ಚಳ್ಳಕೆರೆ ಕೊರೋನಾ ಮುಕ್ತವಾಗಿಸಲು ಪ್ರಾರ್ಥನೆ

KannadaprabhaNewsNetwork |  
Published : Dec 25, 2023, 01:31 AM IST
ಪೋಟೋ೨೪ಸಿಎಲ್‌ಕೆ೩ ಚಳ್ಳಕೆರೆ ನಗರದ ನಾಯಕನಹಟ್ಟಿ ರಸ್ತೆಯ ಶ್ರೀಕರೇಕಲ್ ಆಂಜನೇಯಸ್ವಾಮಿ ದೇವಸ್ಥಾನಕ್ಕೆ ಶಾಸಕ ಟಿ.ರಘುಮೂರ್ತಿ ಭೇಟಿ ನೀಡಿ ದೇವರ ದರ್ಶನ ಪಡೆದರು. | Kannada Prabha

ಸಾರಾಂಶ

ಇತ್ತಿಚೆಗೆ ಮತ್ತೆ ಕೊರೋನಾ ತಾಂಡವವಾಡುತ್ತಿದ್ದು, ಚಳ್ಳಕೆರೆಯನ್ನು ಕೊರೊನಾ ಮುಕ್ತವಾಗಿಸಲು ಪ್ರಾರ್ಥನೆ

ಚಳ್ಳಕೆರೆ: ಕಳೆದ ಸುಮಾರು 15 ವರ್ಷಗಳಿಂದ ಕರೇಕಲ್ ಆಂಜನೇಯಸ್ವಾಮಿ ದೇವಸ್ಥಾನಕ್ಕೆ ಹಲವಾರು ಬಾರಿ ಭೇಟಿ ನೀಡಿದ್ದೇನೆ. ವಿಶೇಷವಾಗಿ ಪ್ರತಿವರ್ಷ ನಡೆಯುವ ಹನುಮ ಜಯಂತಿಯೂ ಸೇರಿದಂತೆ ಹಲವಾರು ಧಾರ್ಮಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದೇನೆ. ದೇವಸ್ಥಾನದ ಆರ್ಚಕರಾದ ನಾಗಶಯನ ಗೌತಮ್ ಮತ್ತು ತಂಡ ಭಕ್ತಿ-ಶ್ರದ್ಧೆಯಿಂದ ಪೂಜೆ ನಡೆಸಿ ಭಕ್ತಾಧಿಗಳ ಕೋರಿಕೆಗಳನ್ನು ಈಡೇರಿಸುವಂತೆ ದೇವರಲ್ಲಿ ಮೊರೆ ಇಡುತ್ತಾರೆ. ಈ ಬಾರಿಯೂ ನಾನು ಚಳ್ಳಕೆರೆ ಕ್ಷೇತ್ರವನ್ನು ಕೊರೋನಾ ಕಂಟಕದಿಂದ ಪಾರು ಮಾಡುವಂತೆ ಆಂಜನೇಯ ಸ್ವಾಮಿಯನ್ನು ಪ್ರಾರ್ಥಿಸಿರುವುದಾಗಿ ಶಾಸಕ ಟಿ.ರಘುಮೂರ್ತಿ ತಿಳಿಸಿದರು.

ಭಾನುವಾರ ಸಂಜೆ ನಾಯಕನಹಟ್ಟಿ ರಸ್ತೆಯ ಕರೇಕಲ್ ಆಂಜನೇಯಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿ, ಭಕ್ತರನ್ನು ಉದ್ದೇಶಿಸಿ ಮಾತನಾಡಿದರು. ಚಳ್ಳಕೆರೆ ಕ್ಷೇತ್ರದ ಜನರ ವಿಶ್ವಾಸ ನನಗೆ ಅತಿದೊಡ್ಡದು. ನಾನು ಮತ್ತೆ ಮೂರನೇ ಬಾರಿಗೆ ಶಾಸಕನಾಗಿ ಕಾರಣನಾಗಲು ಕರೇಕಲ್ ಆಂಜನೇಯ ಸ್ವಾಮಿಯ ಕೃಪೆ ಕಾರಣವೆಂದರು.

ಆರ್ಚಕ ಸಿ.ಎನ್.ನಾಗಶಯನ ಗೌತಮ್ ಮಾತನಾಡಿ, ಅಭಿನಂದಿಸಿ ಪ್ರತಿ ವರ್ಷವೂ ಶಾಸಕರು ದೇವಸ್ಥಾನಕ್ಕೆ ಭೇಟಿ ನೀಡಿ ಸ್ವಾಮಿಯ ದರ್ಶನ ಹಾಗೂ ಆಶೀರ್ವಾದ ಪಡೆಯುತ್ತಾ ಬಂದಿದ್ದಾರೆ. ಶಾಸಕರು ಮಹಾ ದೈವಭಕ್ತರಾಗಿದ್ದು, ಕ್ಷೇತ್ರದ ಅಭಿವೃದ್ಧಿಗೆ ಸ್ವಯಂ ಪ್ರೇರಣೆಯಿಂದ ತೊಡಗುವುದಲ್ಲದೆ, ಎಲ್ಲಾ ವರ್ಗದ ಜನರಿಗೆ ನೆರವು ನೀಡುವಲ್ಲಿ ಮುಂದಾಗಿದ್ದಾರೆ. ಚಳ್ಳಕೆರೆ ವಿಧಾನಸಭಾ ಕ್ಷೇತ್ರ ಶಾಸಕರ ಮುಂದಾಲೋಚನೆಯಿಂದ ಬೃಹತ್ ಅಭಿವೃದ್ಧಿ ಕ್ಷೇತ್ರವಾಗಿ ವಿಸ್ತಾರವಾಗಿದೆ ಎಂದರು.

ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಬಾಬುರೆಡ್ಡಿ, ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಲಿಂಗಾರಾಜು, ನಗರಸಭಾ ಸದಸ್ಯ ಟಿ.ಮಲ್ಲಿಕಾರ್ಜುನ್, ಎಲ್‌ಐಸಿ ದುಗ್ಗಾವರ ರಂಗಸ್ವಾಮಿ ಮುಂತಾದವರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗ್ಯಾರಂಟಿಗಳ ಜತೆಗೆ ಹಲವು ಹೊಸ ಯೋಜನೆಗಳೂ ಉಂಟು
ಕೇರಳ ರೀತಿ ಮನೆಯಲ್ಲೇ ರೋಗಿಗಳಿಗೆ ಆರೈಕೆ