ಫೆ.10ರಂದು ಕೊಲ್ಲಮೊಗ್ರದಲ್ಲಿ ಪತ್ರಕರ್ತರ ಗ್ರಾಮ ವಾಸ್ತವ್ಯ: ಪೂರ್ವಭಾವಿ ಸಭೆ

KannadaprabhaNewsNetwork | Published : Jan 31, 2024 2:16 AM

ಸಾರಾಂಶ

ಕೊಲ್ಲಮೊಗ್ರ ಬಂಗ್ಲೆಗುಡ್ಡೆ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ಫೆ.೧೦ರಂದು ಗ್ರಾಮ ವಾಸ್ತವ್ಯ ನಡೆಯಲಿದೆ. ಗ್ರಾಮ ವಾಸ್ತವ್ಯದ ಯಶಸ್ವಿಗೆ ವಿವಿಧ ಸಮಿತಿಗಳನ್ನು ರಚಿಸಲಾಯಿತು.

ಕನ್ನಡಪ್ರಭ ವಾರ್ತೆ ಸುಬ್ರಹ್ಮಣ್ಯ

ಗ್ರಾಮಸ್ಥರ ಸಹಕಾರ ಇದ್ದಲ್ಲಿ ಗ್ರಾಮದ ಅಭಿವೃದ್ಧಿ ಸಾಧ್ಯ. ಹರಿಹರ ಕೊಲ್ಲಮೊಗ್ರ ಭಾಗದಲ್ಲಿ ನೆರೆಯಿಂದ ಹಾನಿ, ಕೃಷಿಗೆ ರೋಗದಿಂದ ಹಾನಿ ಸಂಭವಿಸಿದೆ. ಗ್ರಾಮ ವಾಸ್ತವ್ಯದಲ್ಲಿ ಇವೆಲ್ಲದ್ದಕ್ಕೂ ಪರಿಹಾರ ಕಂಡು ಗ್ರಾಮ ಅಭಿವೃದ್ಧಿ ಕಾಣಲಿ. ಗ್ರಾಮದ ಅಭಿವೃದ್ಧಿ ದೃಷ್ಟಿಯಿಂದ ಕೈಜೋಡಿಸಿ, ಅಭಿವೃದ್ಧಿಗೆ ಸಂಬಂಧಿಸಿದಂತೆ ಆರೋಗ್ಯಕರ ಚರ್ಚೆಗಳು ನಡೆಯಲಿ ಎಂದು ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಹೇಳಿದರು.

ಕೊಲ್ಲಮೊಗ್ರದ ಮಯೂರ ಸಭಾಂಗಣದಲ್ಲಿ ಸೋಮವಾರ ನಡೆದ ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ, ಸುಳ್ಯ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ, ಸುಬ್ರಹ್ಮಣ್ಯ ಪ್ರೆಸ್ ಕ್ಲಬ್, ಜಿಲ್ಲಾಡಳಿತ, ತಾಲೂಕು ಆಡಳಿತ, ಹರಿಹರ, ಕೊಲ್ಲಮೊಗ್ರ ಗ್ರಾಮ ಪಂಚಾಯಿತಿಯ ಸಹಯೋಗದೊಂದಿಗೆ ಫೆ.೧೦ರಂದು ಕೊಲ್ಲಮೊಗ್ರದಲ್ಲಿ ನಡೆಯುವ ಪತ್ರಕರ್ತರ ಗ್ರಾಮ ವಾಸ್ತವ್ಯ ಕಾರ್ಯಕ್ರಮದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು. ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ ಅಧ್ಯಕ್ಷತೆ ವಹಿಸಿ ಗ್ರಾಮ ವಾಸ್ತವ್ಯ ಕಾರ್ಯಕ್ರಮದ ರೂಪುರೇಷೆಗಳ ಬಗ್ಗೆ ವಿವರಿಸಿದರು. ಕೊಲ್ಲಮೊಗ್ರು ಗ್ರಾ.ಪಂ. ಅಧ್ಯಕ್ಷೆ ಜಯಶ್ರೀ ಚಾಂತಾಳ, ಹರಿಹರ ಪಲ್ಲತ್ತಡ್ಕ ಗ್ರಾ.ಪಂ. ಉಪಾಧ್ಯಕ್ಷ ಜಯಂತ ಬಾಳುಗೋಡು, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಉಪಾಧ್ಯಕ್ಷ ಭಾಸ್ಕರ ರೈ ಕಟ್ಟ, ಕಾರ್ಯದರ್ಶಿ ಗಂಗಾಧರ ಕಲ್ಲಪಳ್ಳಿ, ಸುಳ್ಯ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ದಯಾನಂದ ಕಲ್ನಾರ್, ಮಾಜಿ ಅಧ್ಯಕ್ಷ ಗಿರೀಶ್ ಅಡ್ಪಂಗಾಯ, ಪತ್ರಕರ್ತರಾದ ಬಾಲಕೃಷ್ಣ ಭೀಮಗುಳಿ, ಬಿ.ಎನ್. ಲೋಕೇಶ್ ಸುಬ್ರಹ್ಮಣ್ಯ,ಪ್ರ ಮುಖರಾದ ಡಾ. ಸೋಮಶೇಖರ ಕಟ್ಟೆಮನೆ ಬಾಳುಗೋಡು, ವಿನೂಪ್ ಮಲ್ಲಾರ, ಮಾಧವ ಚಾಂತಾಳ, ಶೇಖರ ಅಂಬೆಕಲ್ಲು, ಉದಯ ಶಿವಾಲ, ಅಶ್ವತ್ ಎಲದಾಳ, ಪುಷ್ಪರಾಜ್ ಪಡ್ಪು, ಸತೀಶ್ ಟಿ.ಎನ್, ಡ್ಯಾನಿ ಎಲದಾಳು, ಚಂದ್ರಶೇಖರ ಕೊಂದಾಳ, ರಾದಾಕೃಷ್ಣ ಕಟ್ಟೆಮನೆ, ಬಿಂದು, ಶಿಲ್ಪಾ ಕೊತ್ನಡ್ಕ, ಚಂದ್ರಶೇಖರ ಕೋನಡ್ಕ, ಮಹಾಲಿಂಗೇಶ್ವರ ಶರ್ಮ, ಚೆನ್ನಕೇಶವ ಕೋನಡ್ಕ, ಯತಿನ್ ಅಂಬೆಕಲ್ಲು ಮತ್ತಿತರರು ಭಾಗವಹಿಸಿದ್ದರು. ಪತ್ರಕರ್ತ ಬಾಲಕೃಷ್ಣ ಭೀಮಗುಳಿ ಸ್ವಾಗತಿಸಿ, ವಂದಿಸಿದರು.ಕೊಲ್ಲಮೊಗ್ರ ಬಂಗ್ಲೆಗುಡ್ಡೆ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ಫೆ.೧೦ರಂದು ಗ್ರಾಮ ವಾಸ್ತವ್ಯ ನಡೆಯಲಿದೆ. ಗ್ರಾಮ ವಾಸ್ತವ್ಯದ ಯಶಸ್ವಿಗೆ ವಿವಿಧ ಸಮಿತಿಗಳನ್ನು ರಚಿಸಲಾಯಿತು.

Share this article