ಕನ್ನಡಪ್ರಭ ವಾರ್ತೆ ಮೈಸೂರು
ತಮ್ಮ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಬಹುರೂಪಿ ನಾಟಕೋತ್ಸವ ಪೂರ್ವಭಾವಿ ಸಭೆಯಲ್ಲಿ ನಾಟಕೋತ್ಸವ ಪೋಸ್ಟರ್ ಬಿಡುಗಡೆಗೊಳಿಸಿ ಮಾತನಾಡಿದ ಅವರು, ಬಹುರೂಪಿ ನಾಟಕೋತ್ಸವ ಜೈಪುರ ಉತ್ಸವ, ಬೆಂಗಳೂರು ಹಬ್ಬದ ರೀತಿಯಲ್ಲಿ ಬ್ರಾಂಡಿಂಗ್ ಆಗಬೇಕು ಎಂದರು.
ಮಾ.6 ರಂದು ಜಾನಪದೋತ್ಸವ ಉದ್ಘಾಟನೆಗೂಳ್ಳಲಿದ್ದು, 7 ರಿಂದ ನಾಟಕಗಳು ಪ್ರದರ್ಶನಗೊಳ್ಳಲಿವೆ. ನಾಟಕ ಪ್ರದರ್ಶನಕ್ಕೆ 118 ಅರ್ಜಿಗಳು ಸಲ್ಲಿಕೆಯಾಗಿದ್ದು ಸಮಿತಿಯು 18 ನಾಟಕಗಳನ್ನು ಆಯ್ಕೆ ಮಾಡಿದೆ. ಸಾಮಾಜಿಕ ಸಮಸ್ಯೆಗಳಿಗೆ ಒತ್ತು ನೀಡುವುದರೊಂದಿಗೆ, ಪ್ರಯೋಗಶೀಲ ನಾಟಕಗಳಿಗೆ ಎಲ್ಲಾ ವಯೋಮಾನದವರಿಗೆ ಸಲ್ಲುವ ನಾಟಕಗಳು ಆಯ್ಕೆಯಾಗಿದ್ದು, ಕನ್ನಡ ಹಾಗೂ ಬಹುಭಾಷಾ ನಾಟಕಗಳು ಇರಲಿವೆ. ಇದರೊಂದಿಗೆ ರಾಷ್ಟ್ರೀಯ ವಿಚಾರ ಸಂಕಿರಣಗಳು ಜರುಗಲಿದ್ದು, ಕಲಾತ್ಮಕ ಹಾಗೂ ವಿದ್ವತ್ಪೂರ್ಣ ಚಿಂತನೆಗೆ ಹಚ್ಚುವ ವಿಷಯಗಳಿರಲಿ ಎಂದರು.ನಾಟಕೋತ್ಸವಕ್ಕೆ ಗಣ್ಯರು, ಚಿಂತಕರು ಆಗಮಿಸುವುದರಿಂದ ಅವರಿಗೆ ಉತ್ತಮ ವ್ಯವಸ್ಥೆ ಕಲ್ಪಿಸಿ, ಪಾಲಿಕೆಯವರು ಕಾರ್ಯಕ್ರಮ ನಡೆಯುವ ಕಲಾಮಂದಿರ ಸುತ್ತಮುತ್ತಲಿನ ಸ್ವಚ್ಚತೆಗೆ ಗಮನ ಹರಿಸಿ, ಸಾವಿರಾರು ಸಂಖ್ಯೆಯಲ್ಲಿ ಜನ ಸೇರುವುದರಿಂದ ಟ್ರಾಪಿಕ್ ಸಮಸ್ಯೆ ಆಗದಂತೆ ಹಾಗೂ ಸಾರಿಗೆ ಇಲಾಖೆಯವರು ಮುಖ್ಯ ಸ್ಥಳಗಳಿಗೆ ಬಸ್ ಸಂಚಾರ ವ್ಯವಸ್ಥೆ ಇರುವಂತೆ ಸಂಬಂಧಿಸಿದ ವಿವಿಧ ಇಲಾಖೆಗಳ ಅಧಿಕಾರಿಗಳು ತಮ್ಮ ಜವಾಬ್ದಾರಿಗಳನ್ನು ಸರಿಯಾಗಿ ನಿರ್ವಹಿಸಿ ಎಂದು ಅವರು ಸೂಚಿಸಿದರು
ಹಿರಿಯ ರಂಗಕರ್ಮಿ ಉಮೇಶ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಂಟಿ ನಿರ್ದೇಶಕ ಮಲ್ಲಿಕಾರ್ಜುನಸ್ವಾಮಿ, ಪಾಲಿಕೆ ಉಪ ಆಯುಕ್ತ ಸೋಮಶೇಖರ್, ತೋಟಗಾರಿಕೆ ಉಪ ನಿರ್ದೇಶಕ ಮಂಜುನಾಥ್ ಮೊದಲಾದವರು ಇದ್ದರು.