬಾಲಶಿವಯೋಗಿ ಶ್ರೀ ಸಿದ್ದಲಿಂಗ ದೇವರು, ಶ್ರೀ ಗುರಲಿಂಗ ಶಿವಾಚಾರ್ಯರು, ಶ್ರೀ ಸೋಮಲಿಂಗ ಮಹಾಸ್ವಾಮೀಜಿ, ಭೀಮಶಂಕರ ಜೋಶಿ, ಶಾಸಕ ಸಿ.ಎಸ್.ನಾಡಗೌಡ ಅಪ್ಪಾಜಿ, ಸಚಿವ ಅಜಯಸಿಂಗ್ ಧರ್ಮಸಿಂಗ್, ಶಾಸಕ ಶಿವಾನಂದ ಪಾಟೀಲ, ಶಾಸಕ ರಾಜುಗೌಡ ಪಾಟೀಲ, ರಾಜ್ಯಸಭಾ ಸದಸ್ಯ ನಾರಾಯಣ ಬಾಂಡ್‌ಗೆ, ಶಾಸಕ ಬಸನಗೌಡ ಪಾಟೀಲ(ಯತ್ನಾಳ), ಆರ್.ಎಸ್.ಪಾಟೀಲ(ಕೂಚಬಾಳ), ಮಾಜಿ ಶಾಸಕ ರಾಜುಗೌಡ ನರಸಿಂಹನಾಯಕ, ಸೋಮನಗೌಡ ಪಾಟೀಲ(ಸಾಸನೂರ), ಎ.ಎಸ್.ಪಾಟೀಲ, ಈಶ್ವರಸಿಂಗ್ ಠಾಕೂರ, ಡಾ.ಬಿ.ವೆಂಕಟಸಿಂಗ್, ಆರ್.ಬಾಲಾಜಿಸಿಂಗ್, ಸುಭಾಸಸಿಂಗ್ ಜಮಾದಾರ, ಸಂದ್ಯಾತಾಯಿ ರಜಪೂತ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಯುವಕರಲ್ಲಿ ದೇಶಪ್ರೇಮ, ಸಾಮಾಜಿಕ ಹೊಣೆ ಮೇಳೈಸಲಿ
ಹಿಂದೂ ಅಲ್ಪ ಸಂಖ್ಯಾತರಾದರೆ ಅಪಾಯ ಕಟ್ಟಿಟ್ಟ ಬುತ್ತಿ: ಕೃಷ್ಣಾನಂದ ಕಾಮತ್‌