ಉಗ್ರರ ದಮನಕ್ಕೆ ಪ್ರಾರ್ಥಿಸಿ ವಿಘ್ನೇಶ್ವರಗೆ ಪೂಜೆ

KannadaprabhaNewsNetwork | Published : May 8, 2025 12:32 AM

ಸಾರಾಂಶ

ಆಪರೇಷನ್ ಸಿಂದೂರ್‌ನಲ್ಲಿ ಪಾಕಿಸ್ತಾನದಲ್ಲಿ 9 ಉಗ್ರರ ತಾಣಗಳನ್ನು ಧ್ವಂಸಗೊಳಿಸಿದ ಭಾರತ ಸೇನೆಯು ಉಗ್ರರ ವಿರುದ್ಧ ಹೋರಾಟದಲ್ಲಿ ಸಂಪೂರ್ಣ ವಿಜಯ ಸಾಧಿಸಲೆಂದು ಪ್ರಾರ್ಥಿಸಿ ಬಿಜೆಪಿ ಜಿಲ್ಲಾ ಘಟಕದಿಂದ ನಗರದ ಹರಳೆಣ್ಣೆ ಕೊಟ್ರಬಸಪ್ಪ ವೃತ್ತದ ಶ್ರೀ ಗಣೇಶ ದೇವಸ್ಥಾನದಲ್ಲಿ ಬುಧವಾರ ವಿಶೇಷ ಪೂಜೆ, ಪ್ರಾರ್ಥನೆ ಸಲ್ಲಿಸಿತು. ಜೊತೆಗೆ ಆಪರೇಷನ್ ಸಿಂದೂರ್ ಯಶಸ್ಸಿಗೆ ಸಂಭ್ರಮ ಆಚರಿಸಿತು.

- ಪಾಕ್‌ ಉಗ್ರರ 9 ಅಡಗುದಾಣ ಧ್ವಂಸ । ಜಿಲ್ಲಾ ಬಿಜೆಪಿಯಿಂದ ಸಂಭ್ರಮಾಚರಣೆ - - -

ಕನ್ನಡಪ್ರಭ ವಾರ್ತೆ ದಾವಣಗೆರೆ

ಆಪರೇಷನ್ ಸಿಂದೂರ್‌ನಲ್ಲಿ ಪಾಕಿಸ್ತಾನದಲ್ಲಿ 9 ಉಗ್ರರ ತಾಣಗಳನ್ನು ಧ್ವಂಸಗೊಳಿಸಿದ ಭಾರತ ಸೇನೆಯು ಉಗ್ರರ ವಿರುದ್ಧ ಹೋರಾಟದಲ್ಲಿ ಸಂಪೂರ್ಣ ವಿಜಯ ಸಾಧಿಸಲೆಂದು ಪ್ರಾರ್ಥಿಸಿ ಬಿಜೆಪಿ ಜಿಲ್ಲಾ ಘಟಕದಿಂದ ನಗರದ ಹರಳೆಣ್ಣೆ ಕೊಟ್ರಬಸಪ್ಪ ವೃತ್ತದ ಶ್ರೀ ಗಣೇಶ ದೇವಸ್ಥಾನದಲ್ಲಿ ಬುಧವಾರ ವಿಶೇಷ ಪೂಜೆ, ಪ್ರಾರ್ಥನೆ ಸಲ್ಲಿಸಿತು. ಜೊತೆಗೆ ಆಪರೇಷನ್ ಸಿಂದೂರ್ ಯಶಸ್ಸಿಗೆ ಸಂಭ್ರಮ ಆಚರಿಸಿತು.

ಪಕ್ಷದ ಪದಾಧಿಕಾರಿಗಳು, ಮುಖಂಡರು, ಕಾರ್ಯಕರ್ತರು ಪೂಜೆ, ಪ್ರಾರ್ಥನೆ ನಂತರ ಪಟಾಕಿ ಸಿಡಿಸಿದರು. ಭಾರತ ಸೇನೆ, ಭಾರತ ಮಾತೆ, ಕೇಂದ್ರ ಸರ್ಕಾರಕ್ಕೆ, ಭಾರತೀಯ ಯೋಧರಿಗೆ, ಪ್ರಧಾನಿ ಮೋದಿ, ಕೇಂದ್ರ ಸಚಿವರಾದ ಅಮಿತ್ ಶಾ ಪರ ಘೋಷಣೆ ಕೂಗಲಾಯಿತು.

ಪಕ್ಷದ ಜಿಲ್ಲಾಧ್ಯಕ್ಷ ಎನ್.ರಾಜಶೇಖರ ನಾಗಪ್ಪ ಮಾತನಾಡಿ, ಇಡೀ ಮನುಕುಲಕ್ಕೆ ಮಾರಕವಾಗಿರುವ ಉಗ್ರರದ ವಿರುದ್ಧದ ಭಾರತೀಯ ಸೇನೆ, ಯೋಧರ ಹೋರಾಟದಲ್ಲಿ ಎಲ್ಲ ವಿಘ್ನಗಳನ್ನು ನಿವಾರಿಸುವ ಮೂಲಕ ಭಾರತೀಯ ಸೇನೆಗೆ ವಿಜಯ ಸಿಗಲೆಂದು ಪ್ರಾರ್ಥಿಸಿ, ಶ್ರೀ ಗಣೇಶನಿಗೆ ಪೂಜೆ ಸಲ್ಲಿಸಿವೆ ಎಂದರು.

