ಜೂನ್‌ 14ರಂದು ಅಖಿಲ ಹವ್ಯಕ ಮಹಾಸಭಾದಿಂದ ಪ್ರತಿಬಿಂಬ ಆಯೋಜನೆ

KannadaprabhaNewsNetwork |  
Published : Jun 11, 2026, 12:45 AM IST
೧೦ಕೆಎಲ್‌ಆರ್-೧ಕೇಂದ್ರದಲ್ಲಿನ ನರೇಂದ್ರ ಮೋದಿ ಸರ್ಕಾರವು ನಿರಂತರವಾಗಿ ಅಡುಗೆ ಅನಿಲ, ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಮಾಡಿರುವುದನ್ನು ಖಂಡಿಸಿ ಎಂಎಲ್ಸಿ ಎಂ.ಎಲ್.ಅನಿಲ್ ಕುಮಾರ್ ನೇತೃತ್ವದಲ್ಲಿ ಜಿಲ್ಲಾ ಕಾಂಗ್ರೆಸ್ ಪಕ್ಷದಿಂದ ಕೋಲಾರದ ಮೆಕ್ಕೆ ವೃತ್ತದಲ್ಲಿ ಬೃಹತ್ ಪ್ರತಿಭಟನೆ ಮಾಡುತ್ತಿರುವುದು. | Kannada Prabha

ಸಾರಾಂಶ

ಹುಬ್ಬಳ್ಳಿಯ ಹವ್ಯಕ ಭವನದಲ್ಲಿ ಜೂ. 14ರಂದು ಬೆಳಗ್ಗೆ 7ರಿಂದ ರಾತ್ರಿ 8ರ ವರೆಗೆ ಹುಬ್ಬಳ್ಳಿ-ಧಾರವಾಡ ಪ್ರಾಂತ್ಯದಿಂದ ಪ್ರತಿಬಿಂಬ ಶೀರ್ಷಿಕೆಯಡಿ ಪ್ರಾಂತೀಯ ಮಟ್ಟದ ವಿವಿಧ ಸ್ಪರ್ಧಾ ಕಾರ್ಯಕ್ರಮ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಸ್ಪರ್ಧಾ ಸೌರಭ, ಸಾಧಕರಿಗೆ ಸನ್ಮಾನ, ಧಾರ್ಮಿಕ ಕಾರ್ಯಕ್ರಮ, ಸೌಂಸ್ಕೃತಿಕ ವೈಭವ ಮೇಳೈಸಲಿದೆ.

ಹುಬ್ಬಳ್ಳಿ:

ಬೆಂಗಳೂರಿನ ಶ್ರೀ ಅಖಿಲ ಹವ್ಯಕ ಮಹಾಸಭಾ, ಹವ್ಯಕ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಸಂಸ್ಧೆ ಹು-ಧಾ ಸಹಯೋಗದಲ್ಲಿ ನಗರದ ಹವ್ಯಕ ಭವನದಲ್ಲಿ ಜೂ. 14ರಂದು ಬೆಳಗ್ಗೆ 7ರಿಂದ ರಾತ್ರಿ 8ರ ವರೆಗೆ ಹುಬ್ಬಳ್ಳಿ-ಧಾರವಾಡ ಪ್ರಾಂತ್ಯದಿಂದ ಪ್ರತಿಬಿಂಬ ಶೀರ್ಷಿಕೆಯಡಿ ಪ್ರಾಂತೀಯ ಮಟ್ಟದ ವಿವಿಧ ಸ್ಪರ್ಧಾ ಕಾರ್ಯಕ್ರಮ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಸ್ಪರ್ಧಾ ಸೌರಭ, ಸಾಧಕರಿಗೆ ಸನ್ಮಾನ, ಧಾರ್ಮಿಕ ಕಾರ್ಯಕ್ರಮ, ಸೌಂಸ್ಕೃತಿಕ ವೈಭವ ಮೇಳೈಸಲಿದೆ.

