ಬಿ.ವಿ.ಹಳ್ಳಿ ಡೈರಿ ಅಧ್ಯಕ್ಷ ಪ್ರವೀಣ್‌ಕುಮಾರ್‌, ಉಪಾಧ್ಯಕ್ಷರಾಗಿ ಬೀರಯ್ಯ ಅವಿರೋಧ ಆಯ್ಕೆ

KannadaprabhaNewsNetwork |  
Published : Oct 15, 2026, 02:00 AM IST
ಪೊಟೋ೧೩ಸಿಪಿಟಿ೧:  ಚನ್ನಪಟ್ಟಣ ತಾಲೂಕಿನ ಬಿ.ವಿ. ಹಳ್ಳಿ ಎಂಪಿಸಿಎಸ್ ಆಡಳಿತ ಮಂಡಳಿಯ ಅಧ್ಯಕ್ಷ ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದ ಬಿ.ಎನ್. ಪ್ರವೀಣ್ ಕುಮಾರ್, ಬೀರಯ್ಯ, ನೂತನ ನಿರ್ದೇಶಕರನ್ನು ಅಭಿನಂದಿಸಲಾಯಿತು. | Kannada Prabha

ಸಾರಾಂಶ

ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಗಳಿಗೆ ಸಂಘದ ಕಚೇರಿಯಲ್ಲಿ ನಿಗದಿಯಾಗಿದ್ದ ಚುನಾವಣೆಯಲ್ಲಿ ಎರಡೂ ಸ್ಥಾನಕ್ಕೆ ಒಂದೊಂದು ನಾಮಪತ್ರ ಮಾತ್ರ ಸಲ್ಲಿಕೆಯಾದ ಕಾರಣ ಅವಿರೋಧ ಆಯ್ಕೆ ನಡೆಯಿತು. ಚುನಾವಣಾಧಿಕಾರಿಯಾಗಿ ಸಂಘದ ಸಿಇಒ ಬಿ.ಎಸ್. ಸುಧಾಕರ್ ಕಾರ್ಯನಿರ್ವಹಿಸಿದರು.

ಚನ್ನಪಟ್ಟಣ: ತಾಲೂಕಿನ ಬಿ.ವಿ. ಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ಆಡಳಿತ ಮಂಡಳಿ ಅಧ್ಯಕ್ಷರಾಗಿ ಬಿ.ಎನ್. ಪ್ರವೀಣ್ ಕುಮಾರ್, ಉಪಾಧ್ಯಕ್ಷರಾಗಿ ಬೀರಯ್ಯ ಅವಿರೋಧವಾಗಿ ಆಯ್ಕೆಯಾದರು.

ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಗಳಿಗೆ ಸಂಘದ ಕಚೇರಿಯಲ್ಲಿ ನಿಗದಿಯಾಗಿದ್ದ ಚುನಾವಣೆಯಲ್ಲಿ ಎರಡೂ ಸ್ಥಾನಕ್ಕೆ ಒಂದೊಂದು ನಾಮಪತ್ರ ಮಾತ್ರ ಸಲ್ಲಿಕೆಯಾದ ಕಾರಣ ಅವಿರೋಧ ಆಯ್ಕೆ ನಡೆಯಿತು. ಚುನಾವಣಾಧಿಕಾರಿಯಾಗಿ ಸಂಘದ ಸಿಇಒ ಬಿ.ಎಸ್. ಸುಧಾಕರ್ ಕಾರ್ಯನಿರ್ವಹಿಸಿದರು.

ಈಚೆಗೆ ಸಂಘದ ಆಡಳಿತ ಮಂಡಳಿಯ ೧೧ ನಿರ್ದೇಶಕ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಬಿ.ಎನ್. ಪ್ರವೀಣ್ ಕುಮಾರ್, ಬೀರಯ್ಯ, ಬಿ.ಸಿ. ಪ್ರಕಾಶ್, ಬಿ.ಜೆ.ಲೋಕೇಶ್, ಬಿ.ಪಿ.ಶ್ರೀನಿವಾಸ, ಕೆಂಚೇಗೌಡ, ಎಂ.ದೇವರಾಜು, ಕೃಷ್ಣೇಗೌಡ, ಸುಶೀಲಮ್ಮ, ರತ್ನಮ್ಮ, ಕುಮಾರ ನಿರ್ದೇಶಕರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದರು. ನೂತನ ಅಧ್ಯಕ್ಷ, ಉಪಾಧ್ಯಕ್ಷರು, ನಿರ್ದೇಶಕರನ್ನು ಗ್ರಾಮ ಮುಖಂಡರಾದ ಬಿ.ಇ.ದೊಡ್ಡೇಗೌಡ, ಬಿ.ಜೆ.ಯಧುನಂದನ್, ಜಿ.ರಾಘವೇಂದ್ರ, ಬಿ.ಎಂ.ರಾಜು, ಬಿ.ಕೆ.ಲೋಕೇಶ್, ಬಿ.ವಿ. ರಾಜಣ್ಣ ಇತರರು ಅಭಿನಂದಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕಬ್ಬು ಬೆಳೆಗಾರರ ಬೇಡಿಕೆಗೆ ರಾಜ್ಯ ಸರ್ಕಾರ ಸ್ಪಂದಿಸಲಿ: ಬೊಮ್ಮಾಯಿ
2ನೇ ದಿನವೂ ಕಬ್ಬು ಬೆಳೆಗಾರರ ಪ್ರತಿಭಟನೆ