ರೈತ ಮೋರ್ಚಾ ರಾಜ್ಯ ಉಪಾಧ್ಯಕ್ಷ ಲೋಕಿಕೆರೆ ನಾಗರಾಜ ಮಾತನಾಡಿ, ಪಾಕ್‌ನಲ್ಲಿದ್ದ ಉಗ್ರರ 9 ತಾಣಗಳನ್ನು ಭಾರತ ಸೇನೆ ಮಧ್ಯರಾತ್ರಿ ದಾಳಿ ನಡೆಸಿ, ನೂರಾರು ಉಗ್ರರ ಸಂಹಾರ ಮಾಡಿದೆ. ಇದನ್ನು ಒಪ್ಪಿಕೊಳ್ಳಲೂ ಆಗದ, ಬಾಯಿಬಿಟ್ಟು ಹೇಳಿಕೊಳ್ಳಲೂ ಆಗದ, ಅರಗಿಸಿಕೊಳ್ಳಲೂ ಆಗದ ಸ್ಥಿತಿಯಲ್ಲಿ ಶತೃರಾಷ್ಟ್ರ ಪಾಕಿಸ್ತಾನ ಇದೆ ಎಂದರು.

ಮಾಜಿ ಮೇಯರ್ ಎಸ್.ಟಿ. ವೀರೇಶ ಮಾತನಾಡಿ, ಕೇಂದ್ರ ಸರ್ಕಾರವು ಪಾಕಿಸ್ಥಾನಕ್ಕೆ ತಕ್ಕ ಪಾಠವನ್ನೇ ಕಲಿಸುತ್ತಿದೆ. ಇದುವರೆಗೆ ಉಗ್ರರು ದೇಶದೊಳಗೆ ನುಗ್ಗಿ ಅಮಾಯಕರ ಬಲಿ ಪಡೆಯುತ್ತಿದ್ದರು. ಈಗ ಉಗ್ರರ ಮನೆಗೆ ನುಗ್ಗಿ, ಸಂಹಾರ ಮಾಡುವ ಲೋಕಕಲ್ಯಾಣದ ಕಾರ್ಯ ಭಾರತೀಯ ಯೋಧರು ಮಾಡುತ್ತಿದ್ದಾರೆ ಎಂದರು.

ಪಕ್ಷದ ಹಿರಿಯ ಮುಖಂಡರಾದ ಪಾಲಿಕೆ ಮಾಜಿ ಸದಸ್ಯ ಶಿವನಹಳ್ಳಿ ರಮೇಶ, ವಕ್ತಾರ ಬಿ.ಎಂ.ಸತೀಶ ಕೊಳೇನಹಳ್ಳಿ, ಪಿ.ಸಿ.ಶ್ರೀನಿವಾಸ ಭಟ್, ರಮೇಶ ನಾಯ್ಕ, ಅಕ್ಕಿ ಪ್ರಭು ಕಲ್ಬುರ್ಗಿ ನವೀನ, ಗೌತಮ್ ಜೈನ್‌, ಎಚ್.ಸಿ.ಜಯಮ್ಮ, ಭಾಗ್ಯ ಪಿಸಾಳೆ, ಪುಷ್ಪಾ ವಾಲಿ, ಸವಿತಾ ರವಿಕುಮಾರ, ಪೋತುಲ ಶ್ರೀನಿವಾಸ, ಕಾಂತರಾಜ, ರಾಜು ನೀಲಗುಂದ, ನಸೀರ್ ಅಹಮ್ಮದ್‌, ಟಿಪ್ಪು ಸುಲ್ತಾನ್, ಕಿಶೋರಕುಮಾರ, ಎನ್.ಎಚ್.ಹಾಲೇಶ, ಜಿಲ್ಲಾ ಮಾಜಿ ಸೈನಿಕರ ವಿವಿಧೋದ್ದೇಶ ಸಂಘದ ಅಧ್ಯಕ್ಷ ಮನೋಹರ ಮಹೇಂದ್ರಕರ್, ಉಪಾಧ್ಯಕ್ಷ ಎಂ.ವಾಸಪ್ಪ , ಕಾರ್ಯದರ್ಶಿ ಬಿ.ವಿ.ಚಂದ್ರಪ್ಪ, ಖಜಾಂಚಿ ಪ್ರಕಾಶಕುಮಾರ, ನಿರ್ದೇಶಕ ಕೆ.ಬಿ.ಚಂದ್ರಪ್ಪ, ಅಂದಪ್ಪ, ಅರೆ ಮಾಜಿ ಸೈನಿಕರಾದ ಕವಾಡಿ ಚಂದ್ರಪ್ಪ, ಮಂಜುನಾಯ್ಕ, ಸುರೇಶ, ಗಂಗಾಧರ, ಪ್ರವೀಣ ಜಾಧವ್, ಗುರು ಸೋಗಿ, ರಾಜು ವೀರಣ್ಣ, ನಾಗೇಶ, ಸತ್ಯಪ್ರಕಾಶ, ಮಹೇಂದ್ರಕರ್, ಆನಂದಪ್ಪ, ಷಣ್ಮುಖ, ಕೆಟಿಜೆ ನಗರ ಬಿ.ಆನಂದ, ಲೋಕೇಶ, ಶಾಮನೂರು ಹರೀಶ, ಇತರರು ಇದ್ದರು.

- - -

-7ಕೆಡಿವಿಜಿ3:

ದಾವಣಗೆರೆ ಹರಳೆಣ್ಣೆ ಕೊಟ್ರಬಸಪ್ಪ ವೃತ್ತದಲ್ಲಿ ಬಿಜೆಪಿ ಜಿಲ್ಲಾ ಘಟಕದಿಂದ ಉಗ್ರರ ದಮನಕ್ಕೆ ಪ್ರಾರ್ಥಿಸಿ, ಗಣೇಶ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ, ಆಪರೇಷನ್ ಸಿಂದೂರ ಮೊದಲ ಯಶಸ್ಸಿಗೆ ಸಂಭ್ರಮಿಸಲಾಯಿತು.

Share this article