ಈ ಕುರಿತು ಪ್ರಕಟಣೆ ನೀಡಿರುವ ಮಹಾಸಭಾ, ಬೆಳಗ್ಗೆ 7ಕ್ಕೆ ಗಣಪತಿ ಹವನ, ಶ್ರೀಸೂಕ್ತ ಮತ್ತು ಪುರುಷಸೂಕ್ತ ಹವನ, ಬೆಳಗ್ಗೆ 9ಕ್ಕೆ ಕಾರ್ಯಕ್ರಮದ ಉದ್ಘಾಟನೆ ನಡೆಯಲಿದ್ದು ಅಖಿಲ ಹವ್ಯಕ ಮಹಾಸಭಾದ ಉಪಾಧ್ಯಕ್ಷ ಶ್ರೀಧರ ಜೆ. ಭಟ್ಟ ಕೆಕ್ಕಾರು ಅಧ್ಯಕ್ಷತೆ ವಹಿಸುವರು. ಹು-ಧಾ ಹವ್ಯಕ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಸಂಸ್ಥೆ ಅಧ್ಯಕ್ಷ ವಿ.ಎಂ. ಭಟ್ಟ ಉದ್ಘಾಟಿಸುವರು. ಉದ್ದಮೆದಾರ ಶಿವರಾಮ ಹೆಗಡೆ ಹಿತ್ಲಳ್ಳಿ ಅಭ್ಯಾಗತರಾಗಿ ಪಾಲ್ಗೊಳ್ಳುವರು. ವಸಂತ ಭಟ್ಟ ಧಾರವಾಡ, ವೀಣಾ ಶ್ರೀನಿವಾಸ ಹೆಗಡೆ ಉಪಸ್ಥಿತರಿರುವರು.

ಮಧ್ಯಾಹ್ನ 3.30ಕ್ಕೆ ಸಮಾರೋಪ, ಸಾಧಕರಿಗೆ ಸನ್ಮಾನ ನೆರವೇರಲಿದ್ದು, ಸಮಾಜ ಸೇವಕ ಪ್ರಮೋದ ಹೆಗಡೆ ಸಂಕಲ್ಪ ಅಭ್ಯಾಗತರಾಗಿ ಪಾಲ್ಗೊಳ್ಳುವರು. ಅಖಿಲ ಹವ್ಯಕ ಮಹಾಸಭಾ ಅಧ್ಯಕ್ಷ ಡಾ. ಗಿರಿಧರ ಕಜೆ ಅಧ್ಯಕ್ಷತೆ ವಹಿಸುವರು. ಶ್ರೀಕಾಂತ ಹೆಗಡೆ ಹುಬ್ಬಳ್ಳಿ, ಸುದರ್ಶನ ಹೇಮಾದ್ರಿ, ಅನಿತಾ ವಸಂತ ಭಟ್ಟ ಉಪಸ್ಥಿತರಿರುವರು. ಬಳಿಕ 6 ವರ್ಷದೊಳಗಿನ ಮಕ್ಕಳಿಗೆ ಶ್ಲೋಕ ಪಠಣ, ಛದ್ಮವೇಷ, ಬಣ್ಣ ತುಂಬುವುದು, 7ರಿಂದ 12 ವರ್ಷದ ಮಕ್ಕಳಿಗಾಗಿ ಭಗವದ್ಗೀತಾ ಕಂಠಪಾಠ (2ನೇ ಅಧ್ಯಾಯ), ಚಿತ್ರಕಲೆ (ವಿಷಯ: ಹವ್ಯಕರ ಗ್ರಾಮೀಣ ಬದುಕು), ಏಕಪಾತ್ರಾಭಿನಯ, 13ರಿಂದ 18 ವರ್ಷ ವಯೋಮಿತಿಯವರಿಗಾಗಿ ಆಶುಭಾಷಣ, ದೇಶಭಕ್ತಿ ಗೀತೆ, 18 ವರ್ಷ ಮೇಲ್ಪಟ್ಟವರಿಗೆ ಹವ್ಯಕ ಸಂಪ್ರದಾಯ ಗೀತೆ, ರಂಗೋಲಿ, ಜಾನಪದ ಗೀತೆ, ಹವಿಗನ್ನಡ ಆಶುಭಾಷಣ, ಹವಿರುಚಿ, ಕರಕುಶಲ ವಸ್ತು ಪ್ರದರ್ಶನ ಆಯೋಜಿಸಲಾಗಿದೆ. ಇದರೊಂದಿಗೆ ಯಕ್ಷ ನೃತ್ಯ, ಭರತನಾಟ್ಯ, ಸಂಗೀತ ವಾದ್ಯ ನುಡಿಸುವಿಕೆ, ವಿಶಿಷ್ಟ ಚಿತ್ರ ರಚನೆ, ಮಿಮಿಕ್ರಿ, ಜಾದೂ ಇತ್ಯಾದಿ ಪ್ರತಿಭೆ ಪ್ರದರ್ಶನಗೊಳ್ಳಲಿವೆ. ಸ್ಪರ್ಧೆಯಲ್ಲಿ ಪಾಲ್ಗೊಳ್ಳುವವರು ಮೂರ್ತಿ ಹೆಗಡೆ (9448560654), ಅಶೋಕ ಹೆಗಡೆ (9845651589), ವೀಣಾ ಹೆಗಡೆ (9986399594) ಅವರಲ್ಲಿ ಹೆಸರು ನೋಂದಾಯಿಸಬೇಕು.

