ಕನ್ನಡಪ್ರಭ ವಾರ್ತೆ ಕೆಂಭಾವಿ
ವಲಯದ ಗೌಡಗೇರಾ ಗ್ರಾಮದ ಪಿ.ಎಂ.ಶ್ರೀ. ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಸಮೂಹ ಸಂಪನ್ಮೂಲ ಕೇಂದ್ರ ನಗನೂರ ವತಿಯಿಂದ ನಡೆದ ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಬೆಳೆಯುವ ಸಿರಿ ಮೊಳಕೆಯಲ್ಲಿ ಎಂಬ ಗಾದೆಯಂತೆ ಮಕ್ಕಳಿರುವಾಗಲೇ ಅವರ ಬಳಿ ಹಲವು ಕಲಾತ್ಮಕ ಚಟುವಟಿಕೆಗಳು ಅಡಗಿದ್ದು ಅವುಗಳನ್ನು ಗುರುತಿಸಿ ಸಮಾಜಕ್ಕೆ, ಜನತೆಗೆ ಪರಿಚಯಿಸುವುದು ಶಿಕ್ಷಕರ ಕರ್ತವ್ಯ. ಅಂತಹ ಪ್ರತಿಭೆಗಳನ್ನು ಹೊರಹಾಕಲು ಮತ್ತು ಮಕ್ಕಳಲ್ಲಿ ಇರುವ ಇನ್ನೂ ಅನೇಕ ಕಲಾತ್ಮಕ ಚಟುವಟಿಕೆಗಳನ್ನು ಪ್ರಸ್ತುತಪಡಿಸಲು ಸರ್ಕಾರ ಪ್ರತಿವರ್ಷ ಈ ಬೃಹತ್ ಕಾರ್ಯಕ್ರಮ ಆಯೋಜನೆ ಮಾಡುತ್ತಿದ್ದು, ಪಾಲಕರು ತಮ್ಮ ಮಕ್ಕಳಲ್ಲಿ ಇರುವ ಕಲೆಯನ್ನು ಇನ್ನಷ್ಟೂ ಎತ್ತರಕ್ಕೆ ಕೊಂಡೊಯ್ಯಲು ಶಾಲೆಗಳ ಜೊತೆ ಸಹಕಾರ ಮನೋಭಾವದಿಂದ ಸಹಕರಿಸಿ ಕಾರ್ಯಕ್ರಮ ಯಶಸ್ಸಿಗೆ ಸಹಕರಿಸುವಂತೆ ಮನವಿ ಮಾಡಿದರು.
ಶಿಕ್ಷಣ ಸಂಯೋಜಕ ಮಾಳಪ್ಪ ಮಾತನಾಡಿ, ಪ್ರತಿಭಾ ಕಾರಂಜಿಯಲ್ಲಿ ಶಲೆಯ ಪ್ರತಿಯೊಂದು ಮಕ್ಕಳು ಭಾಗವಹಿಸಬೇಕು. ಸರ್ಕಾರ ಮಕ್ಕಳ ಕಲೆಗಾಗಿಯೆ ಇಂಥಾ ಕಾರ್ಯಕ್ರಮ ಆಯೋಜನೆ ಮಾಡಿದ್ದು, ವಿದ್ಯಾರ್ಥಿಗಳು ತಮ್ಮಲ್ಲಿರುವ ವಿವಿಧ ರೀತಿಯ ಕಲೆಗಳನ್ನು ಈ ಕಾರ್ಯಕ್ರಮದಲ್ಲಿ ಯಾವುದೆ ಅಂಜಿಕೆ ಭಯ ಇಲ್ಲದೆ ಪ್ರಸ್ತುತಪಡಿಸಬೇಕು ಎಂದರು.ನಿಂಗಣ್ಣ ಬಿರಾದಾರ ಮಾತನಾಡಿದರು. ನಂತರ ಗೌಡಗೇರಾ ಹಾಗೂ ನಗನೂರ ಗ್ರಾಮದ ವಿವಿಧ ಶಾಲೆಗಳ ಮಕ್ಕಳಿಂದ ವಿವಿಧ ಕಲಾ ಪ್ರದರ್ಶನ ನಡೆಯಿತು. ಸಿ.ಆರ್.ಸಿ ಸಿದ್ರಾಮ, ಭೀಮನಗೌಡ, ಶಾಂತಗೌಡ ಪೊಲೀಸ್ ಪಾಟೀಲ, ಮಾನಯ್ಯ ಹಯ್ಯಾಳ, ರಮೇಶ, ಸುನಿಲ ಇದ್ದರು. ಶಿವಾನಂದ ನಿರೂಪಣೆ ಮಾಡಿದರು, ಹಳ್ಳೇರಾವ ಕುಲಕರ್ಣಿ ಸ್ವಾಗತಿಸಿದರು, ಹನಮಂತಿ ವಂದಿಸಿದರು.