ಸಾಧಕರಿಗೆ ಸನ್ಮಾನ:

ಕಾರ್ಯಕ್ರಮದಲ್ಲಿ ಅರುಣಕುಮಾರ ಹಬ್ಬು (ಸಾಹಿತ್ಯ), ಮೋಹನ ಹೆಗಡೆ (ಪತ್ರಿಕೋದ್ಯಮ), ದತ್ತಾತ್ರೇಯ ಭಟ್ಟ (ಗೋಸೇವೆ), ಆರ್‌.ಕೆ. ಹೆಗಡೆ (ಸಾಮಾಜಿಕ), ಆರ್‌.ಜಿ, ಭಟ್ಟ ವರ್ಗಾಸರ (ಕಲಾಸೇವೆ), ಮಂಗಳಾ ಭಟ್ಟ (ಶಿಕ್ಷಣ) ಅವರನ್ನು ಸನ್ಮಾನಿಸಲಾಗುತ್ತಿದೆ. ಸಂಜೆ 5.30ಕ್ಕೆ ಸರಿಗಮಪ ಖ್ಯಾತಿಯ ದಿಯಾ ಹೆಗಡೆ ಬಂದಗದ್ದೆ ಅವರಿಂದ ಸಂಗೀತ ಸೌರಭ ಕಾರ್ಯಕ್ರಮ ನೆರವೇರಲಿದೆ.

ಸಂಜೆ 6ಕ್ಕೆ ಸುಪ್ರಸಿದ್ಧ ಕಲಾವಿದರಿಂದ ಯಕ್ಷಗಾನ-ಸುಧನ್ವಾರ್ಜುನ ಹಮ್ಮಿಕೊಳ್ಳಲಾಗಿದ್ದು, ಹಿಮ್ಮೇಳದಲ್ಲಿ ಸರ್ವೇಶ್ವರ ಹೆಗಡೆ ಮೂರೂರು (ಭಾಗವತ), ಪರಮೇಶ್ವರ ಭಂಡಾರಿ (ಮೃದಂಗ), ಗಣೇಶ ಗಾಂವ್ಕರ ಹಳವಳ್ಳಿ (ಚಂಡೆ), ಮುಮ್ಮೇಳದಲ್ಲಿ ಕೊಂಡದಕುಳಿ ರಾಮಚಂದ್ರ ಹೆಗಡೆ (ಅರ್ಜುನ), ತೊಟಿಮನೆ ಗಣಪತಿ ಹೆಗಡೆ (ಸುಧನ್ವ), ಅಶ್ವಿನಿ ಕೊಂಡದಕುಳಿ (ಪ್ರಭಾವತಿ), ಮಂಜುನಾಥ ಹೆಗಡೆ ಹಿಲ್ಲೂರು (ಕೃಷ್ಣ), ವಿನಾಯಕ ಮಧ್ಯಸ್ಥ ಗೋಳಿಕುಂಬ್ರಿ (ವೃಷಕೇತು) ಪಾಲ್ಗೊಳ್ಳುವರು ಎಂದು ತಿಳಿಸಲಾಗಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಶ್ರವಣಬೆಳಗೊಳದಲ್ಲಿ ಕನ್ನಡದ ಮತ್ತೊಂದು ಶಾಸನ ಪತ್ತೆ
ವೈದ್ಯ ಜ್ಞಾನದ ಶಕ್ತಿ ಕೇಂದ್ರ ‘ಮಿಮ್ಸ್ ಕೇಂದ್ರ ಗ್ರಂಥಾಲಯ